ಈ ಬಾರಿ ವಿಶ್ವಕಪ್‌ ಗೆಲ್ಲುವ ತಂಡಕ್ಕೆ ಸಿಗುವ ನಗದು ಬಹುಮಾನ ಎಷ್ಟು ಗೊತ್ತಾ?

KannadaprabhaNewsNetwork |  
Published : Jun 04, 2024, 12:31 AM ISTUpdated : Jun 04, 2024, 04:19 AM IST
ಟಿ20 ವಿಶ್ವಕಪ್‌ | Kannada Prabha

ಸಾರಾಂಶ

ದಾಖಲೆ ಪ್ರಮಾಣದಲ್ಲಿ ಮೊತ್ತ ಹೆಚ್ಚಿಸಿದ ಐಸಿಸಿ. ಟ್ರೋಫಿ ವಿಜೇತ ತಂಡಕ್ಕೆ ಈ ಸಲ ಅಂದಾಜು 20.35 ಕೋಟಿ ರು. ನಗದು ಬಹುಮಾನ ಸಿಗಲಿದೆ ಎಂದು ಐಸಿಸಿ ಮಾಹಿತಿ.

ನ್ಯೂಯಾರ್ಕ್‌: ಈ ಬಾರಿ ಟಿ20 ವಿಶ್ವಕಪ್‌ನ ಪ್ರಶಸ್ತಿ ಮೊತ್ತವನ್ನು ಐಸಿಸಿ ದಾಖಲೆ ಪ್ರಮಾಣದಲ್ಲಿ ಹೆಚ್ಚಿಸಿದೆ. ಟ್ರೋಫಿ ವಿಜೇತ ತಂಡಕ್ಕೆ ಈ ಸಲ 2.45 ಮಿಲಿಯನ್‌ ಅಮೆರಿಕನ್‌ ಡಾಲರ್‌(ಅಂದಾಜು 20.35 ಕೋಟಿ ರು.) ನಗದು ಬಹುಮಾನ ಸಿಗಲಿದೆ ಎಂದು ಐಸಿಸಿ ಸೋಮವಾರ ಪ್ರಕಟಿಸಿದೆ.

ಕಳೆದ ಬಾರಿ ವಿಶ್ವಕಪ್‌ ಗೆದ್ದಿದ್ದ ಇಂಗ್ಲೆಂಡ್ ತಂಡಕ್ಕೆ 1.6 ಮಿಲಿಯನ್‌ ಯುಎಸ್ ಡಾಲರ್‌(ಈಗಿನ ಅಂದಾಜು 13.2 ಕೋಟಿ ರು.) ನಗದು ಬಹುಮಾನ ಲಭಿಸಿತ್ತು. ಈ ಬಾರಿ ಟೂರ್ನಿಯ ಒಟ್ಟಾರೆ ಪ್ರಶಸ್ತಿ ಮೊತ್ತವನ್ನು ಐಸಿಸಿ 11.25 ಮಿಲಿಯನ್‌ ಯುಎಸ್‌ ಡಾಲರ್‌(ಅಂದಾಜು 93 ಕೋಟಿ ರು.)ಗೆ ಹೆಚ್ಚಿಸಿದೆ. 

ಇದು ಟೂರ್ನಿಯ ಇತಿಹಾಸದಲ್ಲೇ ಗರಿಷ್ಠ. ಈ ಪೈಕಿ ರನ್ನರ್‌-ಅಪ್‌ ತಂಡಕ್ಕೆ 10.6 ಕೋಟಿ ರು. ಸಿಗಲಿದೆ. ಸೆಮಿಫೈನಲ್‌ ಪ್ರವೇಶಿಸುವ ತಂಡಗಳು ತಲಾ ಅಂದಾಜು ₹6.5 ಕೋಟಿ, ಸೂಪರ್‌-8 ಹಂತದಲ್ಲಿ ಹೊರಬಿದ್ದ ತಂಡಗಳು ತಲಾ ಅಂದಾಜು ₹3.17 ಕೋಟಿ ಪಡೆಯಲಿವೆ. ಟೂರ್ನಿಯಲ್ಲಿ 9ರಿಂದ 12ರ ವರೆಗೆ ಸ್ಥಾನ ಪಡೆದ ತಂಡಗಳು ತಲಾ 2.05 ಕೋಟಿ ರು, 13ರಿಂದ 20 ಸ್ಥಾನಿಯಾದ ತಂಡಗಳು ತಲಾ 1.87 ಕೋಟಿ ರು. ಪಡೆಯಲಿದೆ. 

ಅಲ್ಲದೆ ಗುಂಪು ಹಂತ ಮತ್ತು ಸೂಪರ್‌-8 ಹಂತದಲ್ಲಿ ಗೆಲ್ಲುವ ಪ್ರತಿ ಪಂದ್ಯಕ್ಕೆ ತಂಡಗಳಿಗೆ 25 ಲಕ್ಷ ರು. ಹೆಚ್ಚುವರಿ ನಗದು ಸಿಗಲಿವೆ ಎಂದು ಐಸಿಸಿ ತಿಳಿಸಿದೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಇಂದಿನಿಂದ 4ನೇ ಆವೃತ್ತಿ ಮಹಿಳಾ ಪ್ರೀಮಿಯರ್‌ ಲೀಗ್‌
ಮಾ.5ರಂದು ಸಚಿನ್‌ ಪುತ್ರ ಅರ್ಜುನ್‌ ತೆಂಡುಲ್ಕರ್‌ ಮದುವೆ