ಪ್ಯಾರಿಸ್: ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಂ ಟೆನಿಸ್ ಟೂರ್ನಿಯಲ್ಲಿ 2ನೇ ಶ್ರೇಯಾಂಕಿತೆ ಬೆಲಾರಸ್‌ನ ಅರೈನಾ ಸಬಲೆಂಕಾ, 3ನೇ ಶ್ರೇಯಾಂಕಿತೆ ಅಮೆರಿಕದ ಕೊಕೊ ಗಾಫ್, 4ನೇ ಶ್ರೇಯಾಂಕಿತೆ ಕಜಕಸ್ತಾನದ ಎಲೈನಾ ರಬೈಕೆನಾ ಶುಭಾರಂಭ ಮಾಡಿದ್ದಾರೆ. ಮಹಿಳಾ ಸಿಂಗಲ್ಸ್ ಮೊದಲ ಸುತ್ತಿನಲ್ಲಿ 2 ಬಾರಿ ಗ್ರ್ಯಾನ್ ಸ್ಲಾಂ ವಿಜೇತೆ ಸಬಲೆಂಕಾ, ರಷ್ಯಾದ ಎರಿಕಾ ಆ್ಯಂಡ್ರೀವಾ ವಿರುದ್ಧ 6-1, 6-2 ಸೆಟ್‌ಗಳಲ್ಲಿ ಸುಲಭ ಜಯ ಸಾಧಿಸಿದರು.
ಇನ್ನು ಪುರುಷರ ಮೊದಲ ಸುತ್ತಿನಲ್ಲಿ 5ನೇ ಶ್ರೇಯಾಂಕಿತ ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ ಜರ್ಮನಿಯ ಡೊಮಿನಿಕ್ ಕೊಫರ್ ವಿರುದ್ಧ 6-3, 6-4, 5-7, 6-3ರಲ್ಲಿ ಜಯಿಸಿದರೆ, 7ನೇ ಶ್ರೇಯಾಂಕಿತ ನಾರ್ವೆಯ ಕ್ಯಾಸ್ಪರ್ ರುಡ್ ಬ್ರೆಜಿಲ್‌ನ ಫಿಲಿಪೆ ಆ್ಯಲ್ವೆಸ್ ವಿರುದ್ಧ 6-3, 6-4, 6-3ರಲ್ಲಿ ಗೆದ್ದು 2ನೇ ಸುತ್ತಿಗೇರಿದರು.