ಭಾರತ-ಪಾಕ್‌ ಕದನಕ್ಕೆ ಮಳೆ ಅಡ್ಡಿ ಸಾಧ್ಯತೆ: ಹೇಗಿದೆ ನ್ಯೂಯಾರ್ಕ್‌ ವಾತಾವರಣ?

KannadaprabhaNewsNetwork |  
Published : Jun 09, 2024, 01:33 AM ISTUpdated : Jun 09, 2024, 03:49 AM IST
ಭಾರತ-ಪಾಕಿಸ್ತಾನ ನಾಯಕರು | Kannada Prabha

ಸಾರಾಂಶ

ತಾತ್ಕಾಲಿಕ ಕ್ರೀಡಾಂಗಣವಾಗಿರುವ ಕಾರಣ, ಇಲ್ಲಿ ಒಳಚರಂಡಿ ವ್ಯವಸ್ಥೆಯೂ ಸೂಕ್ತ ರೀತಿಯಲ್ಲಿ ಇದ್ದಂತಿಲ್ಲ. ಹೀಗಾಗಿ ಕೆಲ ಕಾಲ ಮಳೆ ಸುರಿದರೂ ಪಂದ್ಯ ರದ್ದಾಗುವ ಸಾಧ್ಯತೆಯೇ ಹೆಚ್ಚು.

ನ್ಯೂಯಾರ್ಕ್‌: ಭಾನುವಾರ ನ್ಯೂಯಾರ್ಕ್‌ನಲ್ಲಿ ನಿಗದಿಯಾಗಿರುವ ಭಾರತ-ಪಾಕಿಸ್ತಾನ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಹವಾಮಾನ ಮುನ್ಸೂಚನೆ ಪ್ರಕಾರ, ಭಾನುವಾರ ನ್ಯೂಯಾರ್ಕ್‌ನಲ್ಲಿ ಮಳೆಯಾಗುವ ಸಾಧ್ಯತೆ ಶೇ.51ರಷ್ಟು ಇದೆ. ಕ್ರೀಡಾಂಗಣದ ಔಟ್‌ಫೀಲ್ಡ್‌ ಮೊದಲೇ ನಿಧಾನಗತಿಯಲ್ಲಿದ್ದು, ಮಳೆ ಬಿದ್ದರೆ ಮತ್ತಷ್ಟು ನಿಧಾನಗೊಳ್ಳಲಿದೆ. ಜೊತೆಗೆ ಇದೊಂದು ತಾತ್ಕಾಲಿಕ ಕ್ರೀಡಾಂಗಣವಾಗಿರುವ ಕಾರಣ, ಇಲ್ಲಿ ಒಳಚರಂಡಿ ವ್ಯವಸ್ಥೆಯೂ ಸೂಕ್ತ ರೀತಿಯಲ್ಲಿ ಇದ್ದಂತಿಲ್ಲ. ಹೀಗಾಗಿ ಕೆಲ ಕಾಲ ಮಳೆ ಸುರಿದರೂ ಪಂದ್ಯ ರದ್ದಾಗುವ ಸಾಧ್ಯತೆಯೇ ಹೆಚ್ಚು.

ಪಂದ್ಯಕ್ಕೆ ಭಾರಿ ಭದ್ರತೆ!

ಐಸಿಸ್‌ ಉಗ್ರರಿಂದ ಪಂದ್ಯದ ಮೇಲೆ ದಾಳಿ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಎರಡೂ ತಂಡಗಳಿಗೆ ನ್ಯೂಯಾರ್ಕ್ ಪೊಲೀಸರು ಬಿಗಿ ಭದ್ರತೆ ಒದಗಿಸಲಿದ್ದಾರೆ. ಅಲ್ಲದೇ ಕ್ರೀಡಾಂಗಣದ ಸುತ್ತ ಮುತ್ತ ದೊಡ್ಡ ಸಂಖ್ಯೆಯಲ್ಲಿ ಪೊಲೀಸ್‌ ಹಾಗೂ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಮೆರಿಕ ಅಧ್ಯಕ್ಷರ ಕಾರ್ಯಕ್ರಮಗಳಿಗೆ ನೀಡುವ ಭದ್ರತೆ ರೀತಿಯಲ್ಲಿ ಈ ಪಂದ್ಯಕ್ಕೂ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದು ನ್ಯೂಯಾರ್ಕ್‌ ಪೊಲೀಸ್‌ ಆಯುಕ್ತ ತಿಳಿಸಿದ್ದಾರೆ. ಎಫ್‌ಬಿಐ ಸೇರಿ ಅಮೆರಿಕದ ವಿವಿಧ ಭದ್ರತಾ ಏಜೆನ್ಸಿಗಳು ಸಹ ತನ್ನ ಸಿಬ್ಬಂದಿಯನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಿವೆ ಎಂದು ತಿಳಿದುಬಂದಿದೆ.

