ಒಲಿಂಪಿಕ್ ಸಂಸ್ಥೆ ಜತೆ ಯೆಸ್ ಬ್ಯಾಂಕ್ ಪಾಲುದಾರಿಕೆ: ಏಷ್ಯನ್ ಗೇಮ್ಸ್‌ಗೆ ಭಾರತ ತಂಡಕ್ಕೆ ಬಲ

KannadaprabhaNewsNetwork |  
Published : Sep 29, 2026, 01:15 AM IST
Yes Bank

ಸಾರಾಂಶ

ಯೆಸ್ ಬ್ಯಾಂಕ್, ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ಜತೆಗಿನ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸಿದ್ದು, ಅಧಿಕೃತ ರಿಟೇಲ್ ಬ್ಯಾಂಕಿಂಗ್ ಪಾಲುದಾರನಾಗಿ ನಿಂತಿದೆ. ಈ ಕುರಿತ ಮಾಹಿತಿ ಇಲ್ಲಿದೆ.

ಬೆಂಗಳೂರು : ದೇಶದ ಪ್ರಮುಖ ಖಾಸಗಿ ಬ್ಯಾಂಕ್‌ಗಳಲ್ಲಿ ಒಂದಾದ ಯೆಸ್ ಬ್ಯಾಂಕ್, ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ಜತೆಗಿನ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸಿದ್ದು, ಭಾರತೀಯ ಕ್ರೀಡಾಪಟುಗಳ ಬೆಂಬಲಕ್ಕೆ ಅಧಿಕೃತ ರಿಟೇಲ್ ಬ್ಯಾಂಕಿಂಗ್ ಪಾಲುದಾರನಾಗಿ ನಿಂತಿದೆ. 2026ರಲ್ಲಿ ಜರುಗುವ 4 ಪ್ರಮುಖ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತ ತಂಡಕ್ಕೆ ಯೆಸ್ ಬ್ಯಾಂಕ್ ನೆರವು ನೀಡಲಿದೆ.

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್

ಸದ್ಯ ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್, ಮುಂಬರುವ ಯೂತ್ ಒಲಿಂಪಿಕ್ ಗೇಮ್ಸ್, ಏಷ್ಯನ್ ಇಂಡೋರ್ ಮತ್ತು ಮಾರ್ಷಲ್ ಆರ್ಟ್ಸ್ ಗೇಮ್ಸ್ ಹಾಗೂ ಇತ್ತೀಚೆಗೆ ಮುಕ್ತಾಯಗೊಂಡ ಕಾಮನ್‌ವೆಲ್ತ್ ಗೇಮ್ಸ್‌ಗಳಲ್ಲಿ ಸ್ಪರ್ಧಿಸುವ ಭಾರತೀಯ ಅಥ್ಲೀಟ್‌ಗಳಿಗೆ ಈ ಪಾಲುದಾರಿಕೆಯು ಶ್ರೀರಕ್ಷೆಯಾಗಲಿದೆ. 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲೂ ಟೀಮ್ ಇಂಡಿಯಾಗೆ ಬ್ಯಾಂಕಿಂಗ್ ಪಾಲುದಾರನಾಗಿದ್ದ ಯೆಸ್ ಬ್ಯಾಂಕ್, ಜಾಗತಿಕ ಮಟ್ಟದಲ್ಲಿ ಭಾರತೀಯ ಕ್ರೀಡಾ ಪ್ರತಿಭೆಗಳನ್ನು ಸಬಲೀಕರಣಗೊಳಿಸುವ ತನ್ನ ಬದ್ಧತೆಯನ್ನು ಮುಂದುವರಿಸಿದೆ.

ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸುತ್ತಿರುವ ಕ್ರೀಡಾಪಟುಗಳ ಛಲ ಮತ್ತು ಹೋರಾಟದ ಮನೋಭಾವವನ್ನು ಗೌರವಿಸಲು ಬ್ಯಾಂಕ್ ದೇಶಾದ್ಯಂತ ಸಮಗ್ರ (360 ಡಿಗ್ರಿ) ಮಲ್ಟಿಮೀಡಿಯಾ ಪ್ರಚಾರ ಅಭಿಯಾನವನ್ನು ಹಮ್ಮಿಕೊಂಡಿದೆ. 7 ಪ್ರಮುಖ ಭಾಷೆಗಳ 25ಕ್ಕೂ ಹೆಚ್ಚು ಟಿವಿ ವಾಹಿನಿಗಳು, ಮುದ್ರಣ ಮಾಧ್ಯಮ, ಪ್ರಮುಖ ಸ್ಥಳಗಳಲ್ಲಿ ಹೊರಾಂಗಣ ಜಾಹೀರಾತು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಡಿಜಿಟಲ್ ಪ್ರಚಾರದ ಮೂಲಕ ಕ್ರೀಡಾಪಟುಗಳಲ್ಲಿ ಹುಮ್ಮಸ್ಸು ತುಂಬುವ ಕೆಲಸ ಮಾಡಲಾಗುತ್ತಿದೆ.

ಸಹಭಾಗಿತ್ವದ ಕುರಿತು ಮಾತನಾಡಿದ ಯೆಸ್ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ

ಸಹಭಾಗಿತ್ವದ ಕುರಿತು ಮಾತನಾಡಿದ ಯೆಸ್ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ವಿನಯ್ ಎಂ. ತೋನ್ಸೆ, ‘ಕ್ರೀಡೆಯು ಶಿಸ್ತು, ಸ್ಥೈರ್ಯ ಮತ್ತು ಒಗ್ಗಟ್ಟಿನ ಸಂಕೇತ. ಇದು ಕೇವಲ ವೈಯಕ್ತಿಕ ಸಾಧನೆಗೆ ಮಾತ್ರವಲ್ಲದೆ ರಾಷ್ಟ್ರದ ಪ್ರಗತಿಗೂ ಪ್ರೇರಣೆ ನೀಡುತ್ತದೆ. ಕೋಟ್ಯಂತರ ಭಾರತೀಯರ ಕನಸುಗಳನ್ನು ಹೊತ್ತು ಕಣಕ್ಕಿಳಿಯುತ್ತಿರುವ ನಮ್ಮ ಅಥ್ಲೀಟ್‌ಗಳಿಗೆ ಬೆಂಬಲ ನೀಡಲು ನಾವು ಹೆಮ್ಮೆಪಡುತ್ತೇವೆ’ ಎಂದರು.

ಬ್ಯಾಂಕ್‌ನ ಮುಖ್ಯ ಕಾರ್ಯತಂತ್ರ ಮತ್ತು ಮಾರ್ಕೆಟಿಂಗ್ ಅಧಿಕಾರಿ ನಿಪುಣ್ ಕೌಶಲ್ ಮಾತನಾಡಿ, ‘ಜಾಗತಿಕ ವೇದಿಕೆಯಲ್ಲಿ ಶ್ರೇಷ್ಠತೆ ಮೆರೆಯುತ್ತಿರುವ ಭಾರತೀಯ ಕ್ರೀಡಾಪಟುಗಳ ಪರಿಶ್ರಮವನ್ನು ಗೌರವಿಸುವುದು ಮತ್ತು ಅವರೊಂದಿಗೆ ಇಡೀ ದೇಶವನ್ನು ಒಗ್ಗೂಡಿಸುವುದು ನಮ್ಮ ಅಭಿಯಾನದ ಮುಖ್ಯ ಉದ್ದೇಶ’ ಎಂದು ತಿಳಿಸಿದರು.

PREV
Read more Articles on

Recommended Stories

ಹೃದಯವಂತರ ಯೋಗ ಸೆಪ್ಟೆಂಬರ್ 29 ವಿಶ್ವ ಹೃದಯ ದಿನ
ಹೃದಯ ತೊಂದರೆಗಳು ಮತ್ತು ದಂತ ಆರೋಗ್ಯ - ವಿಶ್ವ ಹೃದಯ ದಿನ- ಸೆಪ್ಟೆಂಬರ್ 29