ಈ ವಾರ ನಿಮ್ಮ ರಾಶಿಯ ಫಲಾಫಲಗಳೇನು : ಯಾರ ಪಾಲಿಗೆ ಏನಿದೆ - ಒಳಿತು, ಕೆಡುಕಿನ ವಿವರ

KannadaprabhaNewsNetwork | Updated : Mar 16 2025, 07:31 AM IST

ಸಾರಾಂಶ

ವಿವಿಧ ರಾಶಿಗಳ ಗೋಚಾರ ಫಲ

(16-03-25 ರಿಂದ 22-03-25)

ಮೇಷರಾಶಿ ಬಂದದೆಲ್ಲ ಬರಲಿ ಎಂದು ಎದೆಗುಂದದೇ ಧೈರ್ಯವಾಗಿ ಪರಿಸ್ಥಿತಿಯನ್ನು ಎದುರಿಸುತ್ತೀರಿ.‌ ಆರರಲ್ಲಿ ಕೇತು ಎರಡನೇ ಮನೆಯಲ್ಲಿ ಗುರು ನಿಮಗೆ ಬೆಂಬಲವಾಗಿ‌ ಇದ್ದಾರೆ. ಹೀಗಾಗಿ ಬದುಕು ಅಸಹನೀಯ ಏನೂ ಆಗುವುದಿಲ್ಲ. ಹಣಕಾಸಿನ‌ ಒಳಹರಿವು ಇದ್ದರೂ ಖರ್ಚುಗಳು ಬೇಕಾದಷ್ಟು ಬರುತ್ತದೆ. ದಿಢೀರ್ ನೆಂಟರ ಆಗಮನ ಖರ್ಚು ಹೆಚ್ಚಾಗಲಿದೆ.‌ ಹೀಗಿದ್ದರೂ ಮನಸ್ಸಿಗೆ ಖುಷಿ ಸಿಗಲಿದೆ. ಸದ್ಯದ ಸ್ಥಿತಿಯಲ್ಲಿ ನೀವು ಯಾವುದಕ್ಕೂಅಂಜುವುದಿಲ್ಲ. ಇದೇ ನಿಮ್ಮ ಶಕ್ತಿಯಾಗಲಿದೆ.

ವೃಷಭರಾಶಿ: ಆರ್ಥಿಕ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಯಶಸ್ಸು ಲಭಿಸಲಿದೆ. ಲಾಭಸ್ಥಾನದಲ್ಲಿ ಶುಕ್ರ, ರಾಹು, ಸೂರ್ಯ, ಬುಧ ಸೇರಿ‌ಒಂದು ತಾತ್ಕಾಲಿಕ ರಾಜಯೋಗ ಆಗಿದೆ. ಇದರಿಂದ ಹಣಕಾಸು ಸ್ಥಿತಿ ಉತ್ತಮವಾಗಿರುತ್ತದೆ. ಯಾವುದೇ ಕೆಲಸವನ್ನು ಅವಸರದಲ್ಲಿ ಮಾಡದೇ ಇರುವುದು ಉತ್ತಮ. ಪ್ರೀತಿಯಲ್ಲಿ ಬಿದ್ದವರ ಪ್ರೇಮ ಬದುಕು ರಂಗೇರಲಿದೆ. ವ್ಯಾಪಾರಕ್ಕೆ ಹೊಸ ಯೋಜನೆಗಳನ್ನು ರೂಪಿಸುವಿರಿ. ವಾರದ ವಾರದ ಕೊನೆಯ ದಿನಗಳಲ್ಲಿ ಗಜಕೇಸರಿ ಯೋಗದಿಂದ ಅತ್ಯುತ್ತಮ ಫಲವಿದೆ.

