ವೈಟ್‌ವಾಶ್‌ ತಪ್ಪಿಸುತ್ತಾ ಭಾರತ? ಇಂದು ಆಸ್ಟ್ರೇಲಿಯಾ ವಿರುದ್ಧ 3ನೇ ಏಕದಿನ ಪಂದ್ಯ

Published : Oct 25, 2025, 01:44 PM IST
India vs Australia Series 2025

ಸಾರಾಂಶ

ತನ್ನದೇ ಎಡವಟ್ಟುಗಳಿಂದ ಆರಂಭಿಕ 2 ಪಂದ್ಯಗಳಲ್ಲಿ ಸೋತು ಸರಣಿ ಕೈಚೆಲ್ಲಿರುವ ಭಾರತ ತಂಡ, ಶನಿವಾರ ಆಸ್ಟ್ರೇಲಿಯಾ ವಿರುದ್ಧ 3ನೇ ಹಾಗೂ ಕೊನೆ ಏಕದಿನ ಪಂದ್ಯದಲ್ಲಿ ಆಡಲಿದೆ. ವೈಟ್‌ವಾಶ್‌ ಮುಖಭಂಗದಿಂದ ಪಾರಾಗಲು ಭಾರತಕ್ಕೆ ಈ ಪಂದ್ಯದಲ್ಲಿ ಗೆಲುವು ಅಗತ್ಯ.

 ಸಿಡ್ನಿ: ತನ್ನದೇ ಎಡವಟ್ಟುಗಳಿಂದ ಆರಂಭಿಕ 2 ಪಂದ್ಯಗಳಲ್ಲಿ ಸೋತು ಸರಣಿ ಕೈಚೆಲ್ಲಿರುವ ಭಾರತ ತಂಡ, ಶನಿವಾರ ಆಸ್ಟ್ರೇಲಿಯಾ ವಿರುದ್ಧ 3ನೇ ಹಾಗೂ ಕೊನೆ ಏಕದಿನ ಪಂದ್ಯದಲ್ಲಿ ಆಡಲಿದೆ. ವೈಟ್‌ವಾಶ್‌ ಮುಖಭಂಗದಿಂದ ಪಾರಾಗಲು ಭಾರತಕ್ಕೆ ಈ ಪಂದ್ಯದಲ್ಲಿ ಗೆಲುವು ಅಗತ್ಯ. ಆದರೆ ಸಿಡ್ನಿ ಪಂದ್ಯ ಮಹತ್ವ ಸೃಷ್ಟಿಸಿದ್ದು ಭಾರತದ ದಿಗ್ಗಜ ಕ್ರಿಕೆಟಿಗರಾದ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಕಾರಣಕ್ಕೆ. ಈ ಇಬ್ಬರಿಗೆ ಇದು ಆಸ್ಟ್ರೇಲಿಯಾದಲ್ಲಿ ಕೊನೆ ಅಂತಾರಾಷ್ಟ್ರೀಯ ಪಂದ್ಯವಾಗಿರಲಿದೆ.

ರೋಹಿತ್‌ ಮೊದಲ ಬಾರಿ ಆಸ್ಟ್ರೇಲಿಯಾದಲ್ಲಿ ಸರಣಿ ಆಡಿದ್ದು 2007-08ರಲ್ಲಿ. ಕೊಹ್ಲಿ ತಮ್ಮ ಚೊಚ್ಚಲ ಆಸೀಸ್‌ ಸರಣಿಯನ್ನು 2011-12ರಲ್ಲಿ ಆಡಿದ್ದರು. ಇನ್ನು ಮುಂದಿನ 2 ವರ್ಷಗಳ ಕಾಲ ಭಾರತಕ್ಕೆ ಆಸೀಸ್‌ ನೆಲದಲ್ಲಿ ಸರಣಿಯಿಲ್ಲ. ಹೀಗಾಗಿ, ನಿವೃತ್ತಿ ಅಂಚಿನಲ್ಲಿರುವ ಕೊಹ್ಲಿ, ರೋಹಿತ್‌ ಪಾಲಿಗೆ ಇದುವೇ ಕೊನೆಯ ಆಸೀಸ್‌ ಸರಣಿ.

ಕೊಹ್ಲಿ ಸರಣಿಯ ಎರಡೂ ಪಂದ್ಯದಲ್ಲಿ ಸೊನ್ನೆಗೆ ಔಟಾಗಿದ್ದರೆ, ರೋಹಿತ್‌ 2ನೇ ಪಂದ್ಯದಲ್ಲಿ ಅಮೋಘ ಆಟವಾಡಿದ್ದರು. ಸಿಡ್ನಿ ಕ್ರೀಡಾಂಗಣದಲ್ಲಿ, ತಮ್ಮ ಅಭಿಮಾನಿಗಳ ಮುಂದೆ ಇವರಿಬ್ಬರು ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಎಂಬ ಕುತೂಹಲವಿದೆ. ಜೊತೆಗೆ, ಮಹತ್ವದ ಸರಣಿಯಲ್ಲಿ ಭಾರತವನ್ನು ವೈಟ್‌ವಾಶ್‌ ಮುಖಭಂಗದಿಂದ ಪಾರು ಮಾಡುವ ಹೊಣೆಗಾರಿಕೆ ಇದೆ.

