ಇನ್ನು ಅಂತಾರಾಷ್ಟ್ರೀಯ ಪದಕ ಗೆದ್ರೂ ಕಿರಿಯ ಕ್ರೀಡಾ ಪಟುಗಳಿಗೆ ನಗದು ಬಹುಮಾನವಿಲ್ಲ!

KannadaprabhaNewsNetwork |  
Published : Feb 09, 2025, 01:16 AM ISTUpdated : Feb 09, 2025, 04:14 AM IST
ಅಥ್ಲೆಟಿಕ್ಸ್‌ | Kannada Prabha

ಸಾರಾಂಶ

ನಿಯಮಗಳಿಗೆ ತಿದ್ದುಪಡಿ ಮಾಡಿದ ಕ್ರೀಡಾ ಸಚಿವಾಲಯ. ಈ ವರೆಗೂ ಅಂತಾರಾಷ್ಟ್ರೀಯ ಕೂಟಗಳಲ್ಲಿ ಚಿನ್ನದ ಪದಕ ಗೆಲ್ಲುವ ಕಿರಿಯ ಅಥ್ಲೀಟ್‌ಗಳಿಗೆ ಸುಮಾರು ₹13 ಲಕ್ಷ ನಗದು ಬಹುಮಾನ ಸಿಗುತ್ತಿತ್ತು.

ನವದೆಹಲಿ: ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಪದಕ ಗೆಲ್ಲುವ ದೇಶದ ಜೂನಿಯರ್‌, ಸಬ್‌-ಜೂನಿಯರ್‌ ಅಥ್ಲೀಟ್‌ಗಳಿಗೆ ಇನ್ನು ಮುಂದೆ ನಗದು ಬಹುಮಾನ ನೀಡದಿರಲು ಕೇಂದ್ರ ಕ್ರೀಡಾ ಸಚಿವಾಲಯ ನಿರ್ಧರಿಸಿದೆ.

 ಇದಕ್ಕಾಗಿ ತನ್ನ ನಿಯಮಗಳಲ್ಲಿ ಕೆಲ ತಿದ್ದುಪಡಿಗಳನ್ನು ಮಾಡಿದೆ.ಈ ವರೆಗೂ ಅಂತಾರಾಷ್ಟ್ರೀಯ ಕೂಟಗಳಲ್ಲಿ ಚಿನ್ನದ ಪದಕ ಗೆಲ್ಲುವ ಕಿರಿಯ ಅಥ್ಲೀಟ್‌ಗಳಿಗೆ ಸುಮಾರು ₹13 ಲಕ್ಷ ನಗದು ಬಹುಮಾನ ಸಿಗುತ್ತಿತ್ತು. ಸಬ್‌ ಜೂನಿಯರ್‌ ಅಥ್ಲೀಟ್‌ಗಳಿಗೆ ₹6.66 ಲಕ್ಷ ನಗದು ಲಭಿಸುತ್ತಿತ್ತು. ಆದರೆ ಅದನ್ನು ಸ್ಥಗಿತಗೊಳಿಸಲು ಸಚಿವಾಲಯ ನಿರ್ಧರಿಸಿದೆ. ಅಲ್ಲದೆ, ಸೀನಿಯರ್‌ ವಿಭಾಗದಲ್ಲಿ ಇನ್ನು ಯಾವುದೇ ಚಾಂಪಿಯನ್‌ಶಿಪ್‌ನ ತಂಡ ವಿಭಾಗದಲ್ಲಿ ಕನಿಷ್ಠ 12, ವೈಯಕ್ತಿಕ ವಿಭಾಗದಲ್ಲಿ 16 ಸ್ಪರ್ಧಿಗಳು ಇಲ್ಲದಿದ್ದರೆ ಅದರಲ್ಲಿ ಗೆಲ್ಲುವ ಕ್ರೀಡಾಪಟುಗಳಿಗೂ ನಗದು ಬಹುಮಾನ ನೀಡುವುದಿಲ್ಲ ಎಂದು ಸಚಿವಾಯಲ ತಿಳಿಸಿದೆ. ಆದರೆ ಕೋಚ್‌ಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ವಿವಿಧ ವಿಭಾಗಗಳಲ್ಲಿ ನಗದು ಬಹುಮಾನ ನೀಡಲು ಸಚಿವಾಲಯ ನಿರ್ಧರಿಸಿದೆ.

