ಕ್ಯಾಪ್ಟನ್‌ ಹಾರ್ದಿಕ್‌ರನ್ನು ಗೌರವಿಸಿ : ಐಪಿಎಲ್‌ ಶುರುವಾಗುವ ಮುನ್ನವೇ ಆಟಗಾರರಿಗೆ ಮುಂಬೈ ವಾರ್ನಿಂಗ್‌

KannadaprabhaNewsNetwork |  
Published : Jan 08, 2025, 12:15 AM ISTUpdated : Jan 08, 2025, 04:11 AM IST
2025ರ ಐಪಿಎಲ್‌ನಲ್ಲಿ ಮುಂಬೈ ತಂಡವನ್ನು ಮುನ್ನಡೆಸಲಿರುವ ಹಾರ್ದಿಕ್‌ ಪಾಂಡ್ಯ.  | Kannada Prabha

ಸಾರಾಂಶ

ಐಪಿಎಲ್‌ ಶುರುವಾಗುವ ಮುನ್ನವೇ ಮುಂಬೈ ಇಂಡಿಯನ್ಸ್‌ ಮುನ್ನೆಚ್ಚರಿಕಾ ಕ್ರಮ. ಕಳೆದ ವರ್ಷದ ಮನಸ್ತಾಪ ಈ ಸಲವೂ ಮುಂದುವರಿಯಬಾರದು ಎಂದು ಆಟಗಾರರಿಗೆ ಸೂಚನೆ.

ಮುಂಬೈ: 2025ರ ಐಪಿಎಲ್‌ ಹತ್ತಿರವಾಗುತ್ತಿದ್ದಂತೆ ತಂಡಗಳು ಸಿದ್ಧತೆ ಆರಂಭಿಸಿವೆ. ಕಳೆದ ಆವೃತ್ತಿಯಲ್ಲಿ ಹೊಸ ನಾಯಕನನ್ನು ನೇಮಿಸಿ ಇಕ್ಕಟ್ಟಿಗೆ ಸಿಲುಕಿದ್ದ ಮುಂಬೈ ಇಂಡಿಯನ್ಸ್‌, ಈ ಬಾರಿ ಮುನ್ನೆಚ್ಚರಿಕಾ ಕ್ರಮವಾಗಿ ನಾಯಕ ಹಾರ್ದಿಕ್‌ ಪಾಂಡ್ಯ ಅವರ ಬಗ್ಗೆ ಅಸಡ್ಡೆ ತೋರದಂತೆ, ಅವರನ್ನು ಗೌರವಿಸಿ ಸಂಪೂರ್ಣ ಸಹಕಾರ ನೀಡುವಂತೆ ಕೆಲ ಪ್ರಮುಖ ಆಟಗಾರರಿಗೆ ಸೂಚನೆ ನೀಡಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಕೆಲ ದಿನಗಳ ಹಿಂದೆ ಪ್ರಮುಖ ಆಟಗಾರರ ಜೊತೆ ಸಭೆ ನಡೆಸಿರುವ ಮುಂಬೈ ತಂಡದ ಮಾಲಿಕರು, ಹಾರ್ದಿಕ್‌ರನ್ನು ಬೆಂಬಲಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

ಕಳೆದ ಆವೃತ್ತಿಗೂ ಮುನ್ನ ಗುಜರಾತ್‌ ತಂಡದಿಂದ ಹಾರ್ದಿಕ್‌ರನ್ನು ಕರೆತಂದು ರೋಹಿತ್‌ ಶರ್ಮಾ ಬದಲು ತಂಡದ ನಾಯಕನನ್ನಾಗಿ ನೇಮಿಸಲಾಗಿತ್ತು. ಮಾಲಿಕರ ಈ ನಿರ್ಧಾರ ತಂಡದೊಳಗೆ ಮನಸ್ತಾಪ ಶುರುವಾಗಲು ಕಾರಣವಾಗಿತ್ತು. ಜಸ್‌ಪ್ರೀತ್‌ ಬೂಮ್ರಾ, ಸೂರ್ಯಕುಮಾರ್‌ ಯಾದವ್‌ ಸಾಮಾಜಿಕ ತಾಣಗಳಲ್ಲಿ ಮಾರ್ಮಿಕ ಸಂದೇಶಗಳ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದರು. ಇನ್ನು ತಂಡದೊಳಗೆ ರೋಹಿತ್‌ ಬಣ ಹಾಗೂ ಹಾರ್ದಿಕ್‌ ಬಣ ಎಂದು ಎರಡು ಗುಂಪುಗಳು ಹುಟ್ಟಿಕೊಂಡಿವೆ ಎನ್ನುವ ಸುದ್ದಿಯೂ ಹರಿದಾಡಿತ್ತು. ಇದಕ್ಕೆ ಪೂರಕವಾಗಿ ಮುಂಬೈ ತಂಡ 14 ಪಂದ್ಯಗಳಲ್ಲಿ ಕೇವಲ 4 ಜಯ ಸಾಧಿಸಿ ನಿರಾಸೆ ಮೂಡಿಸಿತ್ತು.

ಕಳೆದ ವರ್ಷದ ಬೆಳವಣಿಗೆಗಳನ್ನು ಗಮನಿಸಿದ್ದ ತಂಡದ ಮಾಲಿಕರು ಈ ಬಾರಿ ಟೂರ್ನಿ ಆರಂಭಕ್ಕೂ ಮೊದಲೇ ಎಚ್ಚೆತ್ತುಕೊಂಡಿದ್ದು, ಪ್ರಮುಖ ಆಟಗಾರರೊಂದಿಗೆ ಮಾತುಕತೆ ನಡೆಸಿ ಸೂಚನೆ ನೀಡಿದ್ದಾರೆ.

2025ರ ಐಪಿಎಲ್‌ ಟೂರ್ನಿಯು ಮಾ.14ರಿಂದ ಆರಂಭಗೊಳ್ಳಲಿದ್ದು, ಮೇ 25ರ ವರೆಗೂ ನಡೆಯಲಿದೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಕಪ್‌ತುಳಿತ ತನಿಖಾ ವರದಿ ಹೈಕೋರ್ಟ್‌ ಪರಾಮರ್ಶೆಗೆ
₹10 ಲಕ್ಷ ಕೊಡಿ, ಮೆಸ್ಸಿ ಜೊತೆಗೆ ಒಂದು ಫೋಟೋ ತೆಗೆಸಿಕೊಳ್ಳಿ!