ಶಮಿ, ರಿಷಭ್ ಕ್ರಿಕೆಟ್‌ ಕಮ್‌ಬ್ಯಾಕ್‌ ಬಗ್ಗೆ ಅಪ್ಡೇಟ್ ಕೊಟ್ಟ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ

KannadaprabhaNewsNetwork |  
Published : Mar 12, 2024, 02:05 AM ISTUpdated : Mar 12, 2024, 08:02 AM IST
ಜಯ್‌ ಶಾ | Kannada Prabha

ಸಾರಾಂಶ

ಶಮಿ ವಿಶ್ವಕಪ್‌ ವೇಳೆ ಗಾಯಗೊಂಡು ಇತ್ತೀಚೆಗಷ್ಟೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ರಿಷಭತ್‌ ಪಂತ್‌ 2022ರ ಡಿಸೆಂಬರ್‌ ಕೊನೆಯಲ್ಲಿ ಭೀಕರ ರಸ್ತೆ ಅಪಘಾತಕ್ಕೆ ತುತ್ತಾಗಿದ್ದರು.

ಧರ್ಮಶಾಲಾ: ಐಸಿಸಿ ಏಕದಿನ ವಿಶ್ವಕಪ್‌ ವೇಳೆ ಹಿಮ್ಮಡಿ ಗಾಯಕ್ಕೆ ತುತ್ತಾಗಿ ಇತ್ತೀಚೆಗಷ್ಟೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಭಾರತದ ತಾರಾ ವೇಗಿ ಮೊಹಮದ್‌ ಶಮಿ ಸೆಪ್ಟೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ತವರಿನ ಟೆಸ್ಟ್‌ ಸರಣಿಗೂ ಮುನ್ನ ಫಿಟ್‌ ಆಗುವ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಶಮಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಬಾಂಗ್ಲಾದೇಶ ವಿರುದ್ಧ ಸರಣಿಗೂ ಮುನ್ನ ಅವರು ಸಂಪೂರ್ಣ ಚೇತರಿಸಿಕೊಳ್ಳಬಹುದು. ಕೆ.ಎಲ್‌.ರಾಹುಲ್‌ಗೆ ಇಂಜೆಕ್ಷನ್‌ ಅಗತ್ಯವಿದೆ. 

ಅವರು ಈಗ ಎನ್‌ಸಿಎನಲ್ಲಿದ್ದಾರೆ’ ಎಂದು ತಿಳಿಸಿದ್ದಾರೆ. ಇನ್ನು, ರಿಷಭ್‌ ಪಂತ್‌ ಬಗ್ಗೆಯೂ ಜಯ್‌ ಶಾ ಮಾಹಿತಿ ನೀಡಿದ್ದು, ಪಂತ್‌ ಟಿ20 ವಿಶ್ವಕಪ್‌ನಲ್ಲಿ ಆಡಿದರೆ ಉತ್ತಮ ಎಂದಿದ್ದಾರೆ.

‘ರಿಷಭ್‌ ಉತ್ತಮ ಬ್ಯಾಟಿಂಗ್‌, ಕೀಪಿಂಗ್ ಮಾಡುತ್ತಿದ್ದಾರೆ. ಅವರ ಫಿಟ್‌ ಆಗಿದ್ದಾರೆಂದು ಶೀಘ್ರದಲ್ಲೇ ಘೋಷಿಸುತ್ತೇವೆ. ಅವರು ನಮ್ಮ ದೊಡ್ಡ ಆಸ್ತಿ.

ಅವರು ಸಂಪೂರ್ಣ ಫಿಟ್‌ ಆದರೆ ವಿಶ್ವಕಪ್‌ನಲ್ಲೂ ಆಡಬಹುದು. ಐಪಿಎಲ್‌ನಲ್ಲಿ ಹೇಗೆ ಪ್ರದರ್ಶನ ನೀಡುತ್ತಾರೆ ಎಂದು ಗಮನಿಸುತ್ತೇವೆ’ ಎಂದು ಶಾ ತಿಳಿಸಿದ್ದಾರೆ.

PREV

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ವಯೋ ವಂಚನೆ ಪತ್ತೆಗೆ ಖಾಸಗಿ ಸಂಸ್ಥೆ ನೆರವುಪಡೆಯಲಿದೆ ಬಿಸಿಸಿಐ