ಭಾರತ ಮಹಿಳೆಯಿಂದ ಇತಿಹಾಸ! ಟೆಸ್ಟ್‌ ಕ್ರಿಕೆಟ್‌ನಲ್ಲೇ ಅತಿದೊಡ್ಡ ಜಯದ ದಾಖಲೆ

KannadaprabhaNewsNetwork |  
Published : Dec 17, 2023, 01:45 AM IST
ಇಂಗ್ಲೆಂಡ್‌ ವಿರುದ್ಧ  ತವರಿನಲ್ಲಿ ಚೊಚ್ಚಲ ಟೆಸ್ಟ್‌ ಗೆಲುವು ಸಾಧಿಸಿದ ಸಂಭ್ರಮದಲ್ಲಿ ಭಾರತೀಯ ಆಟಗಾರ್ತಿಯರು. (ಫೋಟೋ ಕೃಪೆ: ಬಿಸಿಸಿಐ) | Kannada Prabha

ಸಾರಾಂಶ

ಹರ್ಮನ್‌ಪ್ರೀತ್‌ ಕೌರ್‌ ಪಡೆ ಇತಿಹಾಸ. ಇಂಗ್ಲೆಂಡ್‌ ವಿರುದ್ಧದ ಏಕೈಕ ಟೆಸ್ಟ್‌ನಲ್ಲಿ ಭಾರತ ಮಹಿಳಾ ತಂಡಕ್ಕೆ 347 ರನ್‌ ಗೆಲುವು. ಮಹಿಳಾ ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲೇ ಅತಿದೊಡ್ಡ ಗೆಲುವಿನ ದಾಖಲೆ.

ನವಿ ಮುಂಬೈ: ಇಂಗ್ಲೆಂಡ್‌ ವಿರುದ್ಧ ಏಕೈಕ ಟೆಸ್ಟ್‌ನಲ್ಲಿ ಭಾರತ 347 ರನ್‌ಗಳ ಗೆಲುವು ಸಾಧಿಸುವ ಮೂಲಕ, ಮಹಿಳಾ ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲೇ ಅತಿದೊಡ್ಡ ಗೆಲುವಿನ ದಾಖಲೆ ಬರೆದಿದೆ. ಗೆಲ್ಲಲು 479 ರನ್‌ಗಳ ಬೃಹತ್‌ ಗುರಿ ಬೆನ್ನತ್ತಿದ ಇಂಗ್ಲೆಂಡ್‌, 2ನೇ ಇನ್ನಿಂಗ್ಸಲ್ಲಿ ಕೇವಲ 131 ರನ್‌ಗೆ ಆಲೌಟ್‌ ಆಯಿತು.1998ರಲ್ಲಿ ಪಾಕಿಸ್ತಾನ ವಿರುದ್ಧ ಶ್ರೀಲಂಕಾ 309 ರನ್‌ಗಳಿಂದ ಗೆದ್ದಿದ್ದು ದಾಖಲೆಯಾಗಿ ಉಳಿದಿತ್ತು. ಅದನ್ನು ಹರ್ಮನ್‌ಪ್ರೀತ್‌ ಕೌರ್‌ ಪಡೆ ಮುರಿದಿದೆ. ಅಲ್ಲದೇ, ಇಂಗ್ಲೆಂಡ್‌ ವಿರುದ್ಧ ತವರಿನಲ್ಲಿ ಭಾರತಕ್ಕೆ 15 ಟೆಸ್ಟ್‌ಗಳಲ್ಲಿ ಇದು ಮೊದಲ ಟೆಸ್ಟ್‌ ಗೆಲುವು.ಈ ಗೆಲುವು, ಮುಂದಿನ ವಾರ ಆಸ್ಟ್ರೇಲಿಯಾ ವಿರುದ್ಧ ಆರಂಭಗೊಳ್ಳಲಿರುವ ಪಂದ್ಯಕ್ಕೂ ಮುನ್ನ ಭಾರತ ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ.2ನೇ ದಿನದಂತ್ಯಕ್ಕೆ 6 ವಿಕೆಟ್‌ಗೆ 186 ರನ್‌ ಗಳಿಸಿದ್ದ ಭಾರತ, ಶನಿವಾರ ಬ್ಯಾಟಿಂಗ್‌ ಮುಂದುವರಿಸದಿರಲು ನಿರ್ಧರಿಸಿ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು. ಭಾರತೀಯರ ಶಿಸ್ತುಬದ್ಧ ದಾಳಿಯ ಎದುರು ಇಂಗ್ಲೆಂಡ್‌ ನಲುಗಿತು. ಭೋಜನ ವಿರಾಮಕ್ಕೂ ಮೊದಲೇ ಪ್ರವಾಸಿ ತಂಡದ ಇನ್ನಿಂಗ್ಸ್‌ಗೆ ತೆರೆ ಬಿತ್ತು. ಕೇವಲ 27.3 ಓವರ್‌ ಬ್ಯಾಟ್‌ ಮಾಡಿದ ಇಂಗ್ಲೆಂಡ್‌, 131 ರನ್‌ಗೆ ಆಲೌಟ್‌ ಆಯಿತು. ಮೊದಲ ಇನ್ನಿಂಗ್ಸಲ್ಲಿ 5 ವಿಕೆಟ್‌ ಗೊಂಚಲು ಪಡೆದಿದ್ದ ದೀಪ್ತಿ ಶರ್ಮಾ, 2ನೇ ಇನ್ನಿಂಗ್ಸಲ್ಲೂ 4 ವಿಕೆಟ್‌ ಕಿತ್ತರು. ವೇಗಿ ಪೂಜಾ ವಸ್ತ್ರಕರ್‌ಗೆ 3, ಕನ್ನಡತಿ ರಾಜೇಶ್ವರಿ ಗಾಯಕ್ವಾಡ್‌ಗೆ 2, ರೇಣುಕಾ ಸಿಂಗ್‌ಗೆ 1 ವಿಕೆಟ್‌ ಸಿಕ್ಕಿತು.ಸ್ಕೋರ್‌: ಭಾರತ 428 ಹಾಗೂ 186/6 ಡಿ., ಇಂಗ್ಲೆಂಡ್‌ 136 ಹಾಗೂ 131/10 (ನೈಟ್‌ 21, ಡೀನ್‌ 20*, ದೀಪ್ತಿ 4-32, ಪೂಜಾ 3-23) ಪಂದ್ಯಶ್ರೇಷ್ಠ: ದೀಪ್ತಿ ಶರ್ಮಾ

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಬಹಿಷ್ಕಾರದಿಂದ ಪಾಕ್‌ ಯೂಟರ್ನ್‌ ?ಭಾರತ ಜತೆ ಟಿ 20 ಪಂದ್ಯದ ಕುರಿತು ಇಂದು ಘೋಷಣೆ ?
ಮುಳುಗುತ್ತಿದ್ದ ಭಾರತಕ್ಕೆ ಬೆಳಕಾದ ‘ಸೂರ್ಯ’!