;Resize=(412,232))
ಹೈದರಾಬಾದ್: 3 ದಿನಗಳ ಕಾಲ ಭಾರತ ಪ್ರವಾಸ ಕೈಗೊಳ್ಳಲಿರುವ ಅರ್ಜೆಂಟೀನಾದ ಫುಟ್ಬಾಲ್ ದಿಗ್ಗಜ ಲಿಯೋನಲ್ ಮೆಸ್ಸಿ ಜೊತೆ ಮಾತುಕತೆ ನಡೆಸಲು, ಫೋಟೋ ತೆಗೆಸಿಕೊಳ್ಳಲು ಅಭಿಮಾನಿಗಳಿಗೆ ಅವಕಾಶವಿದೆ.
ಆದರೆ ಇದಕ್ಕಾಗಿ ಬರೋಬ್ಬರಿ 10 ಲಕ್ಷ ರು. ಖರ್ಚು ಮಾಡಬೇಕಾಗುತ್ತದೆ.ಮೆಸ್ಸಿ ಡಿ.14ರಂದು ಹೈದರಾಬಾದ್‌ನಲ್ಲಿ ಇರಲಿದ್ದು, ಉಪ್ಪಲ್ ಕ್ರೀಡಾಂಗಣದಲ್ಲಿ ಫುಟ್ಬಾಲ್ ಪಂದ್ಯ ಸೇರಿದಂತೆ 3 ಗಂಟೆಗಳ ಕಾಲ ವಿಶೇಷ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ವರದಿಗಳ ಪ್ರಕಾರ, ಹೈದರಾಬಾದ್‌ನ ಫಲಕ್ನುಮಾ ಅರಮನೆಯಲ್ಲಿ ಮೆಸ್ಸಿ ಜೊತೆ ಫೋಟೋಶೂಟ್‌ಗೆ ಅವಕಾಶ ಕಲ್ಪಿಸಲಾಗಿದೆ. ಇದರ ಟಿಕೆಟ್‌ಗೆ ₹9.95 ಲಕ್ಷ ಇದ್ದು, ಜಿಎಸ್‌ಟಿ ಸೇರಿದಂತೆ ₹10 ಲಕ್ಷಕ್ಕೂ ಹೆಚ್ಚಾಗುತ್ತದೆ. ಟಿಕೆಟ್‌ಗಳನ್ನು ಡಿಸ್ಟ್ರಿಕ್ಟ್ ಆ್ಯಪ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ.
ಮೆಸ್ಸಿ ಕಾರ್ಯಕ್ರಮಕ್ಕೆ ಎಲ್ಲಾ ನಗರಗಳಲ್ಲೂ ದುಬಾರಿ ಟಿಕೆಟ್ ಮಾರಾಟ ಮಾಡಲಾಗುತ್ತಿದೆ. ಮುಂಬೈ ಕಾರ್ಯಕ್ರಮದ ಟಿಕೆಟ್ ಮೌಲ್ಯ ಕನಿಷ್ಠ ₹7000, ಗರಿಷ್ಠ 24000, ಕೋಲ್ಕತಾದಲ್ಲಿ ಕನಿಷ್ಠ ₹4400, ಗರಿಷ್ಠ 12000, ಹೈದರಾಬಾದ್‌ನಲ್ಲಿ ಕನಿಷ್ಠ ₹2300, ಗರಿಷ್ಠ ₹900 ಇದೆ.