ಪ್ರೊ ಕಬಡ್ಡಿ: 118 ಆಟಗಾರರು ಹರಾಜು, ಮೊದಲ ಬಾರಿ 8 ಆಟಗಾರರಿಗೆ ₹1 ಕೋಟಿಗಿಂತ ಹೆಚ್ಚು ಮೊತ್ತ!

KannadaprabhaNewsNetwork |  
Published : Aug 17, 2024, 12:57 AM ISTUpdated : Aug 17, 2024, 04:13 AM IST
ಹರಾಜು ಪ್ರಕ್ರಿಯೆ | Kannada Prabha

ಸಾರಾಂಶ

ಮೊದಲ ದಿನವಾದ ಗುರುವಾರ ಸಚಿನ್‌ ಹಾಗೂ ಪರ್ದೀಪ್‌ ನರ್ವಾಲ್‌ರನ್ನು ತಂಡಕ್ಕೆ ಸೇರಿಸಿಕೊಂಡಿದ್ದ ಬೆಂಗಳೂರು ಬುಲ್ಸ್‌, 2ನೇ ದಿನ ಜೈ ಭಗವಾನ್‌ರನ್ನು ₹63 ಲಕ್ಷ ನೀಡಿ ಖರೀದಿಸಿತು.

ಮುಂಬೈ: 11ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್‌ನ ಆಟಗಾರರ ಹರಾಜು ಪ್ರಕ್ರಿಯೆ ಶುಕ್ರವಾರ ಕೊನೆಗೊಂಡಿದ್ದು, ಒಟ್ಟು 118 ಆಟಗಾರರು 12 ತಂಡಗಳಿಗೆ ಹರಾಜಾಗಿದ್ದಾರೆ. ಪಿಕೆಎಲ್‌ ಇತಿಹಾಸದಲ್ಲೇ ಮೊದಲ ಬಾರಿ 8 ಆಟಗಾರರು ತಲಾ ₹1 ಕೋಟಿಗಿಂತ ಹೆಚ್ಚು ಮೊತ್ತ ಪಡೆದುಕೊಂಡರು.

ಈ ಬಾರಿ ಹರಾಜಿನಲ್ಲಿ ಸಚಿನ್(ತಮಿಳ್ ತಲೈವಾಸ್-₹2.15 ಕೋಟಿ) ಅತ್ಯಂತ ದುಬಾರಿ ಆಟಗಾರನಾಗಿ ಹೊರಹೊಮ್ಮಿದರೆ, ಇರಾನ್‌ನ ಮೊಹಮದ್‌ ರೆಜಾ ಶಾದ್ಲೂ(ಹರ್ಯಾಣ ಸ್ಟೀಲರ್ಸ್ - ₹2.07) ಅತ್ಯಂತ ದುಬಾರಿ ವಿದೇಶಿ ಆಟಗಾರ ಎನಿಸಿಕೊಂಡರು. 

ಮೊದಲ ದಿನವಾದ ಗುರುವಾರ ಸಚಿನ್‌ ಹಾಗೂ ಪರ್ದೀಪ್‌ ನರ್ವಾಲ್‌ರನ್ನು ತಂಡಕ್ಕೆ ಸೇರಿಸಿಕೊಂಡಿದ್ದ ಬೆಂಗಳೂರು ಬುಲ್ಸ್‌, 2ನೇ ದಿನ ಜೈ ಭಗವಾನ್‌ರನ್ನು ₹63 ಲಕ್ಷ ನೀಡಿ ಖರೀದಿಸಿತು. ಥಾಯ್ಲೆಂಡ್‌ನ ಹಸುನ್‌, ಪ್ರಮೋತ್‌ ಕೂಡಾ ಬುಲ್ಸ್‌ ಸೇರ್ಪಡೆಗೊಂಡರು.

