ಬಾಕ್ಸಿಂಗ್‌ನಲ್ಲಿ ಭಾರತ ವಿಶ್ವಕ್ಕೇ ಪಂಚ್‌: 6 ಚಿನ್ನ, 2 ಬೆಳ್ಳಿ!

Published : Aug 02, 2026, 12:01 PM IST
Preeti Pawar Wins Boxing Gold for India with Dominant 5-0 Victory Over Canada’s Scarlett Delgado

ಸಾರಾಂಶ

ಫೈನಲ್‌ನಲ್ಲಿ ಸೋತು ಬೆಳ್ಳಿ ಪಡೆದ ಜಾಡುಮನಿ, ಲವ್ಲೀನಾ, ಸಚಿನ್‌ಪ್ಯಾರಾ ಶಾಟ್‌ಪುಟ್‌, ಜಾವೆಲಿನ್‌, ಟ್ರಿಪಲ್‌ ಜಂಪ್‌ನಲ್ಲಿ ಡಬಲ್‌ ಸಂಭ್ರಮ । ಡೆಕಥ್ಲಾನ್‌, ಜುಡೋ ಕಂಚು । ಒಟ್ಟು 10 ಚಿನ್ನ ಸೇರಿ 30 ಮೆಡಲ್

ಗ್ಲಾಸ್ಗೋ: 2026ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತ ಪರಾಕ್ರಮ ಮೆರೆದಿದೆ. ಬಾಕ್ಸಿಂಗ್‌ನಲ್ಲಿ ವಿಶ್ವಕ್ಕೇ ಪಂಚ್‌ ನೀಡಿದ ಭಾರತೀಯರು ಶನಿವಾರ ಒಂದೇ ದಿನ ಬರೋಬ್ಬರಿ 0 ಚಿನ್ನ ಸೇರಿ 8 ಪದಕ ಗೆದ್ದಿದ್ದಾರೆ. ಪ್ಯಾರಾ ಶಾಟ್‌ಪುಟ್‌, ಜಾವೆಲಿನ್‌ ಎಸೆತ, ಟ್ರಿಪಲ್‌ ಜಂಪ್‌, ಜುಡೋ, ಡೆಕಥ್ಲಾನ್‌ನಲ್ಲೂ ಭಾರತೀಯರು ಪದಕ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಶನಿವಾರದ ಭಾರತದ ಪದಕ ಬುಟ್ಟಿಗೆ ಒಟ್ಟು 16 ಪದಕಗಳು ಸೇರ್ಪಡೆಗೊಂಡವು. ಜೊತೆಗೆ, ಪದಕ ಪಟ್ಟಿಯಲ್ಲಿ ದೇಶ ಈಗ 5ನೇ ಸ್ಥಾನಕ್ಕೆ ಜಿಗಿದಿದೆ.

ಈ ಕೂಟದಲ್ಲಿ ಒಟ್ಟು 14 ಬಾಕ್ಸಿಂಗ್‌ ವಿಭಾಗಗಳಿದ್ದವು. ಈ ಪೈಕಿ 10ರಲ್ಲಿ ಭಾರತೀಯರು ಪದಕ ಸಾಧನೆ ಮಾಡಿದ್ದಾರೆ. ಮಹಿಳಾ 54 ಕೆ.ಜಿ. ವಿಭಾಗದಲ್ಲಿ ಪ್ರೀತಿ ಪವಾರ್‌ ಅವರು ಕೆನಡಾದ ಸ್ಕಾರ್ಲೆಟ್‌ ಡೆಲ್ಗಾಡೊ ವಿರುದ್ಧ 5-0 ಅಂತರದಲ್ಲಿ ಗೆದ್ದು ಬಾಕ್ಸಿಂಗ್‌ನಲ್ಲಿ ಮೊದಲ ಚಿನ್ನ ತಂದುಕೊಟ್ಟರು. ಬಳಿಕ 57 ಕೆ.ಜಿ ವಿಭಾಗದಲ್ಲಿ ವಿಶ್ವ ಚಾಂಪಿಯನ್‌ ಜಾಸ್ಮೀನ್ ಲಂಬೋರಿಯಾ ಅವರು ಐರ್ಲೆಂಡ್‌ನ ವಾಲ್ಶ್‌ ವಿರುದ್ಧ ಜಯಭೇರಿ ಬಾರಿಸಿದರು. 51 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಸಾಕ್ಷಿ ಚೌಧರಿ ಇಂಗ್ಲೆಂಡ್‌ನ ರುಬಿ ವೈಟ್‌ ವಿರುದ್ಧ 5-0 ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದರು. 4ನೇ ಚಿನ್ನವನ್ನು ತಂದುಕೊಟ್ಟಿದ್ದು ಪ್ರಿಯಾ ಘಂಘಾಸ್‌. ಅವರು 60 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಕೆನಡಾದ ಮರಿಯಾ ಬಥೋಲ್‌ ಅಲ್‌ ಅಹ್ಮದೀ ವಿರುದ್ಧ ವಿರುದ್ಧ 4-1 ಅಂತರದಲ್ಲಿ ಗೆದ್ದರು. ಪುರುಷರ 60 ಕೆ.ಜಿ. ವಿಭಾಗದಲ್ಲಿ ಸಚಿನ್‌ ಸಿವಾಚ್‌ ಅವರು ನಮೀಬಿಯಾದ ಟ್ರಯಾಗೇನ್‌ ಮಾರ್ನಿಂಗ್‌ ಎನ್‌ಡೆವೆಲೊ ವಿರುದ್ಧ ಗೆದ್ದು ಚಿನ್ನಕ್ಕೆ ಮುತ್ತಿಟ್ಟರು.

