ಚಾಂಪಿಯನ್ಸ್ ಟ್ರೋಫಿ: ನಾಳೆ ಭಾರತ vs ಆಸೀಸ್‌ ಸೆಮಿ ಫೈಟ್‌! ಮಾ.5ಕ್ಕೆ ಮತ್ತೊಂದು ಸೆಮೀಸಲ್ಲಿ ಕಿವೀಸ್‌ vs ಆಫ್ರಿಕಾ

ಸಾರಾಂಶ

ಈ ಸಲ ಚಾಂಪಿಯನ್ಸ್‌ ಟ್ರೋಫಿಯ ಸೆಮಿಫೈನಲ್‌ ಪಂದ್ಯಗಳ ವೇಳಾಪಟ್ಟಿ ಅಂತಿಮಗೊಂಡಿದೆ. ಮಂಗಳವಾರ ದುಬೈನಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್‌ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಣಸಾಡಲಿವೆ.

ದುಬೈ: ಈ ಸಲ ಚಾಂಪಿಯನ್ಸ್‌ ಟ್ರೋಫಿಯ ಸೆಮಿಫೈನಲ್‌ ಪಂದ್ಯಗಳ ವೇಳಾಪಟ್ಟಿ ಅಂತಿಮಗೊಂಡಿದೆ. ಮಂಗಳವಾರ ದುಬೈನಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್‌ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಣಸಾಡಲಿವೆ. ಮತ್ತೊಂದು ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್‌ ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೆ ಪಾಕಿಸ್ತಾನದ ಲಾಹೋರ್‌ ಆತಿಥ್ಯ ವಹಿಸಲಿದೆ.

2 ಬಾರಿ ಚಾಂಪಿಯನ್‌ ಭಾರತ ತಂಡ ‘ಎ’ ಗುಂಪಿನಲ್ಲಿ ಆಡಿರುವ ಮೂರೂ ಪಂದ್ಯಗಳಲ್ಲಿ ಗೆದ್ದು, 6 ಅಂಕಗಳೊಂದಿಗೆ ಅಗ್ರಸ್ಥಾನಿಯಾಯಿತು. ಹೀಗಾಗಿ ‘ಬಿ’ ಗುಂಪಿನಲ್ಲಿ 2ನೇ ಸ್ಥಾನಿಯಾಗಿದ್ದ ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್ ಆಡಲಿದೆ. ಆಸೀಸ್‌ ಈ ಸಲ ಮೂರರಲ್ಲಿ ಕೇವಲ 1 ಪಂದ್ಯ ಗೆದ್ದಿದ್ದು, 2 ಪಂದ್ಯಗಳು ಮಳೆಯಿಂದ ರದ್ದಾಗಿದೆ. ತಂಡ ಒಟ್ಟು 4 ಅಂಕ ಹೊಂದಿದೆ.

ಭಾರತ ವಿರುದ್ಧ ಕೊನೆ ಪಂದ್ಯದಲ್ಲಿ ಸೋಲುವ ಮೂಲಕ ‘ಎ’ ಗುಂಪಿನಲ್ಲಿ 2ನೇ ಸ್ಥಾನಕ್ಕೆ ತಳ್ಳಲ್ಪಟ್ಟ ನ್ಯೂಜಿಲೆಂಡ್, ‘ಬಿ’ ಗುಂಪಿನ ಅಗ್ರಸ್ಥಾನಿ ದ.ಆಫ್ರಿಕಾ ವಿರುದ್ಧ ಸೆಮಿಫೈನಲ್‌ ಆಡಲಿದೆ. ನ್ಯೂಜಿಲೆಂಡ್‌ 3 ಪಂದ್ಯಗಳ ಪೈಕಿ 2ರಲ್ಲಿ ಗೆದ್ದು, 4 ಅಂಕ ಹೊಂದಿದೆ. ದ.ಆಫ್ರಿಕಾ 3ರಲ್ಲಿ 2 ಪಂದ್ಯ ಗೆದ್ದಿದ್ದು, ಮತ್ತೊಂದು ಪಂದ್ಯ ಮಳೆಗೆ ರದ್ದಾಗಿತ್ತು.

ಟೂರ್ನಿಯ ಫೈನಲ್‌ ಪಂದ್ಯ ಮಾ.9ಕ್ಕೆ ದುಬೈ ಅಥವಾ ಲಾಹೋರ್‌ನಲ್ಲಿ ನಡೆಯಲಿದೆ. ಭಾರತ ಫೈನಲ್‌ಗೇರಿದರೆ ಪಂದ್ಯಕ್ಕೆ ದುಬೈ ಆತಿಥ್ಯ ವಹಿಸಲಿದೆ. ಭಾರತ ಸೆಮಿಫೈನಲ್‌ನಲ್ಲೇ ಹೊರಬಿದ್ದರೆ ಫೈನಲ್‌ ಲಾಹೋರ್‌ನಲ್ಲಿ ನಡೆಯಲಿದೆ.

ಸೆಮಿಫೈನಲ್‌ ವೇಳಾಪಟ್ಟಿ

ಪಂದ್ಯ ದಿನಾಂಕ ಸ್ಥಳ

ಭಾರತ-ಆಸ್ಟ್ರೇಲಿಯಾ ಮಾ.4 ದುಬೈ

ನ್ಯೂಜಿಲೆಂಡ್‌-ದ.ಆಫ್ರಿಕಾ ಮಾ.5 ಲಾಹೋರ್‌

Share this article