ಆಸ್ಟ್ರೇಲಿಯಾ ವಿರುದ್ಧ ಭಾರತ ಮೇಲುಗೈ

KannadaprabhaNewsNetwork |  
Published : Dec 23, 2023, 01:45 AM IST
ಫೋಟೊ: ಟ್ವಿಟರ್‌ | Kannada Prabha

ಸಾರಾಂಶ

ಆಸ್ಟ್ರೇಲಿಯಾದ 219 ರನ್‌ಗೆ ಉತ್ತರವಾಗಿ ಭಾರತ 2ನೇ ದಿನದಂತ್ಯಕ್ಕೆ 7 ವಿಕೆಟ್‌ಗೆ 376 ರನ್‌ ಕಲೆ ಹಾಕಿದ್ದು, ದೊಡ್ಡ ಮೊತ್ತದತ್ತ ದಾಪುಗಾಲಿಟ್ಟಿದೆ.

ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಏಕೈಕ ಟೆಸ್ಟ್‌ನಲ್ಲಿ ಭಾರತ ಮಹಿಳಾ ತಂಡ ಪ್ರಾಬಲ್ಯ ಮುಂದುವರಿಸಿದ್ದು, ಮೊದಲ ಇನ್ನಿಂಗ್ಸ್‌ ಮುನ್ನಡೆ ಸಾಧಿಸಿದೆ. ಆಸ್ಟ್ರೇಲಿಯಾದ 219 ರನ್‌ಗೆ ಉತ್ತರವಾಗಿ ಭಾರತ 2ನೇ ದಿನದಂತ್ಯಕ್ಕೆ 7 ವಿಕೆಟ್‌ಗೆ 376 ರನ್‌ ಕಲೆ ಹಾಕಿದ್ದು, ದೊಡ್ಡ ಮೊತ್ತದತ್ತ ದಾಪುಗಾಲಿಟ್ಟಿದೆ. ಮೊದಲ ದಿನ 19 ಓವರಲ್ಲಿ 1 ವಿಕೆಟ್‌ಗೆ 98 ರನ್ ಗಳಿಸಿದ್ದ ಭಾರತ, ಶುಕ್ರವಾರವೂ ಆಸೀಸ್‌ ಬೌಲರ್‌ಗಳನ್ನು ಚೆಂಡಾಡಿತು. ಸ್ನೇಹಾ ರಾಣಾ(09) ಔಟಾದ ಬೆನ್ನಲ್ಲೇ, 74 ರನ್‌ ಸಿಡಿಸಿ ಶತಕದತ್ತ ಮುನ್ನುಗ್ಗುತ್ತಿದ್ದ ಸ್ಮೃತಿ ಮಂಧನಾ ಕೂಡಾ ಪೆವಿಲಿಯನ್‌ ಸೇರಿದರು. ಆದರೆ 4ನೇ ವಿಕೆಟ್‌ಗೆ ರಿಚಾ ಘೋಷ್‌ ಹಾಗೂ ಜೆಮಿಮಾ ರೋಡ್ರಿಗ್ಸ್‌ 113 ರನ್‌ ಜೊತೆಯಾಟವಾಡಿ, ಆಸೀಸ್‌ ಪಾಲಿಗೆ ಕಂಟಕವಾದರು. ರಿಚಾ 52 ರನ್‌ ಸಿಡಿಸಿದರೆ, ಆಕರ್ಷಕ ಹೊಡೆತಗಳ ಮೂಲಕ ರಂಜಿಸಿದ ಜೆಮಿಮಾ 121 ಎಸೆತಗಳಲ್ಲಿ 73 ರನ್‌ ಬಾರಿಸಿದರು. 