ನವದೆಹಲಿ: 17ನೇ ಆವೃತ್ತಿ ಐಪಿಎಲ್‌ಗೆ ದಿನಗಣನೆ ಆರಂಭವಾಗಿರುವಾಗಲೇ ಚೆನ್ನೈ ತಂಡದ ನಾಯಕ ಎಂ.ಎಸ್.ಧೋನಿ ಫೇಸ್‌ಬುಕ್‌ನಲ್ಲಿ ಮಾಡಿರುವ ಪೋಸ್ಟ್ ಅಭಿಮಾನಿಗಳಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಸಾಮಾಜಿಕ ತಾಣಗಳಿಂದ ದೂರ ಉಳಿದಿರುವ ಧೋನಿ ಮಂಗಳವಾರ, ‘ಹೊಸ ಸೀಸನ್ ಮತ್ತು ಹೊಸ ‘ಪಾತ್ರ’ಕ್ಕಾಗಿ ಎದುರು ನೋಡುತ್ತಿದ್ದೇನೆ’ ಎಂದು ಪೋಸ್ಟ್ ಮಾಡಿದ್ದಾರೆ.
ಅವರು ಐಪಿಎಲ್ ಅಥವಾ ಬೇರೆ ಯಾವುದರ ಬಗ್ಗೆಯೂ ಉಲ್ಲೇಖಿಸದ ಕಾರಣ ಅಭಿಮಾನಿಗಳಲ್ಲಿ ಪೋಸ್ಟ್ ಬಗ್ಗೆ ಕುತೂಹಲ ಹೆಚ್ಚಿಸಿದೆ.ಕಳೆದ ಆವೃತ್ತಿಯ ಬಳಿಕವೇ ಅವರು ನಿವೃತ್ತಿಯಾಗುತ್ತಾರೆ ಎಂದು ಹೇಳಲಾಗಿತ್ತು.
ಆದರೆ ಚೆನ್ನೈ 5ನೇ ಬಾರಿ ಚಾಂಪಿಯನ್ ಆಗಿತ್ತು. ಗೆಲುವಿನ ಖುಷಿಯಲ್ಲಿ ತಾನು ಅಭಿಮಾನಿಗಳಿಗೆ ಮತ್ತೊಂದು ಆವೃತ್ತಿ ಆಡುತ್ತೇನೆ ಎಂದು ಹೇಳಿದ್ದರು.
ಈಗ 2024ರ ಐಪಿಎಲ್ ಆರಂಭಕ್ಕೆ ಮುನ್ನ ಫೇಸ್‌ಬುಕ್ ಪೋಸ್ಟ್ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟು ಹಾಕಿದ್ದಾರೆ.
ಜಾಸ್ಮೀನ್‌ಗೆ ಮೊದಲ ಸುತ್ತಲ್ಲೇ ಸೋಲು
ಬುಸ್ಟೊ ಅರ್ಸಿಜಿಯೊ(ಇಟಲಿ): ಪ್ಯಾರಿಸ್ ಒಲಿಂಪಿಕ್ಸ್ ಬಾಕ್ಸಿಂಗ್ ಅರ್ಹತಾ ಟೂರ್ನಿಯಲ್ಲಿ ಭಾರತೀಯರ ನೀರಸ ಪ್ರದರ್ಶನ ಮುಂದುವರಿದಿದೆ.
2022ರ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಜಾಸ್ಮೀನ್ ಲಂಬೋರಿಯಾ ಮಹಿಳಾ ವಿಭಾಗದ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದಾರೆ.
22ರ ಜಾಸ್ಮೀನ್‌ಗೆ 60 ಕೆ.ಜಿ. ವಿಭಾಗದಲ್ಲಿ ಜಪಾನ್‌ನ ಅಯಾಕ ಟಗುಚಿ ವಿರುದ್ಧ ಸೋಲು ಎದುರಾಯಿತು.
ಭಾನುವಾರ ಪುರುಷರ 51 ಕೆ.ಜಿ. ವಿಭಾಗದಲ್ಲಿ ದೀಪಕ್, 91+ ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ನರೇಂದರ್ ಬರ್ವಾಲ್ ಸೋಲನುಭವಿಸಿದ್ದರು. ಇನ್ನೂ 6 ವಿಭಾಗಗಳಲ್ಲಿ ಭಾರತೀಯರು ಸ್ಪರ್ಧಿಸಲಿದ್ದಾರೆ.