;Resize=(412,232))
ವಡೋದರಾ: 2008ರಲ್ಲಿ ಐಪಿಎಲ್ ಆರಂಭಗೊಂಡ ಬಳಿಕ ಒಂದು ಕಪ್‌ಗಾಗಿ ಬರೋಬ್ಬರಿ 17 ವರ್ಷಗಳ ಕಾಲ ಕಾದಿದ್ದ ಆರ್‌ಸಿಬಿ ಫ್ರಾಂಚೈಸಿಯು, 2024ರ ವುಮೆನ್ಸ್ ಪ್ರೀಮಿಯರ್ ಲೀಗ್(ಡಬ್ಲ್ಯುಪಿಎಲ್) ಮೂಲಕ ಚೊಚ್ಚಲ ಟ್ರೋಫಿಗೆ ಮುತ್ತಿಟ್ಟಿತ್ತು. ಆ ಕಪ್ ಬಳಿಕ ತಂಡದ ಅದೃಷ್ಟವೇ ಬದಲಾಗಿದ್ದು, ಫ್ರಾಂಚೈಸಿಯು ಹ್ಯಾಟ್ರಿಕ್ ಟ್ರೋಫಿ ಮುಡಿಗೇರಿಸಿಕೊಂಡಿದೆ.
ಗುರುವಾರ ನಡೆದ ಡಬ್ಲ್ಯುಪಿಎಲ್‌ನ 4ನೇ ಆವೃತ್ತಿಯ ಫೈನಲ್‌ನಲ್ಲಿ ಆರ್‌ಸಿಬಿ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ದಾಖಲೆಯ 204 ರನ್ ಬೆನ್ನತ್ತಿ ಗೆದ್ದು ಚಾಂಪಿಯನ್ ಆಯಿತು. ಮೊದಲು ಬ್ಯಾಟ್ ಮಾಡಿದ ಡೆಲ್ಲಿ 4 ವಿಕೆಟ್ ನಷ್ಟದಲ್ಲಿ 203 ರನ್ ಗಳಿಸಿತು.
ಮೊದಲ 3 ಓವರ್‌ಗಳಲ್ಲಿ ಕೇವಲ 9 ರನ್ ಗಳಿಸಿದ್ದ ತಂಡ, ಪವರ್‌ಪ್ಲೇ ಮುಕ್ತಾಯದ ವೇಳೆಗೆ 1 ವಿಕೆಟ್‌ಗೆ 54 ರನ್ ಸೇರಿಸಿತ್ತು. ಶಫಾಲಿ ವರ್ಮಾ 20, ಲಿಜೆಲ್ ಲೀ 37 ರನ್ ಸಿಡಿಸಿದರು. ಬಳಿಕ ಬಂದ ಲಾರಾ ವೊಲ್ವಾರ್ಟ್ ಹಾಗೂ ನಾಯಕಿ ಜೆಮಿಮಾ ಕೂಡಾ ಅಬ್ಬರದ ಆಟವಾಡಿದರು. ಲಾರಾ 25 ಎಸೆತಕ್ಕೆ 44 ರನ್ ಗಳಿಸಿದರೆ, ಜೆಮಿಮಾ 37 ಎಸೆತಗಳಲ್ಲಿ 57 ರನ್ ಬಾರಿಸಿ ಔಟಾದರು. 17 ಓವರಲ್ಲಿ 154 ರನ್ ಗಳಿಸಿದ್ದ ತಂಡ ಕೊನೆ 3 ಓವರ್‌ನಲ್ಲಿ 49 ರನ್ ದೋಚಿತು. ಶಿನೆಲ್ ಹೆನ್ರಿ 15 ಎಸೆತಕ್ಕೆ ಔಟಾಗದೆ 35 ರನ್ ಚಚ್ಚಿದರು.
