ಆರ್‌ಸಿಬಿಗೆ ದೇವದತ್‌ ಬದಲು ಮಯಾಂಕ್‌

Published : May 08, 2025, 05:19 AM IST
Mayank Agarwal (Photo: BCCI)

ಸಾರಾಂಶ

ದೇವದತ್‌ ಪಡಿಕ್ಕಲ್‌ ಬದಲು ಕರ್ನಾಟಕದ ಮತ್ತೋರ್ವ ಆಟಗಾರ ಮಯಾಂಕ್‌ ಅಗರ್‌ವಾಲ್‌  ಆರ್‌ಸಿಬಿ ತಂಡಕ್ಕೆ ಸೇರ್ಪಡೆ

ಬೆಂಗಳೂರು: ಆರ್‌ಸಿಬಿ ತಾರಾ ಆಟಗಾರ ದೇವದತ್‌ ಪಡಿಕ್ಕಲ್‌ ಗಾಯದಿಂದಾಗಿ ಈ ಬಾರಿ ಐಪಿಎಲ್‌ನಿಂದಲೇ ಹೊರಬಿದ್ದಿದ್ದಾರೆ. ಅವರು ಸ್ನಾಯು ಸೆಳೆತಕ್ಕೆ ತುತ್ತಾಗಿದ್ದಾಗಿ ಫ್ರಾಂಚೈಸಿ ಬುಧವಾರ ಮಾಹಿತಿ ನೀಡಿದೆ. ದೇವದತ್‌ ಪಡಿಕ್ಕಲ್‌ ಬದಲು ಕರ್ನಾಟಕದ ಮತ್ತೋರ್ವ ಆಟಗಾರ ಮಯಾಂಕ್‌ ಅಗರ್‌ವಾಲ್‌ರನ್ನು ತಂಡಕ್ಕೆ ಸೇರ್ಪಡೆಗೊಳಿಸಿದೆ.ಆರ್‌ಸಿಬಿ ಪರ 3ನೇ ಕ್ರಮಾಂಕದಲ್ಲಿ ಆಡುತ್ತಿದ್ದ ಪಡಿಕ್ಕಲ್‌ 10 ಪಂದ್ಯಗಳಲ್ಲಿ 150.61ರ ಸ್ಟ್ರೈಕ್‌ರೇಟ್‌ನಲ್ಲಿ 247 ರನ್‌ ಕಲೆಹಾಕಿದ್ದರು. ಇದರಲ್ಲಿ 2 ಅರ್ಧಶತಕಗಳೂ ಒಳಗೊಂಡಿವೆ.

ಇನ್ನು, ಮಯಾಂಕ್‌ 2011ರಲ್ಲಿ ಆರ್‌ಸಿಬಿ ಪರ ಆಡುವ ಮೂಲಕ ಐಪಿಎಲ್‌ ವೃತ್ತಿಜೀವನ ಆರಂಭಿಸಿದ್ದರು. ಬಳಿಕ ತಂಡದಿಂದ ಹೊರಬಿದ್ದಿದ್ದ ಅವರು ವಿವಿಧ ತಂಡಗಳ ಪರ ಒಟ್ಟು 127 ಪಂದ್ಯಗಳನ್ನಾಡಿದ್ದಾರೆ. ಕಳೆದ ಬಾರಿ ಹರಾಜಿನಲ್ಲಿ ಮಯಾಂಕ್‌ ಯಾವುದೇ ತಂಡಕ್ಕೆ ಬಿಕರಿಯಾಗಿರಲಿಲ್ಲ. ಸದ್ಯ ಅವರು ₹1 ಕೋಟಿಗೆ ಆರ್‌ಸಿಬಿ ಸೇರ್ಪಡೆಗೊಂಡಿದ್ದಾರೆ.

PREV

Recommended Stories

ಯುವ ಫುಟ್‌ಬಾಲ್ ಆಟಗಾರರಿಗಾಗಿ ರೆಸಿಡೆನ್ಷಿಯಲ್ ಅಕಾಡೆಮಿ ಆರಂಭಿಸಿದ ಎಸ್‌ಯುಎಫ್‌ಸಿ
ಕೆಎಸ್‌ಸಿಎ ಚುನಾವಣೆ: ವೆಂಕಟೇಶ್‌ ಪ್ರಸಾದ್‌ ಟೀಮ್‌ಗೆ ಕುಂಬ್ಳೆ, ದ್ರಾವಿಡ್‌, ಶ್ರೀನಾಥ್‌ ಬೆಂಬಲ