ಮಾ.22ಕ್ಕೆ ಆರ್‌ಸಿಬಿ vs ಕೆಕೆಆರ್ ಫೈಟ್‌ - ಬಹುನಿರೀಕ್ಷಿತ 18ನೇ ಆವೃತ್ತಿ ವೇಳಾಪಟ್ಟಿ ಪ್ರಕಟ

Published : Feb 17, 2025, 12:45 PM IST
RCB vs CSK 68th IPL Match

ಸಾರಾಂಶ

ಬಹುನಿರೀಕ್ಷಿತ 18ನೇ ಆವೃತ್ತಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌)ನ ವೇಳಾಪಟ್ಟಿ ಪ್ರಕಟಗೊಂಡಿದೆ. ಮಾ.22ರಂದು ಟೂರ್ನಿಗೆ ಚಾಲನೆ ಸಿಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ ಆರ್‌ಸಿಬಿ ವಿರುದ್ಧ ಸೆಣಸಾಡಲಿದೆ.

ನವದೆಹಲಿ: ಬಹುನಿರೀಕ್ಷಿತ 18ನೇ ಆವೃತ್ತಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌)ನ ವೇಳಾಪಟ್ಟಿ ಪ್ರಕಟಗೊಂಡಿದೆ. ಮಾ.22ರಂದು ಟೂರ್ನಿಗೆ ಚಾಲನೆ ಸಿಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ ಆರ್‌ಸಿಬಿ ವಿರುದ್ಧ ಸೆಣಸಾಡಲಿದೆ.

ಈ ಬಾರಿ 10 ತಂಡಗಳು ಪಾಲ್ಗೊಳ್ಳಲಿದ್ದು, 65 ದಿನಗಳ ಕಾಲ ಒಟ್ಟು 74 ಪಂದ್ಯಗಳು ನಡೆಯಲಿವೆ. ಮೇ 25ರಂದು ಫೈನಲ್‌ ಪಂದ್ಯ ನಿಗದಿಯಾಗಿದೆ. ಉದ್ಘಾಟನಾ ಪಂದ್ಯ ಹಾಗೂ ಫೈನಲ್‌ಗೆ ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಈ ಬಾರಿ ಟೂರ್ನಿಯಲ್ಲಿ ಒಟ್ಟು 12 ದಿನ ಡಬಲ್‌ ಹೆಡರ್‌(ದಿನಕ್ಕೆ 2 ಪಂದ್ಯ) ಇರಲಿದೆ. ದಿನದ ಮೊದಲ ಪಂದ್ಯ ಮಧ್ಯಾಹ್ನ 3.30ಕ್ಕೆ, 2ನೇ ಪಂದ್ಯ ಸಂಜೆ 7.30ಕ್ಕೆ ಆರಂಭಗೊಳ್ಳಲಿವೆ.

ಟೂರ್ನಿ ಮಾದರಿ ಹೇಗೆ?: ಟೂರ್ನಿಯಲ್ಲಿ 10 ತಂಡಗಳಿದ್ದು, ಪ್ರತಿ ತಂಡ ತಲಾ 14 ಪಂದ್ಯಗಳನ್ನಾಡಲಿವೆ. ನಿರ್ದಿಷ್ಟ 5 ತಂಡಗಳ ವಿರುದ್ಧ ತಲಾ 2 ಹಾಗೂ ಇತರ 4 ತಂಡಗಳ ವಿರುದ್ಧ ತಲಾ 1 ಪಂದ್ಯ ಆಡಲಿದೆ. ಲೀಗ್‌ ಹಂತದ ಮುಕ್ತಾಯಕ್ಕೆ ಅಗ್ರ-2 ಸ್ಥಾನ ಪಡೆಯುವ ತಂಡಗಳು ಕ್ವಾಲಿಫೈರ್‌-1 ಪ್ರವೇಶಿಸಲಿದ್ದು, 3 ಮತ್ತು 4ನೇ ಸ್ಥಾನ ಪಡೆದ ತಂಡಗಳು ಎಲಿಮಿನೇಟರ್‌ನಲ್ಲಿ ಆಡಲಿವೆ. ಬಳಿಕ ಕ್ವಾಲಿಫೈರ್‌-1ರಲ್ಲಿ ಸೋತ ತಂಡ, ಎಲಿಮಿನೇಟರ್‌ ಗೆದ್ದ ತಂಡ ಕ್ವಾಲಿಫೈರ್-2 ಪ್ರವೇಶಿಲಿವೆ.

