ರಾಜ್ಯಮಟ್ಟದ ಟೇಬಲ್ ಟೆನಿಸ್ ಪಂದ್ಯಾವಳಿಗೆ ಶಾಸಕ ಬೆಲ್ದಾಳೆ ಚಾಲನೆ । ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯಾವಳಿಕನ್ನಡಪ್ರಭ ವಾರ್ತೆ ಬೀದರ್
ಅವರು ನಗರದ ನೆಹರು ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಬೆಂಗಳೂರ ಹಾಗೂ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಬೀದರ್ ಇವರ ಸಹಯೋಗದಲ್ಲಿ ಹಮ್ಮಿಕೊಂಡ ಪ್ರಸಕ್ತ ಸಾಲಿನ ಪದವಿಪೂರ್ವ ಶಿಕ್ಷಣ ವಿದ್ಯಾರ್ಥಿಗಳ ರಾಜ್ಯಮಟ್ಟದ ಟೇಬಲ್ ಟೆನಿಸ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಹೊಂದಿರುವ ಗುರಿ ಮುಟ್ಟುವವರೆಗೆ ನಿಲ್ಲಬಾರದು ಎಂದರು.
ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಕ್ರೀಡಾ ಧ್ವಜಾರೋಹಣ ನೇರವೇರಿಸಿ ಮಾತನಾಡಿ, ಸೋಲೇ ಗೆಲುವಿನ ಸೋಪಾನವಾಗಿದೆ. ವಿದ್ಯಾರ್ಥಿಗಳು ಆಟ ಮತ್ತು ಪಾಠ ಜೊತೆ- ಜೊತೆಯಲ್ಲಿ ತೆಗೆದುಕೊಂಡರೆ ಸರ್ವತೋಮುಖ ಬೆಳವಣಿಗೆ ಹೊಂದಲು ಸಾಧ್ಯ. ಮುಂಬರುವ ಪಿಯುಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಲು ಕಠೀಣ ಪರಿಶ್ರಮದ ಅಗತ್ಯವಿದೆ ಎಂದರು.ಡಿಡಿಪಿಯು ಚಂದ್ರಕಾಂತ ಶಾಹಾಬಾದಕರ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯಮಟ್ಟದ ಟೇಬಲ್ ಟೆನಿಸ್ ಪಂದಾವಳಿಯಲ್ಲಿ ರಾಜ್ಯದ ಶೈಕ್ಷಣಿಕ 30 ಜಿಲ್ಲೆಯ ಕ್ರೀಡಾಪಟುಗಳು ಭಾಗವಹಿಸಿದ್ದು ಸಂತಸ ತಂದಿದೆ. ಪ್ರಾಂಶುಪಾಲ ಮತ್ತು ಉಪನ್ಯಾಸಕ ಸಂಘದ ಎಲ್ಲ ಪದಾಧಿಕಾರಿಗಳು ಹಾಗೂ ದೈಹಿಕ ಶಿಕ್ಷಕರ ನೆರವು ಮರೆಯಲಿಕ್ಕಾಗಲ್ಲ ಎಂದು ತಿಳಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಗೌತಮ ಅರಳಿ, ಬೆಂಗಳೂರಿನಿಂದ ಕ್ರೀಡಾ ವೀಕ್ಷಕರಾಗಿ ಪ್ರಕಾಶ ಮೆಹತಾ ಮತ್ತು ಶಂಕರ ಸೋಲಾಪುರೆ, ಪ್ರಾಚಾರ್ಯರ ಸಂಘದ ಪ್ರ.ಕಾರ್ಯದರ್ಶಿ ಡಾ.ಮನ್ಮಥ ಡೋಲೆ, ರಾಜ್ಯಪ್ರತಿನಿಧಿ ಪ್ರಭು ಎಸ್. ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಓಂಕಾರ ಸೂರ್ಯವಂಶಿ, ಕಾರ್ಯದರ್ಶಿ ಶಿವರಾಜ ಪಾಟೀಲ್ ಅಲಿಯಾಬಾದ, ಪ್ರಾಚಾರ್ಯ ಸಂಘದ ಉಪಾಧ್ಯಕ್ಷರಾದ ಓಂಪ್ರಕಾಶ ದಡ್ಡೆ, ಡಿಡಿಪಿಯು ಕಚೇರಿ ಶಾಖಾಧಿಕಾರಿ ಸಂಗನಬಸವ ಮತ್ತಿತರರು ಇದ್ದರು.
--
ಬೀದರ್ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಪದವಿಪೂರ್ವ ಶಿಕ್ಷಣ ವಿದ್ಯಾರ್ಥಿಗಳ ರಾಜ್ಯಮಟ್ಟದ ಟೇಬಲ್ ಟಿನಿಸ್ ಪಂದ್ಯಾವಳಿ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹಾಗೂ ಜಿಲ್ಲಾಧಿಕಾರಿಗಳು ಆಟ ಆಡಿ ಚಾಲನೆ ನೀಡಿದರು.
21ಬಿಡಿಆರ್55
--