ಇಬ್ಬರಿಗೆ ಬೆಳ್ಳಿ:

ಪುರುಷರ 55 ಕೆ.ಜಿ. ವಿಭಾಗದಲ್ಲಿ ಜಾಡುಮನಿ ಸಿಂಗ್‌ ಚಿನ್ನದ ನಿರೀಕ್ಷೆಯಲ್ಲಿದ್ದರೂ ಅವರಿಗೆ ಅದು ಸಾಧ್ಯವಾಗಲಿಲ್ಲ. ಅವರು ಆಸ್ಟ್ರೇಲಿಯಾದ ಜೈ ಡಿಕ್ಷನ್‌ ವಿರುದ್ಧ 0-5 ಅಂತರದಲ್ಲಿ ಪರಾಭವಗೊಂಡರು. ವಿಶ್ವ ಚಾಂಪಿಯನ್‌ ಹಾಗೂ ಒಲಿಂಪಿಕ್ಸ್‌ ಪದಕ ವಿಜೇತೆ ಲವ್ಲೀನಾ ಬೊರ್ಗೊಹೈನ್‌ಗೂ ಚಿನ್ನ ಕೈ ತಪ್ಪಿತು. ಅವರು ಫೈನಲ್‌ನಲ್ಲಿ ಆಸ್ಟ್ರೇಲಿಯಾದ ಎಮ್ಮಾ ಸ್ಯೂ ವಿರುದ್ಧ 1-4 ಅಂತರದಲ್ಲಿ ಸೋಲುಂಡರು.

-ಪದಕ ಪಟ್ಟಿಯಲ್ಲಿ ಭಾರತ ಈಗ 9ರಿಂದ 4ಕ್ಕೆ ಜಿಗಿತ

ಕ್ರೀಡಾಕೂಟ ಆರಂಭದಿಂದಲೂ ಪದಕ ಪಟ್ಟಿಯಲ್ಲಿ 9, 10ನೇ ಸ್ಥಾನಗಳಲ್ಲಿ ಇರುತ್ತಿದ್ದ ಭಾರತ, ಶನಿವಾರ ಒಮ್ಮೆಲೇ 4ನೇ ಸ್ಥಾನಕ್ಕೆ ಜಿಗಿಯಿತು. ಒಟ್ಟು 11 ಪದಕ ಗೆದ್ದಿದ್ದರಿಂದ ಭಾರತ ಪಟ್ಟಿಯಲ್ಲಿ ಸ್ಕಾಟ್ಲೆಂಡ್‌, ನೈಜೀರಿಯಾ, ವೇಲ್ಸ್‌, ನ್ಯೂಜಿಲೆಂಡ್‌ ದೇಶಗಳನ್ನು ಹಿಂದಿಕ್ಕಿತು.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.
Read more Articles on

Recommended Stories

ಜುಡೋದಲ್ಲಿ ಭಾರತಕ್ಕೆ ಐತಿಹಾಸಿಕ ಡಬಲ್‌ ಚಿನ್ನ!
ಕಾಮನ್‌ವೆಲ್ತ್‌ನಲ್ಲಿ ಭಾರತಕ್ಕೆ ಮತ್ತೆ 1 ಚಿನ್ನ, 2 ಬೆಳ್ಳಿ