ವಿಶ್ವದ ಅತಿ ಎತ್ತರದ ರಸ್ತೆ ಉಮ್ಲಿಂಗ್‌ ಲಾಗೆ 60 ವರ್ಷದ ರಾಜೇಶ್‌ ಕಾಲ್ರಾ ಸೈಕ್ಲಿಂಗ್‌

KannadaprabhaNewsNetwork |  
Published : Sep 08, 2025, 01:00 AM IST
ಸೈಕ್ಲಿಂಗ್ | Kannada Prabha

ಸಾರಾಂಶ

ಯುವಜನತೆಗೆ ಮಾದರಿ. 60ರ ಹರೆಯದಲ್ಲೂ ಏಷ್ಯಾನೆಟ್‌ ನ್ಯೂಸ್‌ ನೆಟ್ವರ್ಕ್‌ ಮಾಜಿ ಮುಖ್ಯಸ್ಥರಿಂದ ಮಹತ್ವದ ಸಾಧನೆ.

 ಬೆಂಗಳೂರು :  ಏಷ್ಯಾನೆಟ್‌ ನ್ಯೂಸ್‌ ನೆಟ್ವರ್ಕ್‌ನ ಮಾಜಿ ಮುಖ್ಯಸ್ಥ, ಫಿಟ್‌ ಇಂಡಿಯಾ ರಾಯಭಾರಿಗಳಲ್ಲಿ ಓರ್ವರಾದ ರಾಜೇಶ್‌ ಕಾಲ್ರಾ ಅವರು ವಿಶ್ವದ ಅತಿ ಎತ್ತರದ ರಸ್ತೆಯಾಗಿರುವ ಉಮ್ಲಿಂಗ್‌ ಲಾಗೆ ಸೈಕಲ್‌ನಲ್ಲೇ ಪ್ರಯಾಣಿಸಿ ಗಮನ ಸೆಳೆದಿದ್ದಾರೆ.

60 ವರ್ಷದ ರಾಜೇಶ್‌ ಅವರು ಎವರೆಸ್ಟ್‌ ಬೇಸ್‌ ಕ್ಯಾಂಪ್‌ಗಿಂತ 1500 ಅಡಿ ಎತ್ತರದ, ಒಟ್ಟಾರೆ ಸಮುದ್ರ ಮಟ್ಟದಿಂದ 19024 ಅಡಿ ಎತ್ತರದಲ್ಲಿರುವ ಉಮ್ಲಿಂಗ್‌ ಲಾಗೆ ಸೈಕ್ಲಿಂಗ್‌ ಮಾಡಿದ್ದಾರೆ. 

ಇದರೊಂದಿಗೆ, 60ನೇ ವಯಸ್ಸಿನಲ್ಲಿ ಸೈಕಲ್‌ನಲ್ಲಿ ಉಮ್ಲಿಂಗ್‌ ಲಾಗೆ ಪ್ರಯಾಣಿಸಿದ ಭಾರತದ ಕೆಲವೇ ಜನರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ. ತಮ್ಮ ಸೈಕ್ಲಿಂಗ್‌ ಸಾಧನೆ ಮೂಲಕ ಯುವಜನರಲ್ಲಿ ಸ್ಫೂರ್ತಿ ತುಂಬುತ್ತಿರುವ ರಾಜೇಶ್‌ ಕಾಲ್ರಾ ಅವರು, ಫಿಟ್ನೆಸ್‌ಗೆ ವಯಸ್ಸು ಅಡ್ಡಿಯಲ್ಲ ಎಂಬುದಕ್ಕೆ ಉದಾಹರಣೆಯಾಗಿದ್ದಾರೆ.ಈ ಬಗ್ಗೆ ‘ಕನ್ನಡಪ್ರಭ’ ಜೊತೆ ಸಂತಸ ಹಂಚಿಕೊಂಡಿರುವ ಅವರು, ಯಾವುದೇ ಸಾಧನೆಗೂ ವಯಸ್ಸು ಅಡ್ಡಿಯಲ್ಲ ಎಂದು ಸಾಬೀತುಪಡಿಸುವುದು ತಮ್ಮ ಉದ್ದೇಶ ಎಂದು ಹೇಳಿದರು.  

ಅಲ್ಲದೆ, ಭಾರತವನ್ನು ಸೈಕ್ಲಿಂಗ್‌ಗೆ ಉತ್ತಮ ಜಾಗವಾಗಿ ಬಿಂಬಿಸಲು ಬಯಸುತ್ತೇನೆ ಎಂದು ಹೇಳಿದರು. ‘ಇದು ಜಗತ್ತಿನ ಬೇರೆಲ್ಲಿಯೂ ಮಾಡಲು ಸಾಧ್ಯವಿಲ್ಲ. ಎವರೆಸ್ಟ್ ಬೇಸ್ ಕ್ಯಾಂಪ್‌ಗಿಂತ ಎತ್ತರದ ಪ್ರದೇಶಗಳಲ್ಲಿ ನೀವು ಬೇರೆ ಎಲ್ಲಿ ಸವಾರಿ ಮಾಡಬಹುದು?’ ಎಂದು ಅವರು ಹೇಳಿದ್ದಾರೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.
Read more Articles on

Recommended Stories

ಚಿನ್ನಸ್ವಾಮಿಯಲ್ಲಿ ಪಂದ್ಯಕ್ಕೆ ಇನ್ನೂ ಸಿಗದ ಅನುಮತಿ
ಟಿ20 ವಿಶ್ವಕಪ್‌ನಿಂದ ಉಪನಾಯಕ ಗಿಲ್‌ಗೆ ಗೇಟ್‌ಪಾಸ್‌, ಕಿಶನ್ ಆಯ್ಕೆ!