;Resize=(412,232))
ವಡೋದರಾ: ಮಾಜಿ ಚಾಂಪಿಯನ್ ಆರ್‌ಸಿಬಿ ತಂಡ ಈ ಬಾರಿ ಡಬ್ಲ್ಯುಪಿಎಲ್‌ನಲ್ಲಿ ಸತತ 5ನೇ ಗೆಲುವು ದಾಖಲಿಸಿದ್ದು, ಪ್ಲೇ-ಆಫ್‌ನಲ್ಲಿ ಸ್ಥಾನ ಖಚಿತಪಡಿಸಿಕೊಂಡಿದೆ. ಗುಜರಾತ್ 5 ಪಂದ್ಯಗಳಲ್ಲಿ 3ನೇ ಸೋಲನುಭವಿಸಿದೆ.
ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 6 ವಿಕೆಟ್‌ಗೆ 178 ರನ್ ಕಲೆಹಾಕಿತು. 9 ರನ್‌ಗೆ 2 ವಿಕೆಟ್ ಕಳೆದುಕೊಂಡರೂ ಬಳಿಕ ತಂಡ ಚೇತರಿಸಿಕೊಂಡಿತು. ಗೌತಮಿ ನಾಯ್ಕ್ 55 ಎಸೆತಕ್ಕೆ 73 ರನ್ ಸಿಡಿಸಿದರೆ ನಾಯಕಿ ಸ್ಮೃತಿ ಮಂಧನಾ 26, ರಿಚಾ ಘೋಷ್ 27 ರನ್ ಕೊಡುಗೆ ನೀಡಿದರು.
ದೊಡ್ಡ ಗುರಿ ಬೆನ್ನತ್ತಿದ ಗುಜರಾತ್ 8 ವಿಕೆಟ್ ನಷ್ಟದಲ್ಲಿ 111 ರನ್ ಗಳಿಸಿ ಸೋಲೊಪ್ಪಿಕೊಂಡಿತು. ನಾಯಕಿ ಆ್ಯಶ್ಲೆ ಗಾರ್ಡ್ನರ್(54 ರನ್) ಏಕಾಂಗಿ ಹೋರಾಟ ತಂಡಕ್ಕೆ ಗೆಲುವು ತಂದುಕೊಡಲಿಲ್ಲ. ಸಯಾಲಿ ಸತ್ಗಾರೆ 3, ನ್ಯಾಡಿನ್ ಡೆ ಕ್ಲರ್ಕ್ 2 ವಿಕೆಟ್ ಪಡೆದರು.
ಡೆಲ್ಲಿ-ಮುಂಬೈ, ಸಂಜೆ 7.30ಕ್ಕೆ