ಮಿಥುನರಾಶಿ: ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಲಾಭವನ್ನು ಪಡೆಯುವ ಸಂಭವವಿದೆ. ಹತ್ತನೇ ಮನೆಯಲ್ಲಿ ನಾಲ್ಕು ಗ್ರಹಗಳು ಸೇರಿ ಒಂದು ರಾಜಯೋಗ ಆಗಿದೆ. ಯಶಸ್ಸನ್ನು ಗಳಿಸುತ್ತೀರಿ. ಪ್ರಭಾವಶಾಲಿ ವ್ಯಕ್ತಿಗಳ ಪರಿಚಯವಾಗಲಿದೆ. ಆದರೆ ಒತ್ತಡಗಳು, ಹಣಕಾಸಿನ ಖರ್ಚು, ನಿಂದೆ, ಅಪಾದನೆಗಳೂ ಬರುತ್ತದೆ. ಮಹಿಳೆಯರು ತಮ್ಮ ಕೆಲಸದ ಸ್ಥಳ ಮತ್ತು ಮನೆಯಲ್ಲಿ ಹೆಚ್ಚಿನ ಗೌರವ, ಖ್ಯಾತಿಯನ್ನು ಪಡೆಯುವರು. ಸಂಬಂಧಿಕರ ಸಂಪೂರ್ಣ ಬೆಂಬಲವು ದೊರಕುವುದು.

ಕಟಕರಾಶಿ: ವಾರದ ಮಧ್ಯದಲ್ಲಿ ಮಹತ್ವದ ಬದಲಾವಣೆ ಸಂಭವಿಸುತ್ತದೆ. ಇದು ನಿಮಗೆ ಏಳಿಗೆ, ಅಭಿವೃದ್ಧಿಗೆ ಸೂಚಕವಾಗಿರುತ್ತದೆ. ನಿಮಗೆ ಉತ್ಸಾಹ ಕೊಡುತ್ತದೆ. ಕೌಟುಂಬಿಕ ಜೀವನದಲ್ಲಿ ಪ್ರೀತಿ ಮತ್ತು ವಿಶ್ವಾಸವು ಹೆಚ್ಚಾಗಬಹುದು. ವಿದ್ಯಾರ್ಥಿಗಳು ಯಶಸ್ಸನ್ನು ಸಾಧಿಸಲು ಪರಿಶ್ರಮ ಪಡಬೇಕಾಗಬಹುದು. ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಿ. ಗುರು ತುಂಬಾ ಶುಭಫಲಗಳನ್ನು ಕೊಡುತ್ತಾನೆ. ಅಷ್ಠಮಶನಿಯ ಪ್ರಭಾವ ಕಡಿಮೆಯಾಗಿ ಶೀಘ್ರ ಬಿಡುಗಡೆ ಸಿಗಲಿದೆ. 

ಸಿಂಹರಾಶಿ: ಕೆಲಸದಲ್ಲಿ ಅಡಚಣೆಗಳು ಹೆಚ್ಚಾಗಬಹುದು. ಉದ್ಯಮಿಗಳು ಬಾಕಿ ಹಣವನ್ನು ಮರಳಿ ಪಡೆಯುವಲ್ಲಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಕೆಲಸದ ಸ್ಥಳದಲ್ಲಿ ವಾದಗಳನ್ನು ತಪ್ಪಿಸಿ. ಗುರುಬಲ ಇಲ್ಲದ ನಿಮಗೆ ಬಿಕ್ಕಟ್ಟು ಎದುರಾಗಬಹುದು. ಇದರಿಂದ ಬೆಳವಣಿಗೆಗೆ ಅಡ್ಡಿ ಉಂಟಾಗಬಹುದು. ಸಂಗಾತಿಯ ಮಾತುಗಳನ್ನು ನಿರ್ಲಕ್ಷಿಸಬೇಡಿ. ವೃತ್ತಿಪರ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳಿ. ಕುಜನಿಂದ ಭೂಮಿಲಾಭ‌ ಇದೆ. 

ಕನ್ಯಾರಾಶಿ: ನಿಮ್ಮ ಸಂಗಾತಿಯೊಂದಿಗೆ ತಾಳ್ಮೆಯನ್ನು ಕಾಪಾಡಿಕೊಳ್ಳಿ. ಕೋಪವನ್ನು ತಪ್ಪಿಸಿ ಮತ್ತು ಸಂಗಾತಿಯ ಅಭಿಪ್ರಾಯಗಳನ್ನು ಗೌರವಿಸಿ. ಪರೀಕ್ಷೆಯಲ್ಲಿ ಯಶಸ್ಸನ್ನು ಸಾಧಿಸಲು ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮದ ಅಗತ್ಯವಿದೆ. ಉಳಿದಂತೆ

ಗುರು ಅನೇಕ ಭಾಗ್ಯಗಳನ್ನು ಕೊಡುತ್ತಾನೆ. ಹೊಟ್ಟೆಗೆ ಸಂಬಂಧ ಪಟ್ಟ, ಬ್ಯಾಕ್ಟೀರಿಯಾಗೆ ಸಂಬಂಧಿಸಿದ ತೊಂದರೆಗಳು ಎದುರಾಗುತ್ತದೆ. ವ್ಯವಹಾರಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಬಹಳ ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ. 

