ಕೊಡವ ಹಾಕಿ: ಚೇನಂಡ, ಮುಕ್ಕಾಟಿರ ತಂಡಗಳಿಗೆ ಟೈ ಬ್ರೇಕರ್‌ನಲ್ಲಿ ಗೆಲುವು

KannadaprabhaNewsNetwork |  
Published : Apr 20, 2024, 01:10 AM ISTUpdated : Apr 20, 2024, 04:13 AM IST
32 | Kannada Prabha

ಸಾರಾಂಶ

ಚೆರಿಯ ಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಂಡ್ಯೋಳಂಡ ಕಪ್ ಹಾಕಿ ಪಂದ್ಯಾವಳಿ ಹಲವು ತಂಡಗಳಿಗೆ ಮುನ್ನಡೆ.

ದುಗ್ಗಳ ಸದಾನಂದ

 ನಾಪೋಕ್ಲು : ಇಲ್ಲಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಂಡ್ಯೋಳಂಡ ಕಪ್ ಹಾಕಿ ಪಂದ್ಯಾವಳಿಯ ಶುಕ್ರವಾರದ ಪಂದ್ಯಗಳಲ್ಲಿ ಚೇನಂಡ ಮತ್ತು ಮುಕ್ಕಾಟಿರ (ಬೋಂದ) ತಂಡಗಳು ಟೈ ಬ್ರೇಕರ್‌ನಲ್ಲಿ ಗೆಲವು ಸಾಧಿಸಿದವು.ಚೇನಂಡ ತಂಡ ಮಾಚಿಮಂಡ ವಿರುದ್ಧ ಟೈ ಬ್ರೇಕರ್ ನಲ್ಲಿ 3- 0 ಅಂತರದ ಜಯ ಸಾಧಿಸಿತು .ಮತ್ತೊಂದು ಪಂದ್ಯದಲ್ಲಿ ಮುಕ್ಕಾಟಿರ (ಬೋಂದ) ಟೈ ಬ್ರೇಕರ್‌ನಲ್ಲಿ ಬಿದ್ದಂಡ ವಿರುದ್ಧ 5-4 ಅಂತರದಲ್ಲಿ ಗೆಲವು ಸಾಧಿಸಿತು.ಪುಲ್ಲಂಗಡ ಮತ್ತು ಮಂಡೇಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪುಲ್ಲಂಗಡ 1-0 ಅಂತರದಿಂದ ಮಂಡೇಟಿರ ವಿರುದ್ಧ ಜಯ ಸಾಧಿಸಿತು. 

ಮಣವಟ್ಟಿರ ಮತ್ತು ಚೆಪ್ಪುಡಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೆಪ್ಪುಡಿರ ಮಣವಟ್ಟಿರ ವಿರುದ್ಧ 2-1ಅಂತರದ ಗೆಲವು ಸಾಧಿಸಿತು.ಚಂದುರ ಮತ್ತು ಪುದಿಯೊಕ್ಕಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚಂದುರ 2-0 ಪುದಿಯೊಕ್ಕಡ ವಿರುದ್ಧ ಜಯ ಸಾಧಿಸಿತು. ತೀತಮಾಡ ತಂಡದ ವಿರುದ್ಧ ಚೆಕ್ಕೆರ 4-0 ಅಂತರದಲ್ಲಿ ಜಯ ಗಳಿಸಿತು.ಅಮ್ಮಣಿಚಂಡ ತಂಡಕ್ಕೆ ಕೋಡಿಮಣಿಯಂಡ ವಿರುದ್ಧ ಜಯ ಲಭಿಸಿತು. ಅಮ್ಮಣಿಚಂಡ 2-0 ಅಂತರದ ಮುನ್ನಡೆ ಸಾಧಿಸಿತು. ಕೊಟ್ಟಂಗಡ ಮತ್ತು ಚಟ್ಟಂಗಡ ತಂಡಗಳು ನಡುವೆ ನಡೆದ ಪಂದ್ಯದಲ್ಲಿ ಕೊಟ್ಟಂಗಡ 1-0 ಅಂತರದಿಂದ ಹಾಗೂ ಕಂಬೀರಂಡ ಮತ್ತು ಕೊಂಗೆಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಂಬಿರಂಡ 2-0 ಅಂತರದಿಂದ ಗೆಲುವು ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿತು.

ಕೆಲ ಪಂದ್ಯಗಳಿಗೆ ಮಳೆ ಅಡ್ಡಿ: ಮಳೆಯಿಂದಾಗಿ ಕುಲ್ಲಚಂಡ-ಮೇಚಿಯಂಡ, ಬೊಟ್ಟೋಳಂಡ-ನೆರವಂಡ, ಚೇಂದಂಡ-ಚೀಯಕಪೂವಂಡ ಮತ್ತು ಚೋಯಮಾಡಂಡ-ಚೆರುಮಂದಂಡ ತಂಡಗಳ ನಡುವೆ ನಡೆಯಬೇಕಿದ್ದ ಪಂದ್ಯಗಳನ್ನು ಮುಂದೂಡಲಾಯಿತು. ಈ ಪಂದ್ಯಗಳನ್ನು ಶನಿವಾರ ನಡೆಸಲಾಗುವುದು ಎಂದು ಟೂರ್ನಮೆಂಟ್ ಡೈರೆಕ್ಟರ್ ಅಂಜಪರವಂಡ ಕುಶಾಲಪ್ಪ ತಿಳಿಸಿದ್ದಾರೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಕಪ್‌ತುಳಿತ ತನಿಖಾ ವರದಿ ಹೈಕೋರ್ಟ್‌ ಪರಾಮರ್ಶೆಗೆ
₹10 ಲಕ್ಷ ಕೊಡಿ, ಮೆಸ್ಸಿ ಜೊತೆಗೆ ಒಂದು ಫೋಟೋ ತೆಗೆಸಿಕೊಳ್ಳಿ!