ಪಂಜಾಬ್‌ ಈಗ ನಂ.1, ಮುಂಬೈಗೆ 4ನೇ ಸ್ಥಾನ !

Published : May 27, 2025, 12:39 PM IST
Mumbai Indians (Photo: IPL)

ಸಾರಾಂಶ

: ಮುಂಬೈ ಇಂಡಿಯನ್ಸ್‌ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ 7 ವಿಕೆಟ್‌ ಭರ್ಜರಿ ಗೆಲುವು ಸಾಧಿಸಿದ ಪಂಜಾಬ್‌ ಕಿಂಗ್ಸ್‌, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಜೈಪುರ: ಮುಂಬೈ ಇಂಡಿಯನ್ಸ್‌ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ 7 ವಿಕೆಟ್‌ ಭರ್ಜರಿ ಗೆಲುವು ಸಾಧಿಸಿದ ಪಂಜಾಬ್‌ ಕಿಂಗ್ಸ್‌, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇದರೊಂದಿಗೆ ತಂಡ ಪ್ಲೇ-ಆಫ್‌ನಲ್ಲಿ ಕ್ವಾಲಿಫೈಯರ್‌-1ರಲ್ಲಿ ಆಡಲಿದೆ. ಮುಂಬೈ ಎಲಿಮಿನೇಟರ್‌ನಲ್ಲಿ ಆಡಬೇಕಿದೆ. ಪಂಜಾಬ್‌ 14 ಪಂದ್ಯಗಳಲ್ಲಿ 19 ಅಂಕ ಗಳಿಸಿದ್ದು, ಅಗ್ರ-2ರಲ್ಲಿ ಸ್ಥಾನ ಖಚಿತಪಡಿಸಿಕೊಂಡಿತು. ಮುಂಬೈ 16 ಅಂಕದೊಂದಿಗೆ 4ನೇ ಸ್ಥಾನದಲ್ಲೇ ಬಾಕಿಯಾಯಿತು.

ಮೊದಲು ಬ್ಯಾಟ್‌ ಮಾಡಿದ ಮುಂಬೈ 7 ವಿಕೆಟ್‌ಗೆ 184 ರನ್‌ ಗಳಿಸಿತು. ಸೂರ್ಯಕುಮಾರ್‌ ಯಾದವ್‌ 57 ರನ್‌ ಸಿಡಿಸಿದರು. ಬೇರೆ ಯಾರೂ 30ಕ್ಕಿಂತ ಹೆಚ್ಚು ರನ್ ಗಳಿಸಲಿಲ್ಲ. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಪಂಜಾಬ್‌ 18.3 ಓವರ್‌ಗಳಲ್ಲೇ ಗೆಲುವು ತನ್ನದಾಗಿಸಿಕೊಂಡಿತು. ಪ್ರಿಯಾನ್ಶ್‌ ಆರ್ಯ 35 ಎಸೆತಕ್ಕೆ 62, ಜೋಶ್‌ ಇಂಗ್ಲಿಸ್‌ 42 ಎಸೆತಕ್ಕೆ 73 ರನ್‌ ಸಿಡಿಸಿ ತಂಡವನ್ನು ಗೆಲ್ಲಿಸಿದರು. ಶ್ರೇಯಸ್‌ ಅಯ್ಯರ್‌ 26 ರನ್‌ ಕೊಡುಗೆ ನೀಡಿದರು.

ಸ್ಕೋರ್‌: ಮುಂಬೈ 20 ಓವರಲ್ಲಿ 184/7 (ಸೂರ್ಯಕುಮಾರ್‌ 57, ಅರ್ಶ್‌ದೀಪ್‌ 2-28), ಪಂಜಾಬ್‌ 18.3 ಓವರಲ್ಲಿ 187/3 (ಇಂಗ್ಲಿಸ್‌ 73, ಪ್ರಿಯಾನ್ಶ್‌ 62, ಸ್ಯಾಂಟ್ನರ್‌ 2-41) 

PREV
Read more Articles on

Recommended Stories

ಕೊನೆರು ಹಂಪಿ vs ದಿವ್ಯಾ: ಚೆಸ್‌ ವಿಶ್ವಕಪ್‌ ಕಿರೀಟ ಗೆಲ್ಲೋರ್‍ಯಾರು?
ಮ್ಯಾಂಚೆಸ್ಟರಲ್ಲಿ ಭಾರತದ ಬೆಂಡೆತ್ತಿದ ಇಂಗ್ಲೆಂಡ್‌!