ಡೋಪಿಂಗ್‌ : ಚೀನಾ, ಅಮೆರಿಕ, ರಷ್ಯಾಗಿಂತ ಭಾರತದಲ್ಲೇ ಹೆಚ್ಚು

Published : Jun 21, 2025, 11:11 AM IST
Drug injection

ಸಾರಾಂಶ

ಭಾರತದಲ್ಲಿ ನಿಷೇಧಿತ ಮದ್ದು ಸೇವನೆ(ಡೋಪಿಂಗ್‌) ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದ್ದರೂ, ಕ್ರೀಡಾಪಟುಗಳಿಂದ ನಿಯಮ ಉಲ್ಲಂಘನೆ ಹೆಚ್ಚುತ್ತಿದೆ

ನವದೆಹಲಿ: ಭಾರತದಲ್ಲಿ ನಿಷೇಧಿತ ಮದ್ದು ಸೇವನೆ(ಡೋಪಿಂಗ್‌) ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದ್ದರೂ, ಕ್ರೀಡಾಪಟುಗಳಿಂದ ನಿಯಮ ಉಲ್ಲಂಘನೆ ಹೆಚ್ಚುತ್ತಿದೆ. ಪ್ರಮುಖ ಕ್ರೀಡಾ ದೇಶಗಳಾದ ಅಮೆರಿಕ, ಚೀನಾ, ರಷ್ಯಾ, ಫ್ರಾನ್ಸ್‌, ಜರ್ಮನಿಗಿಂತಲೂ ಭಾರತದಲ್ಲಿ ಹೆಚ್ಚಿನ ಡೋಪಿಂಗ್‌ ಪ್ರಕರಣಗಳು ವರದಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ.

ವಿಶ್ವ ಉದ್ದೀಪನ ಮದ್ದು ನಿಗ್ರಹ ಘಟಕ(ವಾಡಾ) 2023ರಲ್ಲಿ 5000ಕ್ಕಿಂತ ಹೆಚ್ಚು ಡೋಪಿಂಗ್‌ ಪರೀಕ್ಷೆ ನಡೆಸಿದ ದೇಶಗಳ ಪಟ್ಟಿ ಬಿಡುಗಡೆ ಮಾಡಿದೆ. ಭಾರತದಲ್ಲಿ 5606 ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 214 ಅಥ್ಲೀಟ್‌ಗಳು ಅಂದರೆ ಶೇ.3.8ರಷ್ಟು ಮಂದಿ ನಿಷೇಧಿತ ಮದ್ದು ಸೇವಿಸಿದ್ದು ಪತ್ತೆಯಾಗಿದೆ. 2022ರಲ್ಲಿ 3865 ಪ್ರಕರಣಗಳಲ್ಲಿ ಪಾಸಿಟಿವ್‌ ರೇಟ್‌ 3.2 ಇತ್ತು.

ಚೀನಾದಲ್ಲಿ 28197 ಪರೀಕ್ಷೆ ನಡೆಸಲಾಗಿದ್ದು, 60 (ಶೇ. 0.2)ರಲ್ಲಿ ಮಾತ್ರ ಡೋಪಿಂಗ್ ಪತ್ತೆಯಾಗಿದೆ. ಅಮೆರಿಕದಲ್ಲಿ 6798 ಪರೀಕ್ಷೆಯಲ್ಲಿ 66(ಶೇ. 1.0), ಫ್ರಾನ್ಸ್‌ನಲ್ಲಿ 11,368 ಪರೀಕ್ಷೆಯಲ್ಲಿ 105(ಶೇ. 0.9), ಜರ್ಮನಿಯಲ್ಲಿ 15153 ಪ್ರಕರಣದಲ್ಲಿ 57(ಶೇ. 0.4), ರಷ್ಯಾದಲ್ಲಿ 10395 ವರದಿಯಲ್ಲಿ 99(ಶೇ. 1.0) ಪಾಸಿಟಿವ್‌ ಕೇಸ್‌ಗಳು ಪತ್ತೆಯಾಗಿವೆ. ಒಟ್ಟಾರೆ ಜಾಗತಿಕವಾಗಿ 2023ರಲ್ಲಿ 204809 ಅಥ್ಲೀಟ್‌ಗಳ ರಕ್ತ ಅಥವಾ ಮೂತ್ರದ ಮಾದರಿ ಪರೀಕ್ಷಿಸಲಾಗಿದ್ದು, 1820 ಪ್ರಕರಣಗಳಲ್ಲಿ ಡೋಪಿಂಗ್‌ ಪತ್ತೆಯಾಗಿದೆ.

PREV
Read more Articles on

Recommended Stories

2030ರ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಯೋಗ, ಖೋಖೋ, ಕಬಡ್ಡಿ ಆಟ?
ಕೊಲೆ ಕೇಸ್ : ಒಲಿಂಪಿಕ್ಸ್‌ ಪದಕ ವಿಜೇತ ಕುಸ್ತಿಪಟು ಸುಶೀಲ್ ಬೇಲ್‌ ರದ್ದು, ಶರಣಾಗುವಂತೆ ಆದೇಶ