ಹಾಂಕಾಂಗ್‌ ಸಿಕ್ಸ್‌ನಲ್ಲಿ ಮತ್ತೆ ಭಾರತ ಕಣಕ್ಕೆ: ಪ್ರತಿ ತಂಡದಲ್ಲಿ ಆರು ಆಟಗಾರರು, ತಲಾ 5 ಓವರ್‌ ಆಟ

KannadaprabhaNewsNetwork |  
Published : Oct 08, 2024, 01:01 AM ISTUpdated : Oct 08, 2024, 03:45 AM IST
ಭಾರತ ತಂಡ | Kannada Prabha

ಸಾರಾಂಶ

ನ.1ರಿಂದ ಹಾಂಕಾಂಗ್‌ನಲ್ಲಿ ಟೂರ್ನಿ ಆರಂಭಗೊಳ್ಳಲಿದೆ. 12 ತಂಡ ಭಾಗಿಯಾಗಲಿವೆ. ಈ ಟೂರ್ನಿಯಲ್ಲಿ ಸಾಧಾರಣ ಕ್ರಿಕೆಟ್‌ ಟೂರ್ನಿಗಿಂತ ವಿಭಿನ್ನ ನಿಯಮಗಳು ಇರಲಿವೆ.

ನವದೆಹಲಿ: ಭಾರತ ಕ್ರಿಕೆಟ್‌ ತಂಡ ಈ ಬಾರಿ ಹಾಂಕಾಂಗ್‌ ಸಿಕ್ಸ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. ತಲಾ 6 ಆಟಗಾರರೊಂದಿಗೆ ಆಡುವ ಟೂರ್ನಿ ನ.1ರಿಂದ 3ರ ವರೆಗೆ ಹಾಂಕಾಂಗ್‌ನಲ್ಲಿ ನಡೆಯಲಿದ್ದು, ಒಟ್ಟು 12 ತಂಡಗಳು ಪಾಲ್ಗೊಳ್ಳಲಿವೆ. 

ಈ ಟೂರ್ನಿಯನ್ನು 1993ರಿಂದಲೂ ಹಾಂಕಾಂಗ್ ಕ್ರಿಕೆಟ್‌ ಮಂಡಳಿ ಆಯೋಜಿಸುತ್ತಿದೆ. ಕೆಲ ಆವೃತ್ತಿಗಳಲ್ಲಿ ಭಾರತ ಆಡಿದ್ದು, 2005ರಲ್ಲಿ ಚಾಂಪಿಯನ್‌ ಆಗಿತ್ತು. ಆದರೆ 2017ರ ಬಳಿಕ ಟೂರ್ನಿ ಸ್ಥಗಿತಗೊಂಡಿತ್ತು. ಈ ಬಾರಿ ಮತ್ತೆ ಟೂರ್ನಿ ನಡೆಸಲು ನಿರ್ಧರಿಸಲಾಗಿದೆ. ಆಸ್ಟ್ರೇಲಿಯಾ, ಪಾಕಿಸ್ತಾನ, ಇಂಗ್ಲೆಂಡ್‌, ಶ್ರೀಲಂಕಾ ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. ಟೂರ್ನಿ ಸಾಧಾರಣ ಕ್ರಿಕೆಟ್‌ ಪಂದ್ಯಕ್ಕಿಂತ ವಿಭಿನ್ನವಾದ ನಿಯಮಗಳನ್ನು ಹೊಂದಿದೆ. 

ನಿಯಮಗಳೇನು?

1. ಪ್ರತಿ ತಂಡದಲ್ಲಿ ಆರು ಆಟಗಾರರು. ತಲಾ 5 ಓವರ್‌ ಆಟ. ಫೈನಲ್‌ನಲ್ಲಿ ಮಾತ್ರ ಪ್ರತಿ ಓವರ್‌ಗೆ 8 ಎಸೆತ.2. ವಿಕೆಟ್‌ ಕೀಪರ್‌ ಹೊರತುಪಡಿಸಿ ಬೇರೆಲ್ಲರೂ ತಲಾ 1 ಓವರ್‌ ಬೌಲ್‌ ಮಾಡಬೇಕು. ವೈಡ್‌, ನೋಬಾಲ್‌ಗೆ 2 ರನ್‌.3. ತಂಡದ 5 ಬ್ಯಾಟರ್‌ಗಳು ಔಟಾದರೂ 6ನೇ ಬ್ಯಾಟರ್ ಆಟ ಮುಂದುವರಿಸುತ್ತಾರೆ. ಔಟಾಗದೇ ಇರುವ ಬ್ಯಾಟರ್ ಎಲ್ಲಾ ಸಮಯದಲ್ಲೂ ಸ್ಟ್ರೈಕ್‌ನಲ್ಲಿರಬೇಕು. ಮತ್ತೋರ್ವ ಆಟಗಾರ ಕೇವಲ ರನ್ನರ್‌ ಆಗಿರುತ್ತಾರೆ. 6ನೇ ಬ್ಯಾಟರ್‌ ಔಟಾದರೆ ಮಾತ್ರ ತಂಡ ಆಲೌಟ್‌.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಐಪಿಎಲ್‌ : ಗ್ರೀನ್‌ಗೆ ₹25.2, ಪತಿರನಗೆ ₹18 ಕೋಟಿ ಜಾಕ್‌ಪಾಟ್‌
ಕಪ್‌ತುಳಿತ ತನಿಖಾ ವರದಿ ಹೈಕೋರ್ಟ್‌ ಪರಾಮರ್ಶೆಗೆ