ದುಬೈ: ಬಹುನಿರೀಕ್ಷಿತ 2024ರ ಐಪಿಎಲ್‌ನ ಆಟಗಾರರ ಹರಾಜು ಪ್ರಕ್ರಿಯೆಗೆ ಕ್ಷಣಗಣನೆ ಆರಂಭಗೊಂಡಿದ್ದು, ಒಟ್ಟು 333 ಆಟಗಾರರು ಮಂಗಳವಾರ ನಡೆಯಲಿರುವ ಮಿನಿ ಹರಾಜಿನಲ್ಲಿ ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ. ಇದೇ ಮೊದಲ ಬಾರಿ ಐಪಿಎಲ್ ಹರಾಜು ವಿದೇಶದಲ್ಲಿ ನಡೆಯಲಿದ್ದು, ದುಬೈ ಆತಿಥ್ಯ ವಹಿಸಲಿದೆ.ಬಿಸಿಸಿಐ ಈಗಾಗಲೇ ಹರಾಜಿನಲ್ಲಿ ಪಾಲ್ಗೊಳ್ಳಲಿರುವ ಆಟಗಾರರ ಪಟ್ಟಿ ಪ್ರಕಟಿಸಿದೆ. 1166 ಮಂದಿ ಹರಾಜಿಗೆ ನೋಂದಣಿ ಮಾಡಿಕೊಂಡಿದ್ದರೂ, ಅಂತಿಮವಾಗಿ 333 ಮಂದಿಯನ್ನು ಬಿಸಿಸಿಐ ಹರಾಜಿಗೆ ಆಯ್ಕೆ ಮಾಡಿದೆ. ಸದ್ಯ 214 ಭಾರತೀಯರು, 119 ವಿದೇಶ ಆಟಗಾರರು ಪಟ್ಟಿಯಲ್ಲಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯವಾಡಿದ 116 ಮಂದಿ ಜೊತೆ 215 ಅನ್‌ಕ್ಯಾಪ್ಡ್ (ಅಂ.ರಾ. ಪಂದ್ಯವಾಡದ) ಆಟಗಾರರು ಅಂತಿಮ ಪಟ್ಟಿಯಲ್ಲಿದ್ದಾರೆ. ಮನೀಶ್ ಪಾಂಡೆ, ಶುಭಾಂಗ್ ಹೆಗ್ಡೆ, ಚೇತನ್, ಶ್ರೀಜಿತ್, ಅಭಿಲಾಷ್ ಸೇರಿದಂತೆ ಕರ್ನಾಟಕದ 11 ಮಂದಿ ಕೂಡಾ ಹರಾಜಿನಲ್ಲಿ ಭಾಗಿಯಾಗಲಿದ್ದಾರೆ. 333 ಮಂದಿ ಪೈಕಿ 23 ಮಂದಿ ₹2 ಕೋಟಿ ಮೂಲಬೆಲೆ, 13 ಮಂದಿ 1.5 ಕೋಟಿ ರು. ಮೂಲಬೆಲೆ ಹೊಂದಿದ್ದಾರೆ.