ಬೃಹತ್ ಗುರಿ ಬೆನ್ನತ್ತಲು ಇಳಿದ ಆರ್‌ಸಿಬಿ ಆರಂಭದಲ್ಲೇ ಆಘಾತ ಎದುರಾಯಿತು. ಗ್ರೇಸ್ ಹ್ಯಾರಿಸ್ 9 ರನ್‌ಗೆ ಔಟಾದರು. ಆದರೆ ನಾಯಕಿ ಸ್ಮೃತಿ ಮಂಧನಾ ಹಾಗೂ ಜಾರ್ಜಿಯಾ ವೊಲ್, ಡೆಲ್ಲಿ ಬೌಲರ್‌ಗಳ ಬೆವರಿಳಿಸಿದರು. ವೇಗವಾಗಿ ರನ್ ಕಲೆಹಾಕುತ್ತಾ ಬಂದ ಈ ಜೋಡಿ 2ನೇ ವಿಕೆಟ್‌ಗೆ 00 ಎಸೆತಗಳಲ್ಲಿ 00 ರನ್ ಸೇರಿಸಿತು. ವೊಲ್ 00 ಎಸೆತಗಳಲ್ಲಿ 00 ರನ್ ಸಿಡಿಸಿದರೆ, ಸ್ಮೃತಿ 0 ಎಸೆತಗಳಲ್ಲಿ 00 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಸ್ಕೋರ್: ಡೆಲ್ಲಿ 20 ಓವರಲ್ಲಿ 203/4 (ಜೆಮಿಮಾ 57, ಲಾರಾ 44, ಲಿಜೆಲ್ 37, ಶಿನೆಲ್ 35*, ಅರುಂಧತಿ 1-40), ಆರ್‌ಸಿಬಿ 00 ಓವರಲ್ಲಿ 000 (ಸ್ಮೃತಿ 00, ವೊಲ್ 00, ಶಿನೆಲ್ 000)
2 ವರ್ಷಗಳಲ್ಲಿ 3 ಕಪ್‌ಆರ್‌ಸಿಬಿ ಫ್ರಾಂಚೈಸಿಯು ಹ್ಯಾಟ್ರಿಕ್ ಟ್ರೋಫಿ ಗೆದ್ದು ಸಂಭ್ರಮಿಸಿದೆ. 2024ರ ಡಬ್ಲ್ಯುಪಿಎಲ್‌ನಲ್ಲಿ ಆರ್‌ಸಿಬಿ ಮಹಿಳಾ ತಂಡ ಡೆಲ್ಲಿ ವಿರುದ್ಧ ಫೈನಲ್‌ನಲ್ಲಿ ಗೆದ್ದು ಚಾಂಪಿಯನ್ ಆಗಿ, ಫ್ರಾಂಚೈಸಿಯ ಟ್ರೋಫಿ ಬರ ನೀಗಿಸಿತ್ತು. 2025ರ ಐಪಿಎಲ್ ಫೈನಲ್‌ನಲ್ಲಿ ಪುರುಷರ ತಂಡ ಪಂಜಾಬ್‌ನ ಮಣಿಸಿ ಚಾಂಪಿಯನ್ ಆಗಿತ್ತು. ಈ ವರ್ಷ ಮಹಿಳಾ ತಂಡ ಮತ್ತೆ ಡೆಲ್ಲಿಯನ್ನು ಸೋಲಿಸಿ ಟ್ರೋಫಿ ಗೆದ್ದಿದೆ.
ಡೆಲ್ಲಿ ತಂಡ ಐಪಿಎಲ್ ಹಾಗೂ ಡಬ್ಲ್ಯುಪಿಎಲ್‌ನಲ್ಲಿ ಎಲ್ಲಾ 5 ಫೈನಲ್‌ನಲ್ಲೂ ಸೋಲನುಭವಿಸಿದೆ. ಪುರುಷರ ತಂಡ ಐಪಿಎಲ್‌ನಲ್ಲಿ 2020ರಲ್ಲಿ ರನ್ನರ್-ಅಪ್ ಆಗಿತ್ತು. ಮಹಿಳಾ ತಂಡ 2023, 2024, 2025, 2026ರ ಫೈನಲ್‌ನಲ್ಲಿ ಪರಾಭವಗೊಂಡು ಟ್ರೋಫಿ ತಪ್ಪಿಸಿಕೊಂಡಿದೆ.
ಐಪಿಎಲ್, ಡಬ್ಲ್ಯುಪಿಎಲ್ ಫೈನಲ್ ಇತಿಹಾಸದಲ್ಲೇ ಗರಿಷ್ಠ ಸ್ಕೋರ್ ಚೇಸ್!
ಆರ್‌ಸಿಬಿ ತಂಡ 204 ರನ್ ಬೆನ್ನತ್ತಿ ಗೆದ್ದಿದ್ದು, ಐಪಿಎಲ್ ಹಾಗೂ ಡಬ್ಲ್ಯುಪಿಎಲ್ ಫೈನಲ್ ಇತಿಹಾಸದಲ್ಲೇ ಗರಿಷ್ಠ ರನ್ ಚೇಸ್. 2014ರ ಐಪಿಎಲ್‌ನಲ್ಲಿ ಪಂಜಾಬ್ 199 ರನ್ ಸಿಡಿಸಿದ್ದರೆ, 200 ರನ್ ಬೆನ್ನತ್ತಿ ಕೆಕೆಆರ್ ಗೆದ್ದಿತ್ತು. ಇನ್ನು ಡಬ್ಲ್ಯುಪಿಎಲ್‌ನಲ್ಲಿ ಗರಿಷ್ಠ ರನ್ ಚೇಸ್ ದಾಖಲೆ ಇದ್ದಿದ್ದು ಮುಂಬೈ ಹೆಸರಲ್ಲಿ. 2023ರಲ್ಲಿ ಡೆಲ್ಲಿ ವಿರುದ್ಧ ಮುಂಬೈ 132 ರನ್ ಬೆನ್ನತ್ತಿ ಜಯಗಳಿಸಿತ್ತು.
06 ಬಾರಿ
ಸ್ಮೃತಿ ಮಂಧನಾ ಡಬ್ಲ್ಯುಪಿಎಲ್‌ನಲ್ಲಿ 6ನೇ ಬಾರಿ ಶತಕದ ಜೊತೆಯಾಟದಲ್ಲಿ ಭಾಗಿಯಾದರು. ಇದು ಗರಿಷ್ಠ. ಸ್ಕೀವರ್ ಬ್ರಂಟ್ 5 ಬಾರಿ ಈ ಸಾಧನೆ ಮಾಡಿದ್ದಾರೆ.