ಕೊಡವ ಹಾ: ಸಣ್ಣುವಂಡ, ಮಂಡೇಪಂಡ ತಂಡಗಳಿಗೆ ಭರ್ಜರಿ ಗೆಲುವು

KannadaprabhaNewsNetwork | Updated : Apr 08 2024, 04:50 AM IST

ಸಾರಾಂಶ

ಚೆರಿಯ ಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಂಡ್ಯೋಳಂಡ ಕಪ್‌ ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿ

ದುಗ್ಗಳ ಸದಾನಂದ

  ನಾಪೋಕ್ಲು : ಇಲ್ಲಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಂಡ್ಯೋಳಂಡ ಕಪ್ ಹಾಕಿ ಪಂದ್ಯಾವಳಿಯ ಭಾನುವಾರದ ಪಂದ್ಯಗಳಲ್ಲಿ ಸಣ್ಣುವಂಡ ಉತ್ತಪ್ಪ ಗಳಿಸಿದ ನಾಲ್ಕು ಗೋಲುಗಳ ನೆರವಿನಿಂದ ಸಣ್ಣುವಂಡ ಮತ್ತು ಮಂಡೆಪಂಡ ಚಂದನ್ ಕಾರ್ಯಪ್ಪ ಗಳಿಸಿದ ನಾಲ್ಕು ಗೋಲುಗಳ ನರವಿನಿಂದ ಮಂಡೆಪಂಡ ತಂಡಗಳು ಭರ್ಜರಿ ಗೆಲುವು ಗಳಿಸಿದವು. ಸಣ್ಣುವಂಡ ತಂಡ ಮೂಕ ಚಂಡ ವಿರುದ್ಧ 7-1 ಅಂತರದ ಗೆಲುವು ಸಾಧಿಸಿದರೆ ನಾಳಿಯಂಡ ವಿರುದ್ಧ ಮಂಡೇಪಂಡ 6-1 ಅಂತರದಿಂದ ಗೆಲುವು ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿತು.

ಕೋಡಿಮಣಿಯಂಡ ತಂಡವು ತೀತರ ಮಾಡ ವಿರುದ್ಧ 1-0 ಅಂತರದ ಗೆಲುವು ಸಾಧಿಸಿತು. ಕೋಳಿರ ತಂಡವು ಮುಕ್ಕಾಟಿರ ( ಹರಿಹರ) ವಿರುದ್ಧ 3-0 ಅಂತರದಿಂದ, ಬಾದುಮಮಡ ಕಬ್ಬಚ್ಚಿರ ವಿರುದ್ಧ 1-0 ಅಂತರದಿಂದ ಗೆಲುವು ಸಾಧಿಸಿತು. ಕುಟ್ಟೇಟಿರ ಮತ್ತು ಮಂಡೇಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಂಡೇಟಿರ 4-0 ಅಂತರದಿಂದ ಗೆಲುವು ಸಾಧಿಸಿತು. ಕಾವಡಿ ಚಂಡ ವಿರುದ್ಧ ಬೊವ್ವೇರಿಯಂಡ 2-0 ಅಂತರದ ಗೆಲುವು ಸಾಧಿಸಿತು.

ಮೇವಡ ತಂಡವು ಅಜ್ಜಿಕುಟ್ಟಿರ ತಂಡದ ವಿರುದ್ಧ 3-0 ಅಂತರದ ಗೆಲುವು ಸಾಧಿಸಿದರೆ ಮುಕ್ಕಾಟಿರ ಕೋಳಿರ ವಿರುದ್ಧ 3-0 ಅಂತರದ ಜಯ ಸಾಧಿಸಿತು. ಚಿಮ್ಮಣ ಮಾಡತಂಡದ ಆಟಗಾರರು 3 ಗೋಲು ಗಳಿಸಿ ತಂಡದ ಯಶಸ್ಸಿಗೆ ಕಾರಣರಾದರು. ಅಪ್ಪಾಡೇರಂಡ ನಾಲ್ಕು ಗೋಲುಗಳಿಸಿ ತಂಡದ ಯಶಸ್ಸಿಗೆ ಕಾರಣರಾದರು ಮತ್ತು ಚಂದುರ ಮತ್ತು ಕೋದಂಡ ತಂಡಗಳ ನಡುವಿನ ಪಂದ್ಯದಲ್ಲಿ ಚಂದುರ 1-0 ಅಂತರದ ಜಯ ಸಾಧಿಸಿತು. ಅಲೆಮಾಡ ಮತ್ತು ಗಂದಂಗಡ ನಡುವೆ ನಡೆದ ಪಂದ್ಯದಲ್ಲಿ ಗಂದಂಗಡ 1-0 ಅಂತರದ ಜಯ ಸಾಧಿಸಿತು.

ಅಜ್ಜ ಮಾಡ ಕೊಂಡಿರ ವಿರುದ್ಧ ಟೈ ಬ್ರೇಕರ್ ನಲ್ಲಿ 6-5 ಅಂತರದಿಂದ ಗೆಲುವು ಸಾಧಿಸಿತು. ಕಾಳಿಮಾಡತಂಡವು ಉದ್ದಪಂಡ ವಿರುದ್ಧ 1-0 ಅಂತರದಿಂದ, ಮುಂಡ ಚಾಡಿರ ಬೇರೆರ ಬ ವಿರುದ್ಧ 1-0 ಅಂತರದಿಂದ, ನಾಗಂಡ ಕೋಣಿಯಂಡ ವಿರುದ್ಧ-1-0 ಅಂತರದಿಂದ ಹಾಗೂ ಚೇರಂಡ ಕೈಬುಲಿರ ವಿರುದ್ಧ 3-0 ಅಂತರದಿಂದ ಮುನ್ನಡೆ ಸಾಧಿಸಿದವು.

Share this article