ಇನ್ನು ಮುಂದೆ ಭಾರತ-ಪಾಕಿಸ್ತಾನ ಕ್ರಿಕೆಟ್‌ ಬೇಡ : ಸೌರವ್‌ ಗಂಗೂಲಿ

Published : Apr 27, 2025, 12:38 PM IST
Sourav Ganguly (Photo: ANI)

ಸಾರಾಂಶ

ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಭೀಕರ ಉಗ್ರ ದಾಳಿ ಬಳಿಕ ಹಲವು ಕ್ರೀಡಾ ತಾರೆಯರು ಪಾಕಿಸ್ತಾನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನವದೆಹಲಿ: ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಭೀಕರ ಉಗ್ರ ದಾಳಿ ಬಳಿಕ ಹಲವು ಕ್ರೀಡಾ ತಾರೆಯರು ಪಾಕಿಸ್ತಾನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಟೀಂ ಇಂಡಿಯಾದ ಮಾಜಿ ನಾಯಕ, ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಕೂಡ ಪಾಕ್‌ ವಿರುದ್ಧ ಕಿಡಿಕಾರಿದ್ದು, ‘ಭಾರತವು ಪಾಕಿಸ್ತಾನದ ಜೊತೆಗಿನ ಎಲ್ಲಾ ಕ್ರಿಕೆಟ್‌ ಸಂಬಂಧವನ್ನು ಮುರಿಯಬೇಕು’ ಎಂದು ಒತ್ತಾಯಿದ್ದಾರೆ.

ಉಭಯ ದೇಶಗಳ ನಡುವಿನ ಕ್ರಿಕೆಟ್ ಸಂಬಂಧಗಳ ಕುರಿತ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಗಂಗೂಲಿ, ‘ನೂರಕ್ಕೆ ನೂರು ಶೇಕಡಾ, ಪಾಕಿಸ್ತಾನದೊಂದಿಗಿನ ಕ್ರಿಕೆಟ್‌ ಸಂಬಂಧವನ್ನು ಭಾರತ ಮುರಿಯಬೇಕು. ಅದಕ್ಕೆ ಬೇಕಾದ ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕು. ಪ್ರತಿ ವರ್ಷವೂ ಭಾರತದಲ್ಲಿ ಉಗ್ರರ ಅಟ್ಟಹಾಸ ನಡೆಯುತ್ತಿರುವುದು ತಮಾಷೆಯಾಗಿ ಮಾರ್ಪಟ್ಟಿದೆ. ಭಯೋತ್ಪಾದನೆಯನ್ನು ಸಹಿಸಲು ಸಾಧ್ಯವಿಲ್ಲ’ ಎಂದರು.

ಇತ್ತೀಚೆಗಷ್ಟೇ ಈ ಬಗ್ಗೆ ಮಾತನಾಡಿದ್ದ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ, ಟೀಂ ಇಂಡಿಯಾ ದ್ವಿಪಕ್ಷೀಯ ಸರಣಿಗಳಲ್ಲಿ ಪಾಕ್ ಜೊತೆಗೆ ಆಡಲ್ಲ. ಆದರೆ ಐಸಿಸಿ ಟೂರ್ನಿಗಳಲ್ಲಿ ನಿಯಮ ಪ್ರಕಾರ ಆಡಬೇಕಾಗುತ್ತದೆ’ ಎಂದಿದ್ದಾರೆ.

 

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಭಾರತ 5-0 ಸರಣಿ ಕ್ಲೀನ್‌ ಸ್ವೀಪ್‌! - ಶ್ರೀಲಂಕಾ ವಿರುದ್ಧ 5ನೇ ಟಿ20 ಪಂದ್ಯದಲ್ಲಿ 15 ರನ್‌ ಗೆಲುವು
ಕರ್ನಾಟಕಕ್ಕೆ ಹ್ಯಾಟ್ರಿಕ್‌ ಜಯ