ಇಂದು ಆಸೀಸ್‌ vs ಇಂಗ್ಲೆಂಡ್‌ ಹೈವೋಲ್ಟೇಜ್‌ ಸೆಣಸು

KannadaprabhaNewsNetwork |  
Published : Oct 22, 2025, 01:03 AM IST
ಮಹಿಳಾ  | Kannada Prabha

ಸಾರಾಂಶ

ಈ ಬಾರಿ ಐಸಿಸಿ ಮಹಿಳಾ ವಿಶ್ವಕಪ್‌ನಲ್ಲಿ ಬುಧವಾರ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ ತಂಡಗಳು ಪರಸ್ಪರ ಸೆಣಸಾಡಲಿವೆ. ಎರಡೂ ತಂಡಗಳು ತಲಾ 5 ಪಂದ್ಯಗಳನ್ನಾಡಿದ್ದು, 4ರಲ್ಲಿ ಜಯಗಳಿಸಿವೆ. ಈ ಪಂದ್ಯದಲ್ಲಿ ಗೆದ್ದ ತಂಡ ಅಗ್ರಸ್ಥಾನ ಭದ್ರಪಡಿಸಿಕೊಳ್ಳಲಿದೆ.

ಇಂದೋರ್‌: ಈ ಬಾರಿ ಐಸಿಸಿ ಮಹಿಳಾ ವಿಶ್ವಕಪ್‌ನಲ್ಲಿ ಬುಧವಾರ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ ತಂಡಗಳು ಪರಸ್ಪರ ಸೆಣಸಾಡಲಿವೆ. ಎರಡೂ ತಂಡಗಳು ತಲಾ 5 ಪಂದ್ಯಗಳನ್ನಾಡಿದ್ದು, 4ರಲ್ಲಿ ಜಯಗಳಿಸಿವೆ. ಈ ಪಂದ್ಯದಲ್ಲಿ ಗೆದ್ದ ತಂಡ ಅಗ್ರಸ್ಥಾನ ಭದ್ರಪಡಿಸಿಕೊಳ್ಳಲಿದೆ.

ಸದ್ಯ ಆಸೀಸ್‌ +1.818 ನೆಟ್‌ ರನ್‌ರೇಟ್‌ನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಇಂಗ್ಲೆಂಡ್‌(+1.490) 2ನೇ ಸ್ಥಾನದಲ್ಲಿದೆ. ಈಗಾಗಲೇ ಎರಡೂ ತಂಡಗಳು ಸೆಮಿಫೈನಲ್‌ಗೇರಿದ್ದರೂ, ಅಗ್ರ ಸ್ಥಾನಕ್ಕಾಗಿ ಪೈಪೋಟಿಯಲ್ಲಿವೆ. ಅಲ್ಲದೆ, ಬದ್ಧವೈರಿಗಳಾದ ಕಾರಣ ಪಂದ್ಯದ ಬಗ್ಗೆ ಕುತೂಹಲ ಹೆಚ್ಚಿದ್ದು, ಭಾರೀ ಪೈಪೋಟಿ ಕಂಡು ಬರುವ ನಿರೀಕ್ಷೆಯಿದೆ.

ಹೀಲಿ ಅಲಭ್ಯ:

ಗಾಯಕ್ಕೆ ತುತ್ತಾಗಿರುವ ಆಸ್ಟ್ರೇಲಿಯಾ ನಾಯಕಿ ಅಲೀಸಾ ಹೀಲಿ ಇಂಗ್ಲೆಂಡ್‌ ವಿರುದ್ಧ ಪಂದ್ಯಕ್ಕೆ ಗೈರಾಗಲಿದ್ದಾರೆ. ಅವರ ಬದಲು ತಹಿಲಾ ಮೆಗ್ರಾಥ್‌ ತಂಡವನ್ನು ಮುನ್ನಡೆಸಲಿದ್ದಾರೆ. ಇಂಗ್ಲೆಂಡ್‌ ತಂಡಕ್ಕೆ ಸ್ಕೀವರ್‌ ಬ್ರಂಟ್‌ ನಾಯಕತ್ವ ವಹಿಸಲಿದ್ದಾರೆ.

ಪಂದ್ಯ: ಮಧ್ಯಾಹ್ನ 3 ಗಂಟೆಗೆ-ಪಾಕ್‌-ದಕ್ಷಿಣ ಆಫ್ರಿಕಾ

ಪಂದ್ಯಕ್ಕೆ ಮಳೆ ಅಡ್ಡಿ

ಕೊಲಂಬೊ: ಮಂಗಳವಾರ ಕೊಲಂಬೊದಲ್ಲಿ ನಡೆದ ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಪಂದ್ಯ ಆರಂಭಕ್ಕೂ ಮುನ್ನ ಮಳೆ ಸುರಿದ ಕಾರಣ, ಪಂದ್ಯವನ್ನು ತಲಾ ಓವರ್‌ಗೆ ಇಳಿಸಲಾಯಿತು. ಆ ಬಳಿಕವೂ ಪಂದ್ಯದ ನಡುವೆ ಪದೇ ಪದೇ ಮಳೆ ಸುರಿಯಿತು. ದಕ್ಷಿಣ ಆಫ್ರಿಕಾ ಮೊದಲು ಬ್ಯಾಟ್‌ ಮಾಡಿ 40 ಓವರ್‌ಗಳಲ್ಲಿ 9 ವಿಕೆಟ್‌ಗೆ 312 ರನ್‌ ಕಲೆಹಾಕಿತು. ನಾಯಕಿ ಲಾರಾ ವೊಲ್ವಾರ್ಟ್‌ 90, ಮಾರಿಯಾನೆ ಕಾಪ್‌ ಔಟಾಗದೆ 68, ಸ್ಯುನ್‌ ಲ್ಯೂಸ್‌ 61, ನ್ಯಾಡಿನ್‌ ಡೆ ಕ್ಲರ್ಕ್‌ 16 ಎಸೆತಗಳಲ್ಲಿ ಔಟಾಗದೆ 41 ರನ್‌ ಗಳಿಸಿದರು. ಬಳಿಕ ಪಾಕಿಸ್ತಾನ ಚೇಸಿಂಗ್‌ ಸಂದರ್ಭದಲ್ಲೂ ಮಳೆ ಅಡ್ಡಿಪಡಿಸಿತು. ಹೀಗಾಗಿ ತಂಡಕ್ಕೆ 37 ಓವರ್‌ಗಳಲ್ಲಿ 299 ರನ್‌ ಗುರಿ ನೀಡಲಾಯಿತು.

PREV
Read more Articles on

Recommended Stories

ಪಾಕ್‌ ನಾಯಕ ರಿಜ್ವಾನ್‌ ವಜಾ : ಅತಿಯಾದ ಧಾರ್ಮಿಕತೆ ಕಾರಣ?
ಟೀಂ ಇಂಡಿಯಾಗೆ ಸರಣಿ ಸಮಬಲದ ಗುರಿ