ಕ್ರಿಕೆಟ್‌ ವಾರ್‌ನಲ್ಲೂ ಭಾರತಕ್ಕೆ ಶರಣಾದ ಪಾಕ್‌

Published : Sep 15, 2025, 09:32 AM IST
team india

ಸಾರಾಂಶ

ಬದ್ಧವೈರಿ ಪಾಕಿಸ್ತಾನ ವಿರುದ್ಧ ಭಾರತ ಮತ್ತೆ ಪರಾಕ್ರಮ ಮೆರೆದಿದೆ. ಪಹಲ್ಗಾಂ ಉಗ್ರ ದಾಳಿಯಿಂದಾಗಿ ಭಾರೀ ವಿರೋಧ, ಬಹಿಷ್ಕಾರದ ಬಿಸಿ ಎದುರಿಸಿದ್ದ ಏಷ್ಯಾಕಪ್‌ ಟಿ20 ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಬಗ್ಗುಬಡಿದಿದ್ದು, ಅಭಿಮಾನಿಗಳ ಆಕ್ರೋಶ ತಣಿಯುವಂತೆ ಮಾಡಿದೆ

ದುಬೈ: ಬದ್ಧವೈರಿ ಪಾಕಿಸ್ತಾನ ವಿರುದ್ಧ ಭಾರತ ಮತ್ತೆ ಪರಾಕ್ರಮ ಮೆರೆದಿದೆ. ಪಹಲ್ಗಾಂ ಉಗ್ರ ದಾಳಿಯಿಂದಾಗಿ ಭಾರೀ ವಿರೋಧ, ಬಹಿಷ್ಕಾರದ ಬಿಸಿ ಎದುರಿಸಿದ್ದ ಏಷ್ಯಾಕಪ್‌ ಟಿ20 ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಬಗ್ಗುಬಡಿದಿದ್ದು, ಅಭಿಮಾನಿಗಳ ಆಕ್ರೋಶ ತಣಿಯುವಂತೆ ಮಾಡಿದೆ.

ಭಾನುವಾರ ದುಬೈ ಕ್ರೀಡಾಂಗಣದಲ್ಲಿ ನಡೆದ ‘ಎ’ ಗುಂಪಿನ ಅತಿ ಮಹತ್ವದ ಪಂದ್ಯದಲ್ಲಿ ಸೂರ್ಯಕುಮಾರ್‌ ನಾಯಕತ್ವದ ಭಾರತ 0 ವಿಕೆಟ್‌ ಭರ್ಜರಿ ಗೆಲುವು ಸಾಧಿಸಿತು. ಇದರೊಂದಿಗೆ ತಂಡ ಸೂಪರ್‌-4 ಹಂತದಲ್ಲಿ ತನ್ನ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಅಲ್ಲದೆ, ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಗೆಲುವಿನ ದಾಖಲೆಯನ್ನು ಮತ್ತಷ್ಟು ವಿಸ್ತರಿಸಿತು.

ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ದುಕೊಳ್ಳುವ ಮೂಲಕ ಪಾಕಿಸ್ತಾನ ಅಚ್ಚರಿ ಮೂಡಿಸಿತು. ಪಾಕ್‌ನ ನಿರ್ಧಾರ ತಪ್ಪಾಗಿತ್ತು ಎಂಬುದನ್ನು ಭಾರತದ ಬೌಲರ್‌ಗಳು ಆರಂಭದಲ್ಲೇ ಸಾಬೀತುಪಡಿಸಿದರು. ಭಾರತದ ಮಾರಕ ದಾಳಿ ಮುಂದೆ ರನ್‌ ಗಳಿಸಲು ತಿಣುಕಾಡಿದ ಪಾಕ್‌, 9 ವಿಕೆಟ್‌ ನಷ್ಟದಲ್ಲಿ ಕೇವಲ 127 ರನ್‌ ಗಳಿಸಿತು.