ಸದ್ಯ ತಂಡಗಳ ಪೈಕಿ ಗುಜರಾತ್ ಗರಿಷ್ಠ ಅಂದರೆ ₹38.15 ಕೋಟಿ ಹೊಂದಿದ್ದು, ಲಖನೌ ಕನಿಷ್ಠ ಅಂದರೆ ₹13.5 ಕೋಟಿ ಮಾತ್ರ ಹರಾಜಿನಲ್ಲಿ ಬಳಸಬಹುದಾಗಿದೆ.77 ಸ್ಥಾನ ಖಾಲಿ: ಈಗಾಗಲೇ ಎಲ್ಲಾ ತಂಡಗಳು ಕಳೆದ ಬಾರಿ ತಂಡದಲ್ಲಿದ್ದ ಹಲವರನ್ನು ರೀಟೈನ್ ಮಾಡಿಕೊಂಡಿದೆ. ಹೀಗಾಗಿ ಸದ್ಯ 10 ತಂಡಗಳಲ್ಲಿ 77 ಸ್ಥಾನಗಳು ಖಾಲಿ ಇವೆ. ಈ ಪೈಕಿ 30 ಸ್ಥಾನಗಳು ವಿದೇಶಿಯರಿಗೆ ಮೀಸಲು. -
ಸ್ಟಾರ್‌ಗಳ ಮೇಲೆ ಕಣ್ಣು!ಈ ಬಾರಿ ಹರಾಜಿನಲ್ಲಿ ಹಲವು ತಾರಾ ಆಟಗಾರರು ಭಾಗಿಯಾಗಲಿದ್ದಾರೆ. ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಟ್ರ್ಯಾವಿಸ್ ಹೆಡ್, ದ.ಆಫ್ರಿಕಾದ ಗೆರಾಲ್ಡ್ ಕೋಟ್ಜೀ, ಇಂಗ್ಲೆಂಡ್‌ನ ಹ್ಯಾರಿ ಬ್ರೂಕ್, ನ್ಯೂಜಿಲೆಂಡ್‌ನ ಡ್ಯಾರಿಲ್ ಮಿಚೆಲ್, ರಚಿನ್ ರವೀಂದ್ರ, ಭಾರತದ ಮನೀಶ್ ಪಾಂಡೆ, ಕರುಣ್ ನಾಯರ್, ಶಾರ್ದೂಲ್ ಠಾಕೂರ್ ಪ್ರಮುಖ ಆಕರ್ಷಣೆ ಎನಿಸಿಕೊಂಡಿದ್ದಾರೆ. ಆದರೆ ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್, ಜೋ ರೂಟ್, ಜೋಫ್ರಾ ಆರ್ಚರ್, ಬಾಂಗ್ಲಾದೇಶದ ಶಕೀಬ್ ಸೇರಿ ಹಲವರು ಈ ಬಾರಿ ಹರಾಜಿನಲ್ಲಿಲ್ಲ.-ಯಾರಿಗೆ ಬಂಪರ್?ವಿವಿಧ ತಂಡಗಳ ನಡುವೆ ಖರೀದಿಗೆ ತೀವ್ರ ಪೈಪೋಟ ನೀಡಬಲ್ಲ ಆಟಗಾರರು ಈ ಬಾರಿ ಹಲವರಿದ್ದಾರೆ. ಸ್ಟಾರ್ಕ್, ರಚಿನ್ ರವೀಂದ್ರ, ಕೋಟ್ಜೀ, ಕಮಿನ್ಸ್, ಹರ್ಷಲ್ ಪಟೇಲ್, ಉಮೇಶ್ ಯಾದವ್, ಹಸರಂಗ, ಶಾರುಖ್ ಖಾನ್‌ಗೆ ಈ ಬಾರಿ ಮೂಲಬೆಲೆಗಿಂತ ಹಲವು ಪಟ್ಟು ಹೆಚ್ಚಿನ ಮೊತ್ತಕ್ಕೆ ಬಿಕರಿಯಾಗುವ ನಿರೀಕ್ಷೆಯಿದೆ.
