ಬೆಂಗಳೂರು: ಕರ್ನಾಟಕ ರಾಜ್ಯ ಬಿಲಿಯರ್ಡ್ಸ್ ಅಸೋಸಿಯೇಷನ್(ಕೆಎಸ್‌ಬಿಎ)ನಲ್ಲಿ ನಡೆದ 11ರ ಅತ್ಯುತ್ತಮ ಫೈನಲ್‌ನಲ್ಲಿ ಕಮಲ್ ಚಾವ್ಲಾ ಅವರನ್ನು 6-3 ಅಂತರದಿಂದ ಸೋಲಿಸಿ, ಭಾರತದ ಅತ್ಯಂತ ಪ್ರಭಾವಿ ಕ್ಯೂಯಿಸ್ಟ್ ಆಗಿರುವ ಪಂಕಜ್ ಅಡ್ವಾಣಿ 2026ರ ಉದ್ಘಾಟನಾ ಲಿಬರ್‌ವಿನ್ ಚಾಂಪಿಯನ್‌ಶಿಪ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ. ಭಾರತದ 16 ಅತ್ಯುತ್ತಮ ವೃತ್ತಿಪರ ಕ್ಯೂಯಿಸ್ಟ್‌ಗಳನ್ನು ಒಳಗೊಂಡ ಉತ್ತಮ ಗುಣಮಟ್ಟದ ಮೂರು ದಿನಗಳ ಈ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಅಡ್ವಾಣಿ ಸಂಯಮ, ಸೂಕ್ತ ರಣತಂತ್ರ ಪ್ರದರ್ಶಿಸಿದರು. ಇದರಿಂದ ಮೊದಲ ಬಾರಿಗೆ ಲಿಬರ್‌ವಿನ್ ಚಾಂಪಿಯನ್ಸ್ ಕಪ್‌ನ ಚಾಂಪಿಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.ದೃಢನಿಶ್ಚಯದ ಕಮಲ್ ಚಾವ್ಲಾ ವಿರುದ್ಧದ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸುವ ಮೂಲಕ ಅದ್ಭುತ ಗೆಲುವನ್ನು ಕಂಡರು. ಸ್ಕೋರ್‌ಲೈನ್ ಆರಾಮದಾಯಕ ಗೆಲುವನ್ನು ಸೂಚಿಸುತ್ತಿದ್ದರೂ, ಪಂದ್ಯದ ಮಧ್ಯೆ ತೀವ್ರ ಪೈಪೋಟಿ ಮೂಡಿ ಬಂತು. ಇಬ್ಬರೂ ಆಟಗಾರರು ಪಾಯಿಟಿಂಗ್ ಮತ್ತು ರಕ್ಷಣಾತ್ಮಕ ಆಟ ಪ್ರದರ್ಶಿಸಿದರು. ಆದರೆ, ಅಡ್ವಾಣಿಯ ಅನುಭವದಿಂದ ಅಂತಿಮವಾಗಿ ಗೆಲುವಿನ ಸರದಾರ ಎನಿಸಿಕೊಳ್ಳಲು ಸಾಧ್ಯವಾಗಿದ್ದು, ಪಂದ್ಯವನ್ನು 6-3 ಅಂತರದಿಂದ ಗೆದ್ದು ಕಿರೀಟಕ್ಕೆ ಮುತ್ತಿಟ್ಟರು.
ಪಂಕಜ್ ಅಡ್ವಾಣಿಗೆ ಲಿಬರ್‌ವಿನ್ ಕಪ್: ಕಮಲ್ ಚಾವ್ಲಾ ವಿರುದ್ಧ ಗೆಲುವು
ಭಾರತದ 16 ಅತ್ಯುತ್ತಮ ವೃತ್ತಿಪರ ಕ್ಯೂಯಿಸ್ಟ್‌ಗಳನ್ನು ಒಳಗೊಂಡ ಉತ್ತಮ ಗುಣಮಟ್ಟದ ಮೂರು ದಿನಗಳ ಈ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಅಡ್ವಾಣಿ ಸಂಯಮ, ಸೂಕ್ತ ರಣತಂತ್ರ ಪ್ರದರ್ಶಿಸಿದರು.
Latest Videos
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.