ಹುಬ್ಬಳ್ಳಿ: ರಾಷ್ಟ್ರೀಯ ತಂಡಕ್ಕೆ ಕಮ್‌ಬ್ಯಾಕ್, ಪಾದಾರ್ಪಣೆ ಸೇರಿದಂತೆ ಹಿರಿಯ-ಯುವ ಕ್ರಿಕೆಟಿಗರ ಕ್ರಿಕೆಟ್ ಬದುಕು ನಿರ್ಧರಿಸುವ ರಣಜಿ ಟ್ರೋಫಿ ರಾಷ್ಟ್ರೀಯ ಕ್ರಿಕೆಟ್ ಟೂರ್ನಿಗೆ ಶುಕ್ರವಾರ ಚಾಲನೆ ಸಿಗಲಿದೆ. 8 ಬಾರಿ ಚಾಂಪಿಯನ್ ಕರ್ನಾಟಕ ಹುಬ್ಬಳ್ಳಿಯಲ್ಲಿ ಪಂಜಾಬ್ ವಿರುದ್ಧ ಆಡುವ ಮೂಲಕ ಟೂರ್ನಿಯಲ್ಲಿ ಅಭಿಯಾನ ಆರಂಭಿಸಲಿದೆ.
ಟೂರ್ನಿಯಲ್ಲಿ 38 ತಂಡಗಳು ಪಾಲ್ಗೊಳ್ಳಲಿದ್ದಸು, ಈ ಪೈಕಿ ತಲಾ 8 ತಂಡಗಳ 4 ಎಲೈಟ್ ಗುಂಪುಗಳು ಹಾಗೂ 6 ತಂಡವಿರುವ 1 ಪ್ಲೇಟ್ ಗುಂಪನ್ನಾಗಿ ವಿಂಗಡಿಸಲಾಗಿದೆ. ಕರ್ನಾಟಕ ಎಲೈಟ್ ‘ಸಿ’ ಗುಂಪಿನಲ್ಲಿ ಪಂಜಾಬ್, ರೈಲ್ವೇಸ್, ತಮಿಳುನಾಡು, ಗೋವಾ, ಗುಜರಾತ್, ತ್ರಿಪುರಾ, ಚಂಡೀಗಢ ಜೊತೆ ಸ್ಥಾನ ಗಿಟ್ಟಿಸಿಕೊಂಡಿದೆ.
ಟೂರ್ನಿಯ ಮಾದರಿ: 6 ತಂಡಗಳಿರುವ ಪ್ಲೇಟ್ ಗುಂಪಿನಲ್ಲಿ ಪ್ರತಿ ತಂಡಗಳು ಒಮ್ಮೆ ಪರಸ್ಪರ ಸೆಣಸಾಡಲಿದೆ. ಅಗ್ರ 4 ತಂಡಗಳು ಸೆಮೀಸ್‌ಗೇರಿ, ಗೆಲ್ಲುವ ತಂಡಗಳು ಫೆ.17ರಿಂದ ಪ್ಲೇಟ್ ಫೈನಲ್‌ನಲ್ಲಿ ಸೆಣಸಾಡಲಿದೆ. ಇನ್ನು, ಎಲೈಟ್ ಗುಂಪಿನ ತಂಡಗಳು ಗುಂಪು ಹಂತದಲ್ಲಿ ಇತರ ತಂಡಗಳ ವಿರುದ್ಧ 1 ಬಾರಿ ಮುಖಾಮುಖಿಯಾಗಲಿದ್ದು, ಅಗ್ರ 2 ತಂಡಗಳು ಕ್ವಾರ್ಟರ್ ಫೈನಲ್‌ಗೇರಲಿವೆ.
ಮಾ.10ರಿಂದ ಫೈನಲ್ ಪಂದ್ಯ ನಡೆಯಲಿದ್ರಾದು, ರಾಜ್ಯಕ್ಕೆ ದಶಕದ ಬಳಿಕ ಪ್ರಶಸ್ತಿ ಗುರಿ ಕರ್ನಾಟಕ ತಂಡ ರಣಜಿಯ ಬಲಿಷ್ಠ ತಂಡಗಳಲ್ಲಿ ಒಂದು. 8 ಬಾರಿ ಪ್ರಶಸ್ತಿ ಗೆದ್ದಿದ್ದು, 6 ಬಾರಿ ರನ್ನರ್ ಅಪ್ ಆಗಿದೆ. ಆದರೆ 2014-15ರಲ್ಲಿ ಪ್ರಶಸ್ತಿ ಗೆದ್ದ ಬಳಿಕ ಒಮ್ಮೆಯೂ ಫೈನಲ್‌ಗೇರಿಲ್ಲ. ಅಂದರೆ ರಾಜ್ಯ ತಂಡ ಒಂದು ದಶಕದಿಂದಲೂ ಪ್ರಶಸ್ತಿ ಬರ ಎದುರಿಸುತ್ತಿದೆ.
ಈ ವರ್ಷ ಸೆಮಿಫೈನಲ್‌ನಲ್ಲಿ ಎಡವಿದ್ದ ಕರ್ನಾಟಕ ಈ ವರ್ಷ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಅನುಭವಿಗಳಾದ ಮಯಾಂಕ್, ಮನೀಶ್ ಪಾಂಡೆ ಜೊತೆಗೆ ಮೊದಲ ಬಾರಿ ರಾಜ್ಯ ರಣಜಿ ತಂಡಕ್ಕೆ ಆಯ್ಕೆಯಾಗಿರುವ ಶಶಿಕುಮಾರ್, ಕಿಶನ್ ಬಿದಾರೆ, ರೋಹಿತ್ ಕುಮಾರ್ ಸೇರಿದಂತೆ ಯುವ ಪ್ರತಿಭಾವಂತ ಆಟಗಾರರ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.