-ಐಪಿಎಲ್ ಮಿನಿ ಹರಾಜು ವಿವರತಂಡತಂಡದಲ್ಲಿರುವ ಆಟಗಾರರುಬೇಕಿರುವ ಆಟಗಾರರುವಿದೇಶಿಗರುಬಾಕಿ ಇರುವ ಮೊತ್ತ(ಕೋಟಿ ರು.ಗಳಲ್ಲಿ)ಚೆನ್ನೈ19060331.4ಡೆಲ್ಲಿ16090428.95ಗುಜರಾತ್17080238.15ಕೋಲ್ಕತಾ13120432.7ಲಖನೌ19060213.15ಮುಂಬೈ17080417.75ಪಂಜಾಬ್17080229.1ಆರ್‌ಸಿಬಿ19060323.25ರಾಜಸ್ಥಾನ17080314.5ಹೈದ್ರಾಬಾದ್19060334---ಈ ಬಾರಿ ಪ್ರತಿ ಫ್ರಾಂಚೈಸಿಯು ಸ್ಪಷ್ಟ ಗುರಿಯೊಂದಿಗೆ ಹರಾಜಿನಲ್ಲಿ ಪಾಲ್ಗೊಳ್ಳಲಿವೆ. ತಂಡಗಳು ಈಗಾಗಲೇ ತಮ್ಮ ತಂಡಕ್ಕಿರುವ ಅವಶ್ಯಕತೆಗಳ ಪಟ್ಟಿ ತಯಾರಿಸಿ ಹರಾಜಿಗೆ ಸಿದ್ಧವಾಗಿವೆ. ಈ ಬಾರಿ 10 ತಂಡಗಳಿಗಿರುವ ಅವಶ್ಯಕತೆ ಏನು? ಯಾವ ಆಟಗಾರರನ್ನು ಖರೀದಿಸಲು ಹೆಚ್ಚು ಪ್ರಯತ್ನಿಸಬಹುದು ಎಂಬುದರ ವಿಶ್ಲೇಷಣೆ ಇಲ್ಲಿದೆ.ಚೆನ್ನೈ: ಹಾಲಿ ಚಾಂಪಿಯನ್ ಚೆನ್ನೈ ಹೆಚ್ಚೂ ಕಡಿಮೆ ಕಳೆದ ಬಾರಿ ತಂಡವನ್ನೇ ಉಳಿಸಿಕೊಂಡಿದೆ. ಇದರ ಹೊರತಾಗಿಯೂ ತಂಡಕ್ಕೆ ಮ್ಯಾಚ್ ವಿನ್ನರ್ ಆಲ್ರೌಂಡರ್ ಆಗತ್ಯವಿದೆ. ಭಾರತೀಯ ಬ್ಯಾಟರ್, ವಿದೇಶಿ ವೇಗಿ ಮೇಲೆ ತಂಡ ಕಣ್ಣಿಟ್ಟಿದೆ.ಡೆಲ್ಲಿ: ಡೆಲ್ಲಿ ಕಳೆದ ಬಾರಿಯ 9 ಆಟಗಾರರನ್ನು ತಂಡದಿಂದ ಕೈಬಿಟ್ಟಿದೆ. 2024ರಲ್ಲಿ ಪಂತ್ ಆಡುವ ಸಾಧ್ಯತೆಯಿದ್ದರೂ ಮೀಸಲು ವಿಕೆಟ್ ಕೀಪರ್ ತಂಡಕ್ಕೆ ಅತ್ಯಗತ್ಯ. ಭಾರತೀಯ ವೇಗಿ, ವಿದೇಶಿ ಹಾಗೂ ಭಾರತೀಯ ಬ್ಯಾಟರ್‌ಗಳು ಕೂಡಾ ತಂಡಕ್ಕೆ ಬೇಕಾಗಿದ್ದಾರೆ.ಗುಜರಾತ್: ಹಾರ್ದಿಕ್ ಮುಂಬೈ ಸೇರಿರುವ ಕಾರಣ ಅವರ ಸ್ಥಾನ ತುಂಬಬಲ್ಲ ಆಲ್ರೌಂಡರನ್ನು ಗುಜರಾತ್ ಹುಡುಕುತ್ತಿದೆ. ಮೀಸಲು ವಿಕೆಟ್ ಕೀಪರ್ ಮೇಲೂ ತಂಡ ಕಣ್ಣಿಟ್ಟಿದ್ದು, ಮಧ್ಯಮ ಕ್ರಮಾಂಕದ ಬ್ಯಾಟರ್, ದೇಸಿ ಹಾಗೂ ವಿದೇಶಿ ವೇಗಿಗಳೂ ತಂಡಕ್ಕೆ ಅಗತ್ಯವಿದ್ದಾರೆ.
