ಬ್ರಿಜ್‌ಭೂಷಣ್‌ ವಿರುದ್ಧ ಸಾಕಷ್ಟು ಸಾಕ್ಷ್ಯಗಳಿವೆ ಎಂದ ಕೋರ್ಟ್‌: ವಿಚಾರಣೆ ಶುರು

KannadaprabhaNewsNetwork |  
Published : May 10, 2024, 11:46 PM IST
ಬ್ರಿಜ್‌ಭೂಷಣ್‌ | Kannada Prabha

ಸಾರಾಂಶ

ನ್ಯಾಯಾಲಯ ಬ್ರಿಜ್‌ ವಿರುದ್ಧದ 6ನೇ ಪ್ರಕರಣ ವಜಾಗೊಳಿಸಿದೆ. ಡಬ್ಲ್ಯುಎಫ್‌ಐ ಮಾಜಿ ಕಾರ್ಯದರ್ಶಿ ವಿನೋದ್‌ ತೋಮರ್‌ ವಿರುದ್ಧ ವಿಚಾರಣೆಗೆ ಕೋರ್ಟ್‌ ಸೂಚಿಸಿದೆ.

ನವದೆಹಲಿ: ದೇಶದ ಅಗ್ರ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳ, ಬೆದರಿಕೆ ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಶನ್‌(ಡಬ್ಲ್ಯುಎಫ್‌ಐ) ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ ವಿರುದ್ಧ ದೆಹಲಿ ನ್ಯಾಯಾಲಯ ವಿಚಾರಣೆ ಆರಂಭಿಸಿದೆ.ಒಟ್ಟು 6 ಪ್ರಕರಣಗಳ ಪೈಕಿ 5ರಲ್ಲಿ ಬ್ರಿಜ್ ವಿರುದ್ಧ ಆರೋಪ ಹೊರಿಸಲು ಸಾಕಷ್ಟು ಸಾಕ್ಷ್ಯಗಳು ಸಿಕ್ಕಿವೆ ಎಂದು ಡೆಲ್ಲಿಯ ರೋಸ್ ಅವೆನ್ಯೂ ಕೋರ್ಟ್ ಶುಕ್ರವಾರ ಹೇಳಿದೆ. ಆದರೆ ನ್ಯಾಯಾಲಯ ಬ್ರಿಜ್‌ ವಿರುದ್ಧದ 6ನೇ ಪ್ರಕರಣ ವಜಾಗೊಳಿಸಿದೆ. ಎಲ್ಲಾ ಆರೋಪಗಳಲ್ಲಿ ಸೆಕ್ಷನ್‌ 354 ಮತ್ತು 354ಎ ಅಡಿಯಲ್ಲಿ ಬ್ರಿಜ್ ವಿರುದ್ಧ ದೋಷಾರೋಪ ಹೊರಿಸಿದೆ. ಅಲ್ಲದೆ ಡಬ್ಲ್ಯುಎಫ್‌ಐ ಮಾಜಿ ಕಾರ್ಯದರ್ಶಿ ವಿನೋದ್‌ ತೋಮರ್‌ ವಿರುದ್ಧವೂ ವಿಚಾರಣೆಗೆ ಕೋರ್ಟ್‌ ಸೂಚಿಸಿದೆ. ಬ್ರಿಜ್‌ ವಿರುದ್ಧ 6 ಕುಸ್ತಿಪಟುಗಳು ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದರು. ಇದರ ಆಧಾರದ ಮೇಲೆ ದೆಹಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿ, ಜೂ.15ರಂದು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.ಯುಎಸ್‌ ಓಪನ್‌ ವಿಜೇತ ಥೀಮ್‌ ಟೆನಿಸ್‌ಗೆ ಗುಡ್‌ಬೈ

ಲಂಡನ್‌: 2020ರ ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಚಾಂಪಿಯನ್‌, ಆಸ್ಟ್ರಿಯಾದ ಡೊಮಿನಿಕ್‌ ಥೀಮ್‌ ಈ ಋತುವಿನ ಅಂತ್ಯಕ್ಕೆ ಟೆನಿಸ್‌ ವೃತ್ತಿಬದುಕು ಕೊನೆಗೊಳಿಸುವುದಾಗಿ ಘೋಷಿಸಿದ್ದಾರೆ. 30 ವರ್ಷದ ಡೊಮಿನಿಕ್‌ 2018, 2019ರ ಫ್ರೆಂಚ್‌ ಓಪನ್‌, 2020ರ ಆಸ್ಟ್ರೇಲಿಯನ್‌ ಓಪನ್‌ನಲ್ಲಿ ರನ್ನರ್‌-ಅಪ್‌ ಆಗಿದ್ದರು. ವಿಶ್ವ ರ್‍ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ 3ನೇ ಸ್ಥಾನಕ್ಕೇರಿದ್ದ ಅವರು, 2021ರಲ್ಲಿ ಮುಂಗೈ ಗಾಯಕ್ಕೆ ತುತ್ತಾಗಿದ್ದರು. ಸುಮಾರು 10 ತಿಂಗಳ ಬಳಿಕ ಟೆನಿಸ್‌ಗೆ ಮರಳಿದರೂ ಲಯಕ್ಕೆ ಮರಳಲು ವಿಫಲರಾಗಿದ್ದು, ಸತತವಾಗಿ ಗಾಯಗೊಳ್ಳುತ್ತಿದ್ದರು.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಶಿಕ್ಷಕ ತಂದೆಗೆ ₹12 ಸಾವಿರ ವೇತನ, ಮಗನಿಗೆ ₹14.2 ಕೋಟಿ!
ಫಿಫಾ ವಿಶ್ವಕಪ್‌ ಗೆದ್ರೆ ₹452 ಕೋಟಿ!