ಬೆಟ್ಟಿಂಗ್‌: ಭಾರತವೇ ಫೇವರಿಟ್‌!

ಭಾರತ-ಪಾಕ್‌ ಪಂದ್ಯ ಬೆಟ್ಟಿಂಗ್‌ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದ್ದು, ಕ್ರಿಕೆಟ್‌ ಗೊತ್ತಿಲ್ಲದವರಿಂದಲೂ ಉಭಯ ತಂಡಗಳ ಮೇಲೆಕೋಟ್ಯಂತರ ರೂ. ಹಣ ಹೂಡಿಕೆ ಮಾಡುತ್ತಿದ್ದಾರೆ. ಬೆಟ್ಟಿಂಗ್‌ ಆ್ಯಪ್‌ಗಳಲ್ಲಿ ಭಾರತವೇ ಗೆಲುವಿನ ಫೇವರಿಟ್‌ ಎಂದು ಪ್ರದರ್ಶಿಸಲಾಗುತ್ತಿದೆ. ಈ ನಡುವೆ ಅಮೆರಿಕದ ಖ್ಯಾತ ರ್‍ಯಾಪ್‌ ಗಾಯಕ ಡ್ರೇಕ್‌ ಅಬ್ರಹಾರಂ ಪಾಕ್‌ ವಿರುದ್ಧ ಭಾರತ ಗೆಲ್ಲಲಿದೆ ಎಂದು 6.5 ಲಕ್ಷ ಡಾಲರ್‌(5.42 ಕೋಟಿ ರು.) ಬೆಟ್‌ ಹಾಕಿದ್ದಾರೆ. ಈ ವಿಷಯವನ್ನು ಸ್ವತಃ ಅವರೇ ಇನ್‌ಸ್ಟಾಗ್ರಾಂನಲ್ಲಿ ತಿಳಿಸಿದ್ದಾರೆ. ಅವರು ಇತ್ತೀಚೆಗೆ ಐಪಿಎಲ್‌ ಫೈನಲ್‌ಗೂ ಮುನ್ನ ಕೆಕೆಆರ್‌ ಗೆಲ್ಲಲಿದೆ ಎಂದು ₹2 ಕೋಟಿ ಬೆಟ್ ಕಟ್ಟಿದ್ದರು.

ಜಾಹೀರಾತು: ಪ್ರತಿ ಸೆಕೆಂಡ್‌ಗೆ 4 ಲಕ್ಷ ರು.?

ಬದ್ಧವೈರಿಗಳ ನಡುವಿನ ಪಂದ್ಯದ ವೇಳೆ ಪ್ರಸಾರಗೊಳ್ಳುವ ಜಾಹೀರಾತಿನ ಮೌಲ್ಯ ಕೂಡಾ ಭರ್ಜರಿ ಏರಿಕೆಯಾಗಿದ್ದು, ಪ್ರತಿ ಸೆಕೆಂಡ್‌ಗೆ ₹4 ಲಕ್ಷ ರು. ನಿಗದಿಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ವಿಶ್ವಕಪ್‌ನ ಸಾಮಾನ್ಯ ಪಂದ್ಯಗಳಲ್ಲಿ ಪ್ರತಿ 10 ಸೆಕೆಂಡ್‌ಗಳ ಜಾಹೀರಾತಿಗೆ ₹6 ಲಕ್ಷ ಇದೆ. ಆದರೆ ಭಾರತ-ಪಾಕ್‌ ಪಂದ್ಯದ ವೇಳೆ 10 ಸೆಕೆಂಡ್‌ ಜಾಹೀರಾತು ಮೌಲ್ಯ ಕನಿಷ್ಠ ₹40 ಲಕ್ಷಕ್ಕಿಂತ ಹೆಚ್ಚಿದೆ ಎಂದು ತಿಳಿದುಬಂದಿದೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಟಿ20 ವಿಶ್ವಕಪ್‌ನಿಂದ ಉಪನಾಯಕ ಗಿಲ್‌ಗೆ ಗೇಟ್‌ಪಾಸ್‌, ಕಿಶನ್ ಆಯ್ಕೆ!
ಶಿಕ್ಷಕ ತಂದೆಗೆ ₹12 ಸಾವಿರ ವೇತನ, ಮಗನಿಗೆ ₹14.2 ಕೋಟಿ!