ತುಲಾರಾಶಿ: ವೈವಾಹಿಕ ಜೀವನದಲ್ಲಿ ಊಹಿಸಲಸಾಧ್ಯವಾದ ಸಮಸ್ಯೆಗಳು ಎದುರಾಗಬಹುದು. ತಾಳ್ಮೆಯಿಂದ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿ. ನಿಮ್ಮ ಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಿರಿ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ, ಹಣದ ವಿಷಯದಲ್ಲಿ ವಿವಾದಗಳು ಉಂಟಾಗಬಹುದು. ನಿಮ್ಮ ಕೋಪವನ್ನು ನಿಯಂತ್ರಿಸಿ. ಆರೋಗ್ಯ ಹಾಗೂ ಮನಃಶಾಂತಿ ಕಳೆದುಕೊಂಡು ಒದ್ದಾಡುತ್ತಿದ್ದೀರಿ. ನೌಕರಿಯಲ್ಲೂ ಕಷ್ಟ ಇದೆ. ಒತ್ತಡಗಳು ಹೈರಾಣ ಮಾಡುತ್ತವೆ.‌ 

ವೃಶ್ಚಿಕರಾಶಿ: ಹೊಸ ವ್ಯವಹಾರವನ್ನು ಪ್ರಾರಂಭಿಸಲು ಮುಂದಾಗುವಿರಿ. ಉದ್ಯೋಗಸ್ಥರು ಕೆಲಸದಲ್ಲಿ ಸವಾಲುಗಳನ್ನು ಎದುರಿಸಬೇಕಾಗಬಹುದು. ಪಾಲುದಾರರೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಎದುರಾಗಬಹುದು. ಭಾವನೆಗಳನ್ನು ನಿಮ್ಮ ಸಂಗಾತಿಯೊಂದಿಗೆ ಹಂಚಿಕೊಳ್ಳಲು ಹಿಂಜರಿಯಬೇಡಿ, ಅವರ ಅಭಿಪ್ರಾಯಗಳನ್ನು ಗೌರವಿಸಿ. ವಾರದ ಮಧ್ಯದಲ್ಲಿ ನಿಮ್ಮ ರಾಶಿಯಲ್ಲೇ ಗಜಕೇಸರಿ ಯೋಗ ಆಗುತ್ತದೆ. ಇದರಿಂದ ನಿಮಗೆ ಶುಭಫಲಗಳು ಇವೆ. ಬೆಂಕಿಯಿಂದ ದೂರವಿರಿ.

ಧನಸ್ಸುರಾಶಿ: ಹಣಕಾಸಿನ ವಿಷಯಗಳಲ್ಲಿ ಕೆಲಸಗಳು ಸಲೀಸಾಗಿ ಆಗುತ್ತವೆ. ವ್ಯಾಪಾರ ವಿಸ್ತರಣೆಗೆ ಹೊಸ ಅವಕಾಶ ಸಿಗಬಹುದು. ಕೆಲಸದ ಸವಾಲುಗಳು ಹೆಚ್ಚಾಗಬಹುದು. ಕಚೇರಿಯಲ್ಲಿ ನಿಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸಲು ಪ್ರಯತ್ನಿಸಿ. ಹೆಚ್ಚುವರಿ ಜವಾಬ್ದಾರಿಗಳಿಗೆ ಸಿದ್ಧರಾಗಿರಿ. ಆರೋಗ್ಯಕ್ಕೆ ತೊಂದರೆ ಇದೆ. ಮಾನಸಿಕ ಕಿರಿಕಿರಿಯೂ ಇರುತ್ತದೆ.‌ ಸಾಲಗಾರರ ಕಾಟ, ಗಂಡಹೆಂಡಿರ ನಡುವೆ ವೈಮನಸ್ಸು ಹಣದ ಅಡಚಣೆ ಮೊದಲಾದ ಸಮಸ್ಯೆಗಳು ಎದುರಾಗುತ್ತೆ. 