ಕೋಲ್ಕತಾ: ಪ್ರಮುಖ ವೇಗಿಗಳನ್ನೆಲ್ಲಾ ತಂಡದಿಂದ ಕೈಬಿಟ್ಟಿರುವ ಕೋಲ್ಕತಾಕ್ಕೆ ಹರಾಜಿನಲ್ಲಿ ಭಾರತ ಹಾಗೂ ವಿದೇಶಿ ವೇಗಿಗಳನ್ನು ಖರೀದಿಸುವುದು ಪ್ರಮುಖ ಗುರಿ. ಮೀಸಲು ವಿಕೆಟ್ ಕೀಪರ್, ಆಲ್ರೌಂಡರ್ ಹೊಣೆ ನಿಭಾಯಿಸಬಲ್ಲ ಆಟಗಾರರೂ ತಂಡಕ್ಕೆ ಅತ್ಯಗತ್ಯ.ಲಖನೌ: ತಂಡದ ಬಳಿ ಇತರೆಲ್ಲಾ ತಂಡಕ್ಕಿಂತ ಕನಿಷ್ಠ ಅಂದರೆ ₹13.15 ಕೋಟಿ ಇದೆ. ಇಷ್ಟರಲ್ಲೇ ಮಧ್ಯಮ ಕ್ರಮಾಂಕದ ಬ್ಯಾಟರ್, ವೇಗದ ಬೌಲಿಂಗ್ ಆಲ್ರೌಂಡರ್, ತಜ್ಞ ವೇಗಿಯನ್ನು ತಂಡ ಖರೀದಿಸಬೇಕಿದೆ. ಮುಂಬೈ: ಹಾರ್ದಿಕ್ ಮರಳಿದ್ದರಿಂದ ತಂಡ ಬಲಿಷ್ಠವಾಗಿ ತೋರುತ್ತಿದ್ದರೂ ತಂಡಕ್ಕೆ ತಜ್ಞ ವೇಗಿಗಳ ಕೊರತೆ ಎದುರಾಗಬಹುದು. ಹೀಗಾಗಿ ಬೂಮ್ರಾಗೆ ನೆರವಾಗಬಲ್ಲ ವೇಗಿಗಳ ಹುಡುಕಾಟದಲ್ಲಿದೆ. ಸ್ಪಿನ್ ಆಲ್ರೌಂಡರ್ ಕೂಡಾ ತಂಡದ ಮುಂದಿರುವ ಪ್ರಮುಖ ಗುರಿ.
ಪಂಜಾಬ್: ತಂಡದ ಬಳಿ ₹29.1 ಕೋಟಿ ಇದ್ದು, 8 ಆಟಗಾರರು ಅಗತ್ಯವಿದೆ. ಈ ಪೈಕಿ ಇಬ್ಬರು ವಿದೇಶಿಗರು. ತಂಡಕ್ಕೆ ಅಗ್ರ, ಮಧ್ಯಮ ಕ್ರಮಾಂಕದ ದೇಸಿ, ವಿದೇಶಿ ಬ್ಯಾಟರ್ ಅಗತ್ಯವಿದ್ದು, ಕೆಲ ತಜ್ಞ ಭಾರತೀಯ ವೇಗಿಗಳು, ಆಲ್ರೌಂಡರ್ಸ್ ಬೇಕಾಗಿದ್ದಾರೆ. ರಾಜಸ್ಥಾನ: ರಾಜಸ್ಥಾನ ದೇಸಿ ಬೌಲಿಂಗ್ ಆಲ್ರೌಂಡರ್ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್ ಕೊರತೆ ಎದುರಿಸುತ್ತಿದೆ. ಆದರೆ ಒಟ್ಟು 8 ಆಟಗಾರರನ್ನು ಖರೀದಿಸಲು ತಂಡದ ಬಳಿ ಕೇವಲ ₹14.5 ಕೋಟಿ ಇದೆ. ಹೀಗಾಗಿ ಹರಾಜಿನಲ್ಲಿ ಅಳೆದುತೂಗಿ ಖರೀದಿ ಮಾಡಬೇಕಾಗಬಹುದು.