260ಕ್ಕೆ 3 ವಿಕೆಟ್‌ ಕಳೆದುಕೊಂಡಿದ್ದ ಭಾರತ, ರಿಚಾ ನಿರ್ಗಮನದ ಬೆನ್ನಲ್ಲೇ ದಿಢೀರ್‌ ಕುಸಿತಕ್ಕೊಳಗಾಯಿತು. ಕೇವಲ 14 ರನ್‌ಗಳ ಅಂತರದಲ್ಲಿ 4 ಪ್ರಮುಖ ವಿಕೆಟ್‌ ಕಳೆದುಕೊಂಡಿತು. ಹರ್ಮನ್‌ಪ್ರೀತ್ ಕೌರ್‌ ಶೂನ್ಯಕ್ಕೆ ಔಟಾದರೆ, ಯಸ್ತಿಕಾ ಭಾಟಿಯಾ ಕೊಡುಗೆ 1 ರನ್‌ ಮಾತ್ರ. ಇನ್ನೇನು ಆಸೀಸ್‌ ಪಂದ್ಯದ ಮೇಲೆ ಹಿಡಿತ ಸಾಧಿಸಿತು ಅನ್ನುವಷ್ಟರಲ್ಲಿ ದೀಪ್ತಿ ಶರ್ಮಾ(ಔಟಾಗದೆ 70) ಹಾಗೂ ಪೂಜಾ ವಸ್ತ್ರಾಕರ್‌(ಔಟಾಗದೆ 33) ಕ್ರೀಸ್‌ನಲ್ಲಿ ನೆಲೆಯೂರಿ ಪ್ರತಿ ಹೋರಾಟ ನಡೆಸಿದರು. ಈ ಜೋಡಿ ಮುರಿಯದ 8ನೇ ವಿಕೆಟ್‌ಗೆ 102 ರನ್‌ ಜೊತೆಯಾಟವಾಡಿದ್ದು, ಭಾರತಕ್ಕೆ ದೊಡ್ಡ ಮೊತ್ತದ ನಿರೀಕ್ಷೆ ಮೂಡಿಸಿದ್ದಾರೆ. ಆ್ಯಶ್ಲೆ ಗಾರ್ಡ್ನರ್‌ 4 ವಿಕೆಟ್‌ ಕಬಳಿಸಿದರು.ಸ್ಕೋರ್‌: ಆಸ್ಟ್ರೇಲಿಯಾ 219/10, ಭಾರತ 376/7(2ನೇ ದಿನದಂತ್ಯಕ್ಕೆ)(ಸ್ಮೃತಿ 74, ಜೆಮಿಮಾ 73, ದೀಪ್ತಿ 70*, ರಿಚಾ 52, ಗಾರ್ಡ್ನರ್‌ 4-100)--14ನೇ ಬ್ಯಾಟರ್‌ಮಹಿಳಾ ಟೆಸ್ಟ್‌ನ ಪಾದಾರ್ಪಣಾ ಪಂದ್ಯದಲ್ಲೇ ಅರ್ಧಶತಕ ಬಾರಿಸಿದ ಭಾರತ 14ನೇ ಬ್ಯಾಟರ್‌ ರಿಚಾ ಘೋಷ್‌. ಜೆಮಿಮಾ ಕೂಡಾ ಶುಕ್ರವಾರ ಫಿಫ್ಟಿ ಪೂರೈಸಿ, 13ನೇ ಬ್ಯಾಟರ್‌ ಎನಿಸಿಕೊಂಡಿದ್ದರು.-(ಚೊಚ್ಚಲ ಟೆಸ್ಟ್‌ ಫಿಫ್ಟಿ ಸಿಡಿಸಿದ ಜೆಮಿಮಾ)

PREV

Recommended Stories

ಸದ್ಯಕ್ಕೆ ನಿಲ್ಲಲ್ಲ ‘ನೋ ಶೇಕ್‌ ಹ್ಯಾಂಡ್‌’ ವಾರ್‌! ಪಾಕಿಸ್ತಾನ ಆಕ್ಷೇಪ
ಕ್ರಿಕೆಟ್‌ ವಾರ್‌ನಲ್ಲೂ ಭಾರತಕ್ಕೆ ಶರಣಾದ ಪಾಕ್‌