ಆಸೀಸ್‌ ಪಂದ್ಯಕ್ಕೆ ಭಾರತ ಕಠಿಣ ಅಭ್ಯಾಸ

KannadaprabhaNewsNetwork | Published : Oct 6, 2023 1:15 AM

ಸಾರಾಂಶ

ಭಾರತ ತಂಡ ಚಿದಂಬರಂ ಕ್ರೀಡಾಂಗಣದಲ್ಲಿ ಅಭ್ಯಾಸ ನಿರತವಾಗಿದೆ
ಚೆನ್ನೈ: ಆಸ್ಟ್ರೇಲಿಯಾ ವಿರುದ್ಧ ಅ.8ರಂದು ನಡೆಯಲಿರುವ ಮೊದಲ ಪಂದ್ಯವನ್ನು ಗೆಲ್ಲುವ ಮೂಲಕ ಐಸಿಸಿ ಏಕದಿನ ವಿಶ್ವಕಪ್‌ಗೆ ಕಾಲಿಡಲು ಎದುರು ನೋಡುತ್ತಿರುವ ಭಾರತ ತಂಡ, ಇಲ್ಲಿನ ಚಿದಂಬರಂ ಕ್ರೀಡಾಂಗಣದಲ್ಲಿ ಕಠಿಣ ಅಭ್ಯಾಸ ನಿರತವಾಗಿದೆ. ಗುರುವಾರ ತಾರಾ ಆಟಗಾರ ವಿರಾಟ್‌ ಕೊಹ್ಲಿ ಸುಮಾರು 45 ನಿಮಿಷಗಳ ಕಾಲ ಬ್ಯಾಟ್‌ ಬೀಸಿದರು. ಶ್ರೇಯಸ್‌ ಅಯ್ಯರ್‌, ಸೂರ್ಯಕುಮಾರ್‌, ಹಾರ್ದಿಕ್‌ ಪಾಂಡ್ಯ, ಕೆ.ಎಲ್‌.ರಾಹುಲ್‌, ಜಡೇಜಾ, ಇಶನ್‌ ಕಿಶಾನ್‌, ವೇಗಿಗಳಾದ ಬೂಮ್ರಾ, ಸಿರಾಜ್‌, ಶಮಿ ಕೂಡಾ ನೆಟ್ಸ್‌ನಲ್ಲಿ ಕಾಣಿಸಿಕೊಂಡರು. ತವರಿನ ಸ್ಪಿನ್‌ ಸ್ನೇಹಿ ಪಿಚ್‌ನಲ್ಲಿ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಲ್ಲಿರುವ ಆರ್‌.ಅಶ್ವಿನ್‌ ಹೆಚ್ಚಿನ ಸಮಯ ಮೈದಾನದಲ್ಲೇ ಕಳೆದರು. ಆಯ್ಕೆಗಾರರು ಮೊದಲ ಪಂದ್ಯಕ್ಕೆ ಹೆಚ್ಚುವರಿ ಸ್ಪಿನ್ನರ್‌ ಆಡಿಸಲು ನಿರ್ಧರಿಸಿದರೆ ಅಶ್ವಿನ್‌ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ.

Share this article