ಆರ್‌ಸಿಬಿ: ಬ್ಯಾಟಿಂಗ್ ವಿಭಾಗ ಈ ಬಾರಿಯೂ ಉತ್ತಮವಾಗಿರುವಂತೆ ತೋರುತ್ತಿದ್ದರೂ, ಮಧ್ಯಮ ಕ್ರಮಾಂಕದಲ್ಲಿ ನೆರವಾಗಬಲ್ಲ ಬ್ಯಾಟರ್ ಅಗತ್ಯವಿದೆ. ತಂಡಕ್ಕೆ ಪ್ರಮುಖವಾಗಿ ಬೇಕಿರುವುದು ವೇಗಿಗಳು. ಮುಂಚೂಣಿ ಸ್ಪಿನ್ನರ್ ಕೊರತೆಯೂ ತಂಡಕ್ಕಿದ್ದು, ಮೀಸಲು ವಿಕೆಟ್ ಕೀಪರ್ ಕೂಡಾ ಬೇಕಿದೆ.ಹೈದ್ರಾಬಾದ್: ತಂಡದ ಬಳಿ ಸಾಕಷ್ಟು ಹಣವಿದ್ದು, ಪ್ರಮುಖ ಗುರಿ ವಿಶ್ವ ಶ್ರೇಷ್ಠ ಸ್ಪಿನ್ನರ್ ಹಾಗೂ ವಿದೇಶಿ ಬ್ಯಾಟರ್. ಪಂದ್ಯ ಗೆಲ್ಲಿಸಬಲ್ಲ ಆಲ್ರೌಂಡರ್ ಕೂಡಾ ತಂಡಕ್ಕೆ ಅತ್ಯಗತ್ಯ. ಮುಖ್ಯವಾಗಿ ಭಾರತೀಯ ವೇಗಿಯ ಕೊರತೆ ಎದುರಿಸುತ್ತಿದೆ.----ಮುಂದಿನ ವರ್ಷ ಮೆಗಾ ಹರಾಜುಐಪಿಎಲ್‌ನಲ್ಲಿ 2 ಮಾದರಿ ಹರಾಜು ನಡೆಯಲಿದೆ. ಮಿನಿ ಹರಾಜು ಪ್ರತಿ ವರ್ಷ ನಡೆಯಲಿದ್ದು, ಮೆಗಾ ಹರಾಜು ಪ್ರಕ್ರಿಯೆ ಸಾಧಾರಣವಾಗಿ 3 ವರ್ಷಕ್ಕೊಮ್ಮೆ ನಡೆಯುತ್ತದೆ. 2022ರಲ್ಲಿ ಮೆಗಾ ಹರಾಜು ನಡೆದಿದ್ದು, ಮುಂದಿನ ಮೆಗಾ ಹರಾಜು 2025ರಲ್ಲಿ ನಡೆಯಲಿದೆ. ಅಂದರೆ ಫ್ರಾಂಚೈಸಿಗಳು ಸೀಮಿತ ಆಟಗಾರರನ್ನು ಮಾತ್ರ ತಂಡದಲ್ಲಿ ಉಳಿಸಿ ಇತರರನ್ನು ಹರಾಜಿನಲ್ಲಿ ಖರೀದಿಸಬೇಕಿದೆ.---262ಈ ಬಾರಿ ಎಲ್ಲಾ 10 ತಂಡಗಳು ಹರಾಜಿನಲ್ಲಿ ಆಟಗಾರರ ಖರೀದಿಗೆ ಒಟ್ಟು 262.95 ಕೋಟಿ ರು. ಖರ್ಚು ಮಾಡಬಹುದು.173ಹರಾಜಿಗೂ ಮುನ್ನ ಎಲ್ಲಾ 10 ಫ್ರಾಂಚೈಸಿಗಳು ರೀಟೈನ್ ಮಾಡಿಕೊಂಡಿರುವ ಆಟಗಾರರ ಸಂಖ್ಯೆ 173.77ಹರಾಜಿನಲ್ಲಿ 10 ತಂಡಗಳಿಗೆ ಬಿಕರಿಯಾಗಬಹುದಾದ ಅಟಗಾರರ ಗರಿಷ್ಠ ಸಂಖ್ಯೆ 77.30ಹರಾಜಿನಲ್ಲಿ 77 ಖಾಲಿ ಸ್ಥಾನಗಳ ಪೈಕಿ 30 ಸ್ಥಾನಗಳು ವಿದೇಶಿ ಆಟಗಾರರಿಗೆ ಮೀಸಲು.
--ಹರಾಜು ಆರಂಭ: ಭಾರತೀಯ ಕಾಲಮನಾ ಮಧ್ಯಾಹ್ನ 1ಕ್ಕೆ
ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್ ನೆಟ್‌ವರ್ಕ್, ಜಿಯೋ ಸಿನೆಮಾ