13 ಕ್ರೀಡಾಂಗಣ ಆತಿಥ್ಯ: ಬೆಂಗಳೂರಲ್ಲಿ 7 ಪಂದ್ಯ

ಈ ಬಾರಿ ಟೂರ್ನಿಗೆ ಒಟ್ಟು 13 ಕ್ರೀಡಾಂಗಣಗಳು ಆತಿಥ್ಯ ವಹಿಸಲಿವೆ. ಎಲ್ಲಾ ತಂಡಗಳ ತವರು ಮೈದಾನದ ಜೊತೆಗೆ ಧರ್ಮಶಾಲಾ(3 ಪಂದ್ಯ), ಗುವಾಹಟಿ(2) ಹಾಗೂ ವಿಶಾಖಪಟ್ಟಣಂ(2)ನಲ್ಲೂ ಕೆಲ ಪಂದ್ಯಗಳು ಆಯೋಜನೆಗೊಳ್ಳಲಿವೆ. ಆರ್‌ಸಿಬಿ ತನ್ನ ತವರು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 7 ಪಂದ್ಯಗಳನ್ನಾಡಲಿವೆ.

ಅರ್‌ಸಿಬಿ ಪಂದ್ಯಗಳ ವೇಳಾಪಟ್ಟಿ

ಎದುರಾಳಿ ದಿನಾಂಕ ಸ್ಥಳ ಸಮಯ

ಕೆಕೆಆರ್‌ ಮಾ.22 ಕೋಲ್ಕತಾ ಸಂಜೆ 7.30

ಚೆನ್ನೈ ಮಾ.28 ಚೆನ್ನೈ ಸಂಜೆ 7.30

ಗುಜರಾತ್‌ ಏ.2 ಬೆಂಗಳೂರು ಸಂಜೆ 7.30

ಮುಂಬೈ ಏ.7 ಮುಂಬೈ ಸಂಜೆ 7.30

ಡೆಲ್ಲಿ ಏ.10 ಬೆಂಗಳೂರು ಸಂಜೆ 7.30

ರಾಜಸ್ಥಾನ ಏ.13 ಜೈಪುರ ಮಧ್ಯಾಹ್ನ 3.30

ಪಂಜಾಬ್‌ ಏ.18 ಬೆಂಗಳೂರು ಸಂಜೆ 7.30

ಪಂಜಾಬ್‌ ಏ.20 ಚಂಡೀಗಢ ಮಧ್ಯಾಹ್ನ 3.30

ರಾಜಸ್ಥಾನ ಏ.24 ಬೆಂಗಳೂರು ಸಂಜೆ 7.30

ಡೆಲ್ಲಿ ಏ.27 ನವದೆಹಲಿ ಸಂಜೆ 7.30

ಚೆನ್ನೈ ಮೇ 3 ಬೆಂಗಳೂರು ಸಂಜೆ 7.30

ಲಖನೌ ಮೇ 9 ಲಖನೌ ಸಂಜೆ 7.30

ಸನ್‌ರೈಸರ್ಸ್‌ ಮೇ 9 ಬೆಂಗಳೂರು ಸಂಜೆ 7.30

ಕೆಕೆಆರ್‌ ಮೇ 17 ಬೆಂಗಳೂರು ಸಂಜೆ 7.30

ಕೋಲ್ಕತಾ, ಹೈದ್ರಾಬಾದಲ್ಲಿ

ನಾಕೌಟ್‌, ಫೈನಲ್‌ ಪಂದ್ಯ

ಕ್ವಾಲಿಫೈರ್‌-1 ಹಾಗೂ ಎಲಿಮಿನೇಟರ್ ಪಂದ್ಯ ಕ್ರಮವಾಗಿ ಮೇ 20 ಹಾಗೂ 21ರಂದು ಹೈದರಾಬಾದ್‌ನಲ್ಲಿ ನಡೆಯಲಿವೆ. ಬಳಿಕ ಕೋಲ್ಕತಾದಲ್ಲಿ ಕ್ವಾಲಿಫೈರ್-2 ಮೇ 23ಕ್ಕೆ, ಫೈನಲ್‌ ಪಂದ್ಯ ಮೇ 25ಕ್ಕೆ ನಡೆಯಲಿದೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಶಿಕ್ಷಕ ತಂದೆಗೆ ₹12 ಸಾವಿರ ವೇತನ, ಮಗನಿಗೆ ₹14.2 ಕೋಟಿ!
ಫಿಫಾ ವಿಶ್ವಕಪ್‌ ಗೆದ್ರೆ ₹452 ಕೋಟಿ!