ತಂಡದಲ್ಲಿ ಬದಲಾವಣೆ?:

ಈಗಾಗಲೇ ಸರಣಿ ಸೋತಿರುವುದರಿಂದ ಭಾರತ ಕೊನೆ ಪಂದ್ಯದಲ್ಲಿ ಕೆಲ ಬದಲಾವಣೆ ಮಾಡುವ ನಿರೀಕ್ಷೆಯಿದೆ. ಪ್ರಮುಖವಾಗಿ ಬೌಲಿಂಗ್‌ ವಿಭಾಗದಲ್ಲಿ ಸರ್ಜರಿ ನಡೆಯಬಹುದು. ಮೊದಲೆರಡು ಪಂದ್ಯಗಳಲ್ಲಿ ಕುಲ್ದೀಪ್‌ ಯಾದವ್‌ರನ್ನು ಆಡಿಸದೆ ಇರುವ ಕ್ರಮ ಭಾರೀ ಟೀಕೆಗೆ ಕಾರಣವಾಗಿದ್ದು, ಈ ಪಂದ್ಯದಲ್ಲಾದರೂ ಕುಲ್ದೀಪ್‌ರನ್ನು ಆಡಿಸಲು ನಾಯಕ, ಕೋಚ್‌ ಮನಸ್ಸು ಮಾಡುತ್ತಾರೆಯೇ ಎಂಬ ಕುತೂಹಲವಿದೆ.

ವಿರಾಟ್‌ ಅಂ.ರಾ. ವೃತ್ತಿ

ಬದುಕಿನ ಕೊನೆ ಪಂದ್ಯ?

36 ವರ್ಷದ ವಿರಾಟ್‌ ಈಗಾಗಲೇ ಟೆಸ್ಟ್‌, ಅಂ.ರಾ. ಟಿ20ಗೆ ನಿವೃತ್ತಿ ಘೋಷಿಸಿದ್ದು, ಏಕದಿನ ಮಾತ್ರ ಆಡುತ್ತಿದ್ದಾರೆ. ಕೆಲ ವರದಿಗಳ ಪ್ರಕಾರ, ಆಸ್ಟ್ರೇಲಿಯಾ ವಿರುದ್ಧ 3ನೇ ಏಕದಿನ ಕೊಹ್ಲಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಬದುಕಿನ ಕೊನೆ ಪಂದ್ಯವಾಗಿರಬಹುದು ಎನ್ನಲಾಗುತ್ತಿದೆ. 2027ರ ಏಕದಿನ ವಿಶ್ವಕಪ್‌ ಆಡುವ ಬಗ್ಗೆ ಕೊಹ್ಲಿ ಒಲವು ಹೊಂದಿದ್ದರಾದರೂ, ಅಲ್ಲಿವರೆಗೂ ಅವರು ಭಾರತ ತಂಡದಲ್ಲಿ ಮುಂದುವರಿಯುವ ಸಾಧ್ಯತೆ ಕಡಿಮೆ. ಒಂದು ವೇಳೆ ಆಸೀಸ್‌ ಸರಣಿ ಬಳಿಕ ತಂಡದಲ್ಲಿದ್ದರೂ, ಮುಂದಿನ ವರ್ಷವೇ ನಿವೃತ್ತಿಯಾಗಬಹುದು ಎಂದೂ ವಿಶ್ಲೇಷಿಸಲಾಗುತ್ತಿದೆ

ಚೊಚ್ಚಲ ಕ್ಲೀನ್‌ಸ್ವೀಪ್

ಮೇಲೆ ಆಸೀಸ್‌ ಕಣ್ಣು

ಭಾರತ ವಿರುದ್ಧ ಆಸೀಸ್‌ 4 ದಶಕಗಳಿಂದ ದ್ವಿಪಕ್ಷೀಯ ಏಕದಿನ ಸರಣಿ ಆಡುತ್ತಿದೆ. ಆದರೆ ಒಮ್ಮೆಯೂ ಸರಣಿಯ ಎಲ್ಲಾ ಪಂದ್ಯಗಳನ್ನು ಗೆದ್ದು ಕ್ಲೀನ್‌ಸ್ವೀಪ್‌ ಮಾಡಿಲ್ಲ. 1984-85ರಲ್ಲಿ 5 ಪಂದ್ಯಗಳ ಸರಣಿಯಲ್ಲಿ ಆಸೀಸ್‌ 3-0 ಅಂತರದಲ್ಲಿ ಗೆದ್ದಿತ್ತು. ಉಳಿದಂತೆ ಯಾವ ಸರಣಿಯಲ್ಲೂ ಎಲ್ಲಾ ಪಂದ್ಯ ಗೆದ್ದಿಲ್ಲ.

PREV
Read more Articles on

Recommended Stories

ಪಾಕ್‌ ನಾಯಕ ರಿಜ್ವಾನ್‌ ವಜಾ : ಅತಿಯಾದ ಧಾರ್ಮಿಕತೆ ಕಾರಣ?
ಇಂದು ಆಸೀಸ್‌ vs ಇಂಗ್ಲೆಂಡ್‌ ಹೈವೋಲ್ಟೇಜ್‌ ಸೆಣಸು