ಜೋಸ್ ಬಟ್ಲರ್ ಸ್ಫೋಟಕ ಆಟದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ 7 ವಿಕೆಟ್ ಜಯಗಳಿಸಿದೆ. ಇದರೊಂದಿಗೆ ತಂಡ ಅಂಕಪಟ್ಟಿಯಲ್ಲಿ 5ನೇ ಜಯದೊಂದಿಗೆ ಅಗ್ರಸ್ಥಾನಕ್ಕೇರಿದೆ. 7 ಪಂದ್ಯಗಳಲ್ಲಿ 2ನೇ ಸೋಲುಂಡ ಡೆಲ್ಲಿ 2ನೇ ಸ್ಥಾನಕ್ಕೆ ಕುಸಿಯಿತು.
ಅಹಮದಾಬಾದ್: ಜೋಸ್ ಬಟ್ಲರ್ ಸ್ಫೋಟಕ ಆಟದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ 7 ವಿಕೆಟ್ ಜಯಗಳಿಸಿದೆ. ಇದರೊಂದಿಗೆ ತಂಡ ಅಂಕಪಟ್ಟಿಯಲ್ಲಿ 5ನೇ ಜಯದೊಂದಿಗೆ ಅಗ್ರಸ್ಥಾನಕ್ಕೇರಿದೆ. 7 ಪಂದ್ಯಗಳಲ್ಲಿ 2ನೇ ಸೋಲುಂಡ ಡೆಲ್ಲಿ 2ನೇ ಸ್ಥಾನಕ್ಕೆ ಕುಸಿಯಿತು.
ಮೊದಲು ಬ್ಯಾಟ್ ಮಾಡಿದ ಡೆಲ್ಲಿ 8 ವಿಕೆಟ್‌ಗೆ 203 ರನ್ ಕಲೆಹಾಕಿತು. ತಂಡದ ಯಾರೊಬ್ಬರೂ ಅರ್ಧಶತಕ ಗಳಿಸದಿದ್ದರೂ ಉತ್ತಮ ಮೊತ್ತ ಮೂಡಿಬಂತು. ಕರುಣ್ ನಾಯರ್ 18 ಎಸೆತಕ್ಕೆ 31, ಕೆ.ಎಲ್.ರಾಹುಲ್ 14 ಎಸೆತಕ್ಕೆ 28 ರನ್ ಗಳಿಸಿದರು. ಇವರಿಬ್ಬರನ್ನೂ ಕರ್ನಾಟಕದವರೇ ಆದ ಪ್ರಸಿದ್ಧ್ ಕೃಷ್ಣ ಪೆವಿಲಿಯನ್‌ಗೆ ಅಟ್ಟಿದರು. ನಾಯಕ ಅಕ್ಷರ್ ಪಟೇಲ್ 39, ಅಶುತೋಷ್ ಶರ್ಮಾ 37, ಟ್ರಿಸ್ಟನ್ ಸ್ಟಬ್ಸ್ 31 ರನ್ ಬಾರಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಪ್ರಸಿದ್ಧ್ ಕೃಷ್ಣ 41 ರನ್ ನೀಡಿ 4 ವಿಕೆಟ್ ಕಿತ್ತರು.
ದೊಡ್ಡ ಗುರಿ ಬೆನ್ನತ್ತಿದ ಗುಜರಾತ್, 19.2 ಓವರ್‌ಗಳಲ್ಲೇ ಗೆಲುವು ತನ್ನದಾಗಿಸಿಕೊಂಡಿತು. ಸಾಯ್ ಸುದರ್ಶನ್ 36 ರನ್ ಗಳಿಸಿದರು. 3ನೇ ವಿಕೆಟ್‌ಗೆ ಶತಕದ ಜೊತೆಯಾಟವಾಡಿದ ಬಟ್ಲರ್-ರುಥರ್‌ಫೋರ್ಡ್(43) ತಂಡವನ್ನು ಗೆಲ್ಲಿಸಿದರು. ಬಟ್ಲರ್ 54 ಎಸೆತಕ್ಕೆ ಔಟಾಗದೆ 97 ರನ್ ಗಳಿಸಿದರು.
ಸ್ಕೋರ್: ಡೆಲ್ಲಿ 203/8 (ಅಕ್ಷರ್ 39, ಅಶುತೋಷ್ 37, ಕರುಣ್ 31, ಸ್ಟಬ್ಸ್ 31, ಪ್ರಸಿದ್ಧ್ 4-41), ಗುಜರಾತ್ 19.2 ಓವರಲ್ಲಿ 204/3 (ಬಟ್ಲರ್ 97*, ರುಥರ್‌ಫೋರ್ಡ್ 43, ಕುಲ್ದೀಪ್ 1-30)
ಪಂದ್ಯಶ್ರೇಷ್ಠ: ಜೋಸ್ ಬಟ್ಲರ್
01ನೇ ಬಾರಿ
ಗುಜರಾತ್ ತಂಡ ಮೊದಲ ಬಾರಿ ಐಪಿಎಲ್‌ನಲ್ಲಿ 200+ ರನ್ ಗುರಿ ಬೆನ್ನತ್ತಿ ಜಯಗಳಿಸಿತು.