ಟಿ20 ವಿಶ್ವಕಪ್‌: ಇಂದು ವಿಂಡೀಸ್‌ vs ಇಂಗ್ಲೆಂಡ್‌ ಸೂಪರ್‌-8 ಸೆಣಸಾಟ

KannadaprabhaNewsNetwork |  
Published : Jun 20, 2024, 01:04 AM ISTUpdated : Jun 20, 2024, 03:54 AM IST
ಇಂದು ಹಾಲಿ ಚಾಂಪಿಯನ್‌ ತಂಡಕ್ಕೆ ಮಾಜಿ ಚಾಂಪಿಯನ್‌ ತಂಡದ ಸವಾಲು.  | Kannada Prabha

ಸಾರಾಂಶ

ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ಗೆ ಇಂದು ಎದುರಾಗಲಿದೆ ಮಾಜಿ ಚಾಂಪಿಯನ್‌ ವೆಸ್ಟ್‌ಇಂಡೀಸ್‌ ಸವಾಲು. ಸೂಪರ್‌-8 ಪಂದ್ಯದಲ್ಲಿ ಯಾರಿಗೆ ಒಲಿಯಲಿದೆ ಗೆಲುವು?

ಗ್ರಾಸ್‌ ಐಲೆಟ್‌ (ಸೇಂಟ್‌ ಲೂಶಿಯಾ): 3ನೇ ಬಾರಿಗೆ ಟ್ರೋಫಿ ಮೇಲೆ ಕಣ್ಣಿಟ್ಟಿರುವ ಇಂಗ್ಲೆಂಡ್‌ ಹಾಗೂ ವೆಸ್ಟ್‌ಇಂಡೀಸ್‌, ಟಿ20 ವಿಶ್ವಕಪ್‌ನ ಸೂಪರ್‌-8 ಪಂದ್ಯದಲ್ಲಿ ಗುರುವಾರ ಮುಖಾಮುಖಿಯಾಗಲಿವೆ. 

ಮದಗಜಗಳ ಕಾಳಗ ಎಂದೇ ಬಿಂಬಿತಗೊಂಡಿರುವ ಪಂದ್ಯದಲ್ಲಿ, ಗೆಲುವಿಗಾಗಿ ಭಾರಿ ಪೈಪೋಟಿ ಏರ್ಪಡುವ ನಿರೀಕ್ಷೆ ಇದೆ.ಈ ಟೂರ್ನಿಯಲ್ಲಿ 4 ಸೇರಿ ಸತತ 8 ಪಂದ್ಯಗಳನ್ನು ಗೆದ್ದಿರುವ ವಿಂಡೀಸ್‌, ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿದೆ. ಗುಂಪು ಹಂತದಲ್ಲಿ ಆಲ್ರೌಂಡ್‌ ಪ್ರದರ್ಶನದ ಮೂಲಕ ಎದುರಾಳಿಗಳ ಮೇಲೆ ಸವಾರಿ ಮಾಡಿದ ಆತಿಥೇಯ ತಂಡ ಹಾಲಿ ಚಾಂಪಿಯನ್ನರಿಗೆ ಸೋಲುಣಿಸಲು ಕಾತರಿಸುತ್ತಿದೆ.

ಇನ್ನು ಅದೃಷ್ಟ ಬೆನ್ನಿಗಿದ್ದಿದ್ದರಿಂದ ಸೂಪರ್‌-8 ತಲುಪಿರುವ ಇಂಗ್ಲೆಂಡ್‌, ತನ್ನ ಅಸಲಿ ಆಟವನ್ನು ಇಲ್ಲಿಂದ ಆರಂಭಿಸಲು ಎದುರು ನೋಡುತ್ತಿದೆ. ಟಿ20 ತಜ್ಞರಿಂದ ತುಂಬಿರುವ ಇಂಗ್ಲಿಷ್‌ ಪಡೆ ಎಷ್ಟು ಅಪಾಯಕಾರಿಯಾಗಬಲ್ಲದು ಎನ್ನುವುದನ್ನು ವಿಶೇಷವಾಗಿ ವಿವರಿಸುವ ಅಗತ್ಯವಿಲ್ಲ. ಈ ಪಂದ್ಯ ಗೆಲ್ಲುವ ತಂಡ ಸೆಮಿಫೈನಲ್‌ಗೇರುವ ತಂಡಗಳಲ್ಲಿ ಒಂದಾದರೂ ಅಚ್ಚರಿಯಿಲ್ಲ.ಒಟ್ಟು ಮುಖಾಮುಖಿ: 29ವಿಂಡೀಸ್‌: 17

ಇಂಗ್ಲೆಂಡ್‌: 12ಸಂಭವನೀಯ ಆಟಗಾರರ ಪಟ್ಟಿವಿಂಡೀಸ್‌: ಕಿಂಗ್‌, ಚಾರ್ಲ್ಸ್‌, ಪೂರನ್‌, ಹೋಪ್‌/ಚೇಸ್‌, ಪೋವೆಲ್‌ (ನಾಯಕ), ರಸೆಲ್‌, ರುಥರ್‌ಫೋರ್ಡ್‌, ಹೊಸೈನ್‌, ಜೋಸೆಫ್‌, ಮೋಟಿ, ಮೆಕಾಯ್‌/ಶೆಫರ್ಡ್‌.

ಇಂಗ್ಲೆಂಡ್‌: ಸಾಲ್ಟ್‌, ಬಟ್ಲರ್‌, ಬೇರ್‌ಸ್ಟೋವ್‌, ಬ್ರೂಕ್‌, ಮೊಯೀನ್‌ ಅಲಿ, ವಿಲ್‌ ಜ್ಯಾಕ್ಸ್‌, ಕರ್ರನ್‌, ಆರ್ಚರ್‌, ವುಡ್‌/ಜೋರ್ಡನ್‌, ರಶೀದ್‌, ರೀಸ್‌ ಟಾಪ್ಲಿ.ಪಂದ್ಯ ಆರಂಭ: ಬೆಳಗ್ಗೆ 6ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಹಾಟ್‌ಸ್ಟಾರ್‌

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಮದುವೆಯಾಗಿ 11 ತಿಂಗಳ ಬಳಿಕ ನೀರಜ್‌ರ ಆರತಕ್ಷತೆ : ಪ್ರಧಾನಿ ಮೋದಿ ಶುಭಹಾರೈಕೆ
ಕ್ಯಾಚ್‌ ಬಿಟ್ಟರೂ ಮ್ಯಾಚ್‌ ಬಿಡದ ಭಾರತ!