ಡೆಲ್ಲಿ: ನಿರ್ಣಾಯಕ ಪಂದ್ಯದಲ್ಲಿ ಬಲಿಷ್ಠ ರಾಜಸ್ಥಾನ ರಾಯಲ್ಸ್‌ನ್ನು 20 ರನ್‌ಗಳಿಂದ ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್ 17ನೇ ಆವೃತ್ತಿ ಐಪಿಎಲ್‌ನಲ್ಲಿ ಪ್ಲೇ-ಆಫ್ ಆಸೆಯನ್ನು ಜೀವಂತವಾಗಿಸಿಕೊಂಡಿದೆ. ಗೆಲುವಿನ ನಿರೀಕ್ಷೆಯಲ್ಲಿದ್ದರೂ ಕೊನೆ ಕ್ಷಣದಲ್ಲಿ ಎಡವಿದ ರಾಜಸ್ಥಾನ ಟೂರ್ನಿಯಲ್ಲಿ 3ನೇ ಸೋಲು ಕಂಡರೂ, 16 ಅಂಕದೊಂದಿಗೆ 2ನೇ ಸ್ಥಾನದಲ್ಲೇ ಬಾಕಿಯಾಗಿದೆ. 12ರಲ್ಲಿ 6ನೇ ಗೆಲುವು ಕಂಡ ಡೆಲ್ಲಿ ಪ್ಲೇ-ಆಫ್ ರೇಸನ್ನು ಮತ್ತಷ್ಟು ರೋಚಕಗೊಳಿಸಿತು.
ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಯುವ ತಾರೆಗಳಾದ ಜೇಕ್ ಫ್ರೇಸರ್-ಪೊರೆಲ್ ಅಬ್ಬರದಿಂದಾಗಿ 20 ಓವರಲ್ಲಿ 8 ವಿಕೆಟ್‌ಗೆ 221 ರನ್ ಕಲೆಹಾಕಿತು. ಸ್ಫೋಟಕ ಆಟದ ಮೂಲಕ ರಾಜಸ್ಥಾನ ಗುರಿಯನ್ನು ಬೆನ್ನತ್ತುವ ನಿರೀಕ್ಷೆಯಲ್ಲಿದ್ದರೂ ಕೊನೆ ಕ್ಷಣದಲ್ಲಿ ಎಡವಿತು. ತಂಡ 8 ವಿಕೆಟ್‌ಗೆ 201 ರನ್ ಸೋಲೊಪ್ಪಿಕೊಂಡಿತು.ಯಶಸ್ವಿ ಜೈಸ್ವಾಲ್(04), ಜೋಸ್ ಬಟ್ಲರ್(19) ಬೇಗನೇ ಔಟಾದರೂ ಡೆಲ್ಲಿ ಸಂಭ್ರಮಕ್ಕೆ ಸ್ಯಾಮ್ಸನ್ ಅಡ್ಡಿಯಾದರು. ಅವರು ರಿಯಾನ್ ಪರಾಗ್(27) ಹಾಗೂ ಶುಭಂ ದುಬೆ(12 ಎಸೆತಗಳಲ್ಲಿ 25) ಜೊತೆಗೂಡಿ ಡೆಲ್ಲಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಆದರೆ 46 ಎಸೆತಗಳಲ್ಲಿ 8 ಬೌಂಡರಿ, 6 ಸಿಕ್ಸರ್‌ನೊಂದಿಗೆ 86 ರನ್ ಚಚ್ಚಿದ ಸ್ಯಾಮ್ಸನ್, 16ನೇ ಓವರ್‌ನಲ್ಲಿ ವಿವಾದಿತ ರೀತಿಯಲ್ಲಿ ಔಟಾದರು. ಬಳಿಕ ಪೊವೆಲ್(13) ಹೋರಾಡಿದರೂ ತಂಡವನ್ನು ಗೆಲ್ಲಿಸಲಾಗಲಿಲ್ಲ. ಖಲೀಲ್, ಕುಲ್ದೀಪ್, ಮುಕೇಶ್ ತಲಾ 2 ವಿಕೆಟ್ ಕಿತ್ತರು.