ಮಸ್ಕ್‌ ಖರೀದಿಸಿದ 1 ವರ್ಷದಲ್ಲಿ ಟ್ವೀಟರ್‌ ಮೌಲ್ಯ ಅರ್ಧ ಕುಸಿತ

KannadaprabhaNewsNetwork | Published : Nov 1, 2023 1:00 AM

ಸಾರಾಂಶ

ವಿಶ್ವದ ಅತ್ಯಂತ ಬೃಹತ್‌ ಚುಟುಕು ಸಾಮಾಜಿಕ ಜಾಲತಾಣಗಳಲ್ಲಿ ಒಂದಾಗಿರುವ ಎಕ್ಸ್‌ (ಟ್ವೀಟರ್‌)ನ ಮೌಲ್ಯ ಕಳೆದ ಒಂದು ವರ್ಷದಲ್ಲಿ ಶೇ.50ರಷ್ಟು ಭಾರೀ ಇಳಿಕೆ ಕಂಡಿದೆ.
ಕಂಪನಿ ಮೌಲ್ಯ 3.60 ಲಕ್ಷ ಕೋಟಿ ರು.ನಿಂದ 1.55 ಲಕ್ಷ ಕೋಟಿ ರು.ಗೆ ಇಳಿಕೆ ನವದೆಹಲಿ: ವಿಶ್ವದ ಅತ್ಯಂತ ಬೃಹತ್‌ ಚುಟುಕು ಸಾಮಾಜಿಕ ಜಾಲತಾಣಗಳಲ್ಲಿ ಒಂದಾಗಿರುವ ಎಕ್ಸ್‌ (ಟ್ವೀಟರ್‌)ನ ಮೌಲ್ಯ ಕಳೆದ ಒಂದು ವರ್ಷದಲ್ಲಿ ಶೇ.50ರಷ್ಟು ಭಾರೀ ಇಳಿಕೆ ಕಂಡಿದೆ. ವಿಶ್ವದ ನಂ.1 ಶ್ರೀಮಂತ ಎಲಾನ್‌ ಮಸ್ಕ್‌ ಕಳೆದ ವರ್ಷ 3.60 ಲಕ್ಷ ಕೋಟಿ ರು.ಗೆ ಟ್ವೀಟರ್‌ ಖರೀದಿ ಮಾಡಿದ್ದರು. ಖರೀದಿ ಬಳಿಕ ಅದರಲ್ಲಿ ಅಮೂಲಾಗ್ರ ಬದಲಾವಣೆಗಳನ್ನು ತಂದಿದ್ದರು. ಈ ಪೈಕಿ ಬಹುತೇಕ ನಿರ್ಧಾರಗಳು ಬಳಕೆದಾರರ ಟೀಕೆಗೆ, ವಿವಾದಕ್ಕೆ ಗುರಿಯಾಗಿತ್ತು. ವಿವಾದದ ಹಿನ್ನೆಲೆಯಲ್ಲಿ ಬಹುತೇಕ ಜಾಹೀರಾತುದಾರರು ಕಂಪನಿಯಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಆದಾಯ ಭಾರೀ ಪ್ರಮಾಣದಲ್ಲಿ ಕುಸಿದಿದೆ.

Share this article