;Resize=(412,232))
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯ ಅರನ್ನು ಐಸಿಸಿ ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡ ಬುಧವಾರ ಭೇಟಿ ಮಾಡಿದ್ದ ವೇಳೆ ತಾರಾ ಆಟಗಾರ್ತಿ ಹರ್ಲಿನ್ ಡಿಯೋಲ್ ಕೇಳಿದ ಪ್ರಶ್ನೆಯೊಂದು ಸಾಮಾಜಿಕ ತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಆಟಗಾರ್ತಿಯರ ಜೊತೆ ಸಂವಾದದ ವೇಳೆ ಹರ್ಲೀನ್, ‘ಸರ್. ನೀವು ಮಿನುಗುತ್ತಿದ್ದೀರಿ. ನಿಮ್ಮ ಚರ್ಮದ ಆರೈಕೆಯ ಗುಟ್ಟೇನು’ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪ್ರಧಾನಿಯವರು ತಮಾಷೆಯಾಗಿಯೇ ಉತ್ತರಿಸುತ್ತಾ, ನಾನು ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.
ಇನ್ನು, ಗಾಯಕ್ಕೆ ತುತ್ತಾಗಿರುವ ತಾರಾ ಆಟಗಾರ್ತಿ ಪ್ರತೀಕಾ ರಾವಲ್ ವ್ಹೀಲ್‌ಚೇರ್‌ನಲ್ಲೇ ಆಗಮಿಸಿದ್ದರು. ಯಾರೂ ನಿಮಗೆ ಏನನ್ನೂ ನೀಡುತ್ತಿಲ್ಲ. ನಿಮಗೆ ಏನು ಇಷ್ಟ? ಎಂದು ಮೋದಿ ಪ್ರಶ್ನಿಸಿದ್ದಾರೆ. ಬಳಿಕ ತಾವೇ ಸ್ವೀಟ್ ತಂದು ಕೊಟ್ಟು ಇದು ನಿಮಗೆ ಇಷ್ಟವೇ ಎಂದು ಕೇಳಿದ್ದಾರೆ. ಇದನ್ನು ನೋಡಿ ಪ್ರತೀಕಾ ನಗೆ ಬೀರಿದ್ದಾರೆ.
ಸಂವಾದದಲ್ಲಿ ಕೋಚ್ ಅಮೋಲ್ ಮಜುಂದಾರ್, ಸ್ಮೃತಿ ಮಂಧನಾ, ನಾಯಕ ಹರ್ಮನ್‌ಪ್ರೀತ್, ಜೆಮಿಮಾ ರೋಡ್ರಿಗ್ಸ್, ದೀಪ್ತಿ ಶರ್ಮಾ ಕೂಡಾ ತಮ್ಮ ಕ್ರಿಕೆಟ್ ಪಯಣ, ವಿಶ್ವಕಪ್ ಅನುಭವದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.