ಮಕರರಾಶಿ: ಹೊಸ ಅವಕಾಶಗಳು ಹುಡುಕಿ ಬರುತ್ತದೆ. ಭಾಗ್ಯದ ಬಾಗಿಲು ತೆರೆಯುತ್ತದೆ. ಉದ್ಯಮಿಗಳು ತಮ್ಮ ವ್ಯಾಪಾರವನ್ನು ವೃದ್ಧಿಸಲು ಹೊಸ ಅವಕಾಶಗಳನ್ನು ಪಡೆಯಬಹುದು. ಆದರೆ ಕೆಲಸಗಳಿಂದ ಹೆಚ್ಚು ಒತ್ತಡವನ್ನು ತೆಗೆದುಕೊಳ್ಳಬೇಡಿ. ನಿಮ್ಮ ಮಾನಸಿಕ ಆರೋಗ್ಯದ ಕಡೆ ಗಮನ ಕೊಡಿ. ರಾಜಯೋಗವಿದೆ. ಇದು ಆಪತ್ತುಗಳಿಂದ ಕಾಪಾಡುತ್ತದೆ. ಕೂದಲೆಳೆಯ ಅಂಚಿನಲ್ಲಿ ಅಪಾಯದಿಂದ ಪಾರಾಗುತ್ತೀರಿ. ಹಣದ ಹರಿವು‌ ಉತ್ತಮವಾಗುತ್ತದೆ.

ಕುಂಭರಾಶಿ: ನಿಮ್ಮ ಸಾಮಾಜಿಕ ಸ್ಥಾನಮಾನ ಹೆಚ್ಚಾಗಲಿದೆ. ವ್ಯಾಪಾರದಲ್ಲಿ ಲಾಭಕ್ಕೆ ಹೊಸ ಅವಕಾಶಗಳು ದೊರೆಯಲಿವೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಬಹುದು. ಉತ್ತಮ ಪ್ಯಾಕೇಜ್‌ನೊಂದಿಗೆ ಹೊಸ ಉದ್ಯೋಗದ ಪ್ರಸ್ತಾಪ ಪಡೆಯಬಹುದು. ಆದರೆ, ಯಾವುದೇ ಕೆಲಸದಲ್ಲಿ ಹೆಚ್ಚು ಆತುರಪಡಬೇಡಿ. ಬಹಳ ಏರಿಳಿತಗಳನ್ನು ನೋಡಿದ್ದೀರಿ. ಇನ್ನೇನು‌ ಪ್ರಪಾತಕ್ಕೆ ಬಿದ್ದೇಬಿಡ್ತೀರಿ ಎನ್ನುವುದರಲ್ಲಿ ಕಾಣದ ಶಕ್ತಿಯೊಂದು ಸರಕ್ಕನೆ ಬಂದು ಕಾಪಾಡಿದೆ. ಇನ್ನೇನು ನಿಮ್ಮ ಭಾಗ್ಯದ ಬಾಗಿಲು ತೆರೆಯುತ್ತಿದೆ.

ಮೀನರಾಶಿ: ಕೆಲಸದ ನಿಮಿತ್ತ ದೂರ ಪ್ರಯಾಣ. ಕೆಲಸದ ಸ್ಥಳದಲ್ಲಿ ಸವಾಲುಗಳು ಎದುರಾಗಬಹುದು. ಗುರಿ ಸಾಧಿಸಲು ಹೊಸ ಯೋಜನೆಯನ್ನು ಮಾಡಿ. ಕಾರ್ಯಕ್ಷಮತೆ ಸುಧಾರಿಸಲು ಪ್ರಯತ್ನಿಸಿ. ಹಣಕಾಸಿನ ವಿಷಯಗಳಲ್ಲಿ ಯಾರನ್ನೂ ಕುರುಡಾಗಿ ನಂಬಬೇಡಿ. ಗಂಟಲು ನೋವು ಅಥವಾ ಶೀತದಿಂದ ಬಳಲಬಹುದು.ಕಣ್ಣಿನ ಶಸ್ತ್ರಚಿಕಿತ್ಸೆ ಆಗಬಹುದು. ಆರೋಗ್ಯದ ವಿಷಯದಲ್ಲಿ ಜಾಗ್ರತೆಯಿಂದ ಇರಿ. ನಿಮ್ಮ ಪ್ರಾಮಾಣಿಕತೆಗೆ ಶ್ಲಾಘನೆ ವ್ಯಕ್ತವಾಗಬಹುದು. ಸಮಾಧಾನ ಸಿಗಲಿದೆ.

Share this article