ಐರ್ಲೆಂಡ್‌ಗೆ ಚೊಚ್ಚಲ ಟೆಸ್ಟ್‌ ಜಯದ ಸಿಹಿ!

KannadaprabhaNewsNetwork |  
Published : Mar 02, 2024, 01:49 AM IST
ಐರ್ಲೆಂಡ್‌ಗೆ ಚೊಚ್ಚಲ ಟೆಸ್ಟ್‌ ಜಯದ ಸಿಹಿ! | Kannada Prabha

ಸಾರಾಂಶ

ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್‌ನಲ್ಲಿ ಐರ್ಲೆಂಡ್‌ 6 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಮೊದಲ ಜಯ ದಾಖಲಿಸಿತು.

ಅಬು ಧಾಬಿ: ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್‌ನಲ್ಲಿ ಐರ್ಲೆಂಡ್‌ 6 ವಿಕೆಟ್‌ಗಳ ಜಯ ಸಾಧಿಸಿದೆ. ಇದರೊಂದಿಗೆ ಚೊಚ್ಚಲ ಟೆಸ್ಟ್‌ ಗೆಲುವಿನ ಸಂಭ್ರಮ ಆಚರಿಸಿದೆ. ತಾನಾಡಿದ 8ನೇ ಪಂದ್ಯದಲ್ಲಿ ಐರ್ಲೆಂಡ್‌ಗೆ ಮೊದಲ ಜಯ ದಕ್ಕಿದೆ. ಗೆಲ್ಲಲು 111 ರನ್‌ ಗುರಿ ಬೆನ್ನತ್ತಿದ ಐರಿಷ್‌ ಪಡೆ 31.3 ಓವರಲ್ಲಿ 4 ವಿಕೆಟ್‌ ಕಳೆದುಕೊಂಡು ಜಯಿಸಿತು. ನಾಯಕ ಆ್ಯಂಡಿ ಬಾಲ್ಬರ್ನಿ ಔಟಾಗದೆ 58 ರನ್‌ ಗಳಿಸಿದರು. 2ನೇ ಇನ್ನಿಂಗ್ಸಲ್ಲಿ ಆಫ್ಘನ್‌ 218 ರನ್‌ ಗಳಿಸಿತ್ತು.ಸ್ಕೋರ್‌: ಅಫ್ಘಾನಿಸ್ತಾನ 155 ಹಾಗೂ 218, ಐರ್ಲೆಂಡ್‌ 263 ಹಾಗೂ 111/4

ಮೊದಲ ಟೆಸ್ಟ್‌ ಜಯಕ್ಕೆ

ತೆಗೆದುಕೊಂಡ ಪಂದ್ಯಗಳು

ತಂಡಟೆಸ್ಟ್‌ಆಸ್ಟ್ರೇಲಿಯಾ01

ಇಂಗ್ಲೆಂಡ್‌02

ಪಾಕಿಸ್ತಾನ02

ಅಫ್ಘಾನಿಸ್ತಾನ02

ವಿಂಡೀಸ್‌06

ಐರ್ಲೆಂಡ್‌08

ಜಿಂಬಾಬ್ವೆ11

ದಕ್ಷಿಣ ಆಫ್ರಿಕಾ12

ಶ್ರೀಲಂಕಾ14

ಭಾರತ25

ಬಾಂಗ್ಲಾದೇಶ35

ನ್ಯೂಜಿಲೆಂಡ್‌45

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

103 ಡಿಗ್ರಿ ಜ್ವರದಲ್ಲೂ ಡಬ್ಲ್ಯುಪಿಎಲ್‌ ಫೈನಲ್‌ ಆಡಿದ ಸ್ಮೃತಿ ಮಂಧನಾ!
ಆರ್‌ಸಿಬಿಯ ಮುಕುಟಕ್ಕೆ ಹ್ಯಾಟ್ರಿಕ್‌ ಕಿರೀಟ!