ಮಲ್ಲಕಂಬ, ಖೋ ಖೋ ಗೆದ್ರೆ ನಗದು ಬಹುಮಾನ

ಕ್ರೀಡಾ ಸಚಿವಾಲಯ ನಗದು ಬಹುಮಾನಕ್ಕೆ ಅರ್ಹತೆ ಹೊಂದಿರುವ 51 ಕ್ರೀಡೆಗಳ ಹೆಸರನ್ನು ಪ್ರಕಟಿಸಿದೆ. ಇದರಲ್ಲಿ ಮಲ್ಲಕಂಬ, ಖೋ ಖೋ, ಇ-ಸ್ಪೋರ್ಟ್ಸ್, ಬ್ರೇಕ್ ಡ್ಯಾನ್ಸ್‌ ಕೂಡಾ ಒಳಗೊಂಡಿವೆ.

ಹೊಸ ನಿಯಮಗಳೇನು?1. ಅಂ.ರಾ. ಟೂರ್ನಿಗಳಲ್ಲಿ ಪದಕ ಗೆಲ್ಲುವ ಜೂನಿಯರ್‌, ಸಬ್‌-ಜೂನಿಯರ್‌ ಅಥ್ಲೀಟ್‌ಗೆ ನಗದು ಬಹುಮಾನವಿಲ್ಲ.2. ಕಾಮನ್‌ವೆಲ್ತ್‌ ಚಾಂಪಿಯನ್‌ಶಿಪ್‌, ದಕ್ಷಿಣ ಏಷ್ಯನ್‌ ಗೇಮ್ಸ್ ವಿಜೇತ ಹಿರಿಯ ಅಥ್ಲೀಟ್‌ಗೂ ನಗದು ಬಹುಮಾನ ರದ್ದು.3. ಚೆಸ್‌ ಗ್ರ್ಯಾಂಡ್‌ಮಾಸ್ಟರ್, ಇಂಟರ್‌ನ್ಯಾಷನಲ್‌ ಮಾಸ್ಟರ್‌ ಆದವರಿಗೂ ನಗದು ನೀಡುವುದಿಲ್ಲ.4. ಮಲ್ಲಕಂಬ, ಖೋ ಖೋ, ಇ-ಸ್ಪೋರ್ಟ್ಸ್, ಬ್ರೇಕ್ ಡ್ಯಾನ್ಸ್‌ ವಿಜೇತರಿಗೆ ನಗದು ಬಹುಮಾನ.5. ಕೂಟದಲ್ಲಿ ಒಂದಕ್ಕಿಂತ ಹೆಚ್ಚು ಪದಕ ಗೆದ್ದರೆ, ಶ್ರೇಷ್ಠ ಪದಕ ಒಂದನ್ನು ಮಾತ್ರ ಪರಿಗಣಿಸಿ ನಗದು ವಿತರಣೆ.6. ಒಲಿಂಪಿಕ್ಸ್‌, ಪ್ಯಾರಾಲಿಂಪಿಕ್ಸ್‌, ಏಷ್ಯನ್‌ ಗೇಮ್ಸ್‌, ಪ್ಯಾರಾ ಏಷ್ಯಾಡ್‌ನಲ್ಲಿ ಮಾತ್ರ ಒಂದಕ್ಕಿಂತ ಹೆಚ್ಚು ಪದಕ ಗೆದ್ದರೂ ಎಲ್ಲದಕ್ಕೂ ನಗದು ಬಹುಮಾನ.

PREV

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ವಯೋ ವಂಚನೆ ಪತ್ತೆಗೆ ಖಾಸಗಿ ಸಂಸ್ಥೆ ನೆರವುಪಡೆಯಲಿದೆ ಬಿಸಿಸಿಐ