ಪೊರೆಲ್, ಫ್ರೇಸರ್ ಅಬ್ಬರ: ಇದಕ್ಕೂ ಮುನ್ನ ಡೆಲ್ಲಿ ಅಕ್ಷರಶಃ ಆರ್ಭಟಿಸಿತು. ಆರಂಭಿಕರಾದ ಅಭಿಷೇಕ್ ಪೊರೆಲ್ ಹಾಗೂ ಜೇಕ್ ಫ್ರೇಸರ್ 4.2 ಓವರಲ್ಲೇ 62 ರನ್ ಜೊತೆಯಾಟವಾಡಿದರು. ಚೆಂಡನ್ನು ಮೈದಾನದ ಮೂಲೆಮೂಲೆಗೆ ಅಟ್ಟಿದ ಫ್ರೇಸರ್ 20 ಎಸೆತಗಳಲ್ಲೇ 7 ಬೌಂಡರಿ, 3 ಸಿಕ್ಸರ್‌ನೊಂದಿಗೆ 50 ರನ್ ಚಚ್ಚಿದರು. ಪೊರೆಲ್ 36 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್‌ನೊಂದಿಗೆ 65 ರನ್ ಸಿಡಿಸಿದರು. ಬಳಿಕ ಸತತ ವಿಕೆಟ್ ವಿಕೆಟ್ ಕಳೆದುಕೊಂಡರೂ ಕೊನೆಯಲ್ಲಿ ಅಬ್ಬರಿಸಿದ ಟ್ರಿಸ್ಟನ್ ಸ್ಟಬ್ಸ್(20 ಎಸೆತಗಳಲ್ಲಿ 41) ತಂಡವನ್ನು 220ರ ಗಡಿ ದಾಟಿಸಿದರು. ಇತರೆಲ್ಲಾ ಬೌಲರ್‌ಗಳು ಚಚ್ಚಿಸಿಕೊಂಡರೂ ಮೊನಚು ದಾಳಿ ಸಂಘಟಿಸಿ ಆರ್.ಅಶ್ವಿನ್ 4 ಓವರಲ್ಲಿ 24ಕ್ಕೆ 3 ವಿಕೆಟ್ ಕಿತ್ತರು.ಸ್ಕೋರ್: ಡೆಲ್ಲಿ 20 ಓವರಲ್ಲಿ 221/8 (ಪೊರೆಲ್ 65, ಫ್ರೇಸರ್ 50, ಅಶ್ವಿನ್ 2-24), ರಾಜಸ್ಥಾನ 20 ಓವರಲ್ಲಿ 201/8 (ಸ್ಯಾಮ್ಸನ್ 86, ಕುಲ್ದೀಪ್ 2-25) 350 ಟಿ20 ವಿಕೆಟ್: ಚಹಲ್ ದಾಖಲೆರಾಜಸ್ಥಾನ ತಂಡದ ಚಹಲ್ ಟಿ20 ಕ್ರಿಕೆಟ್‌ನಲ್ಲಿ 350 ವಿಕೆಟ್ ಪೂರ್ಣಗೊಳಿಸಿದರು. ಅವರು ಈ ಸಾಧನೆ ಮಾಡಿದ ಭಾರತದ ಮೊದಲ ಬೌಲರ್. ಒಟ್ಟಾರೆ ವಿಶ್ವದ ಬೌಲರ್‌ಗಳ ಪಟ್ಟಿಯಲ್ಲಿ ಚಹಲ್ 11ನೇ ಸ್ಥಾನದಲ್ಲಿದ್ದಾರೆ.
200 ಸಿಕ್ಸರ್: ಸಂಜು ಸ್ಯಾಮ್ಸನ್ ಐಪಿಎಲ್‌ನಲ್ಲಿ 200 ಸಿಕ್ಸರ್ ಸಿಡಿಸಿದರು. ಈ ಸಾಧನೆ ಮಾಡಿದ 10ನೇ ಬ್ಯಾಟರ್.01ನೇ ಬ್ಯಾಟರ್: ಐಪಿಎಲ್‌ನಲ್ಲಿ 20 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ 3 ಬಾರಿ ಅರ್ಧಶತಕ ಬಾರಿಸಿದ ಮೊದಲ ಬ್ಯಾಟರ್ ಜೇಕ್ ಫ್ರೇಸರ್.