ಹರಾಜಿಗೂ ಮುನ್ನ ಎಲ್ಲಾ ತಂಡಗಳು ಕೆಲ ಆಟಗಾರರನ್ನು ರೀಟೈನ್‌ ಮಾಡಿಕೊಂಡಿದ್ದವು. ಉಳಿದ ಆಟಗಾರರನ್ನು ಹರಾಜಿನಲ್ಲಿ ಖರೀದಿಸಿದವು. ಈ ಬಾರಿ ಟೂರ್ನಿ ಅಕ್ಟೋಬರ್‌ನಲ್ಲಿ ಆರಂಭಗೊಳ್ಳುವ ಸಾಧ್ಯತೆಯಿದೆ.ಸುನಿಲ್ ಕುಮಾರ್ (ಯು ಮುಂಬಾ - 1.015 ಕೋಟಿ ರೂ.) ಅತ್ಯಂತ ದುಬಾರಿ ಭಾರತೀಯ ಡಿಫೆಂಡರ್ ಎನಿಸಿಕೊಂಡರು. ''ಸಿ'' ವಿಭಾಗದ ಆಟಗಾರರ ಪೈಕಿ ಅಜಿತ್ ವಿ ಕುಮಾರ್ ಅವರು ಪುಣೇರಿ ಪಲ್ಟನ್ ತಂಡಕ್ಕೆ 66 ಲಕ್ಷ ರೂ.ಗೆ ಹರಾಜಾಗಿದ್ದಾರೆ.

 ‘ಡಿ’ ವಿಭಾಗದ ಆಟಗಾರರ ಪೈಕಿ ಅರ್ಜುನ್ ರಾಠಿ ಬೆಂಗಾಲ್ ವಾರಿಯರ್ಸ್ ತಂಡಕ್ಕೆ 41 ಲಕ್ಷ ರೂ.ಗೆ ಹರಾಜಾದರು.ಮಶಾಲ್ ಸ್ಪೋರ್ಟ್ಸ್ ಮತ್ತು ಪ್ರೊ ಕಬಡ್ಡಿ ಲೀಗ್‌ನ ಕಮಿಷನರ್ ಅನುಪಮ್ ಗೋಸ್ವಾಮಿ ಮಾತನಾಡಿ, ‘ಮತ್ತೊಂದು ಅಸಾಧಾರಣ ಪಿಕೆಎಲ್ ಆಟಗಾರರ ಹರಾಜಿಗಾಗಿ ನಾನು ಎಲ್ಲಾ ಪಿಕೆಎಲ್ ಪಾಲುದಾರರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. 

ಮೊದಲ ದಿನ ದಾಖಲೆಯ ಎಂಟು ಆಟಗಾರರು 1 ಕೋಟಿ ಗಡಿ ದಾಟಿದ್ದನ್ನು ನೋಡಿದ ನಂತರ, ‘ಸಿ’ ವರ್ಗದ ಆಟಗಾರರಾದ ಅಜಿತ್ ಕುಮಾರ್ ಮತ್ತು ಜೈ ಭಗವಾನ್ ಅವರು ಎರಡನೇ ದಿನ ₹60 ಲಕ್ಷಕ್ಕೂ ಹೆಚ್ಚು ಮೊತ್ತ ಪಡೆದಿದ್ದು ಗಮನಾರ್ಹ. ಎಲ್ಲಾ ಫ್ರಾಂಚೈಸಿಗಳು ಸಮತೋಲಿತ ತಂಡಗಳನ್ನು ನಿರ್ಮಿಸಿರುವುದನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ. ಇದು ಹೆಚ್ಚು ಸ್ಪರ್ಧಾತ್ಮಕ ಲೀಗ್‌ನ ಭರವಸೆ ನೀಡುತ್ತದೆ’ ಎಂದಿದ್ದಾರೆ.

PREV

Recommended Stories

ಬಿಸಿಸಿಐಗೆ ಮೂಗುದಾರ ಹಾಕಲು ಮುಂದಾಗಿದ್ದ ಸರ್ಕಾರ ಯೂ ಟರ್ನ್‌: ಆರ್‌ಟಿಐ ವ್ಯಾಪ್ತಿಗೆ ಬರಲ್ಲ ಬಿಸಿಸಿಐ
ಉಲ್ಹಾಸ್‌ ಯುವಿಪೆಪ್‌ ಬಾಸ್ಕೆಟ್‌ಬಾಲ್‌ ಅಕಾಡೆಮಿ ಲೋಕಾರ್ಪಣೆ