ಈ ಸಣ್ಣ ಮೊತ್ತದ ಗುರಿ ಭಾರತಕ್ಕೆ ಸವಾಲು ಎನಿಸಲಿಲ್ಲ. ಲೀಲಾಜಾಲವಾಗಿ ಬ್ಯಾಟ್‌ ಬೀಸಿದ ಭಾರತ 000 ಓವರ್‌ಗಳಲ್ಲೇ ಗೆಲುವಿನ ದಡ ಸೇರಿತು. ಆರಂಭಿಕ 2 ಎಸೆತಗಳಲ್ಲೇ ಬೌಂಡರಿ, ಸಿಕ್ಸರ್‌ ಮೂಲಕ 10 ರನ್‌ ದೋಚಿದ ಅಭಿಷೇಕ್‌ ಶರ್ಮಾ, ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಶುಭ್‌ಮನ್‌ ಗಿಲ್‌(10 ರನ್‌) 2ನೇ ಓವರ್‌ನಲ್ಲಿ ಔಟಾದರೂ, ತಂಡದ ರನ್‌ ವೇಗಕ್ಕೆ ಕಡಿವಾಣ ಬೀಳಲಿಲ್ಲ. ಅಭಿಷೇಕ್‌ ಕೇವಲ 13 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್‌ನೊಂದಿಗೆ 31 ರನ್‌ ಸಿಡಿಸಿದರು. ಅವರು 4ನೇ ಓವರ್‌ನ 4ನೇ ಎಸೆತದಲ್ಲಿ ಔಟಾಗದೆ ತಂಡದ ಸ್ಕೋರ್‌ 41. ಬಳಿಕ ಸೂರ್ಯಕುಮಾರ್‌ ಯಾದವ್‌ ಹಾಗೂ ತಿಲಕ್‌ ವರ್ಮಾ ತಂಡವನ್ನು ಗೆಲುವಿನ ಸೇರಿಸಿದರು. ಸೂರ್ಯಕುಮಾರ್‌ 00 ಎಸೆತಕ್ಕೆ ಔಟಾಗದೆ 00, ತಿಲಕ್‌ 00 ಎಸೆತಕ್ಕೆ ಔಟಾಗದೆ 00 ರನ್‌ ಸಿಡಿಸಿದರು.

ಮಾರಕ ದಾಳಿ:

ಇದಕ್ಕೂ ಮುನ್ನ ಪಾಕ್‌ ಬ್ಯಾಟರ್‌ಗಳು ರನ್ ಗಳಿಸಲು ತೀವ್ರ ಕಸರತ್ತು ನಡೆಸಿದರು. ತಂಡದ 7 ಬ್ಯಾಟರ್‌ಗಳು ತಾವು ಎದುರಿಸಿದ ಎಸೆತಕ್ಕಿಂತಲೂ ಕಡಿಮೆ ರನ್‌ ಬಾರಿಸಿದರು. ಸೈಮ್‌ ಅಯೂಬ್‌ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ಔಟಾದರು. ಫಖರ್‌ ಜಮಾನ್‌ 17, ಹ್ಯಾರಿಸ್‌ 3, ನಾಯಕ ಸಲ್ಮಾನ್‌ ಆಘಾ 3, ಹಸನ್‌ ನವಾಜ್ 8 ರನ್‌ ಗಳಿಸಿ ನಿರ್ಗಮಿಸಿದರು. ವಿಕೆಟ್‌ ಬೀಳದಂತೆ ನೋಡಿಕೊಂಡ ಆರಂಭಿಕ ಆಟಗಾರ ಫರ್ಹಾನ್‌ 44 ಎಸೆತಕ್ಕೆ 40 ರನ್‌ ರನ್‌ ಸಿಡಿಸಿದರೆ, ಕೊನೆಯಲ್ಲಿ ಅಬ್ಬರಿಸಿದ ಶಾಹೀನ್‌ ಅಫ್ರಿದಿ ಕೇವಲ 16 ಎಸೆತಗಳಲ್ಲೇ 33 ರನ್‌ ಸಿಡಿಸಿ ತಂಡದ ಮೊತ್ತವನ್ನು 120ರ ಗಡಿ ದಾಟಿಸಿದರು. ಭಾರತದ ಪರ ಕುಲ್ದೀಪ್‌ 3, ಅಕ್ಷರ್‌ ಹಾಗೂ ಬೂಮ್ರಾ ತಲಾ 2 ವಿಕೆಟ್‌ ಕಿತ್ತರು.

ಸ್ಕೋರ್‌: ಪಾಕಿಸ್ತಾನ 20 ಓವರಲ್ಲಿ 127/9 (ಫರ್ಹಾನ್‌ 44, ಶಾಹೀನ್‌ ಔಟಾಗದೆ 33, ಕುಲ್ದೀಪ್‌ 3-18, ಅಕ್ಷರ್‌ 2-18, ಬೂಮ್ರಾ 2-28), ಭಾರತ 0000 ಓವರಲ್ಲಿ 0000 (ಅಭಿಷೇಕ್‌ 31, ತಿಲಕ್‌ 31, ಸೂರ್ಯಕುಮಾರ್‌ ಔಟಾಗದೆ 0000 , ಸೈಮ್‌ 

PREV
Read more Articles on

Recommended Stories

ಪಾಕ್‌ ವಿರುದ್ಧ ಗೆದ್ದು ಪಹಲ್ಗಾಂ ಸಂತ್ರಸ್ತರು, ಸೇನೆಗೆ ಅರ್ಪಿಸಿದ ಭಾರತ ಕ್ರಿಕೆಟ್‌ ತಂಡ!
ರಜತ್‌, ಯಶ್‌ ಶತಕ: ದುಲೀಪ್‌ ಟ್ರೋಫಿ ಫೈನಲ್‌ನಲ್ಲಿ ಕೇಂದ್ರ ವಲಯಕ್ಕೆ ಭರ್ಜರಿ ಮುನ್ನಡೆ