ರಿಚಾ ಹೋರಾಟಕ್ಕಿಲ್ಲ ಫಲ: ಆಫ್ರಿಕಾಗೆ ಭಾರತ ಶರಣು!

Published : Oct 10, 2025, 11:09 AM IST
Richa Ghosh, India Women

ಸಾರಾಂಶ

 ಮಹಿಳಾ ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದ ಭಾರತಕ್ಕೆ ಆಘಾತ ಎದುರಾಗಿದೆ. ಗುರುವಾರ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 3 ವಿಕೆಟ್‌ಗಳಿಂದ ಪರಾಭವಗೊಂಡಿತು. ತೀವ್ರ ಬ್ಯಾಟಿಂಗ್‌ ವೈಫಲ್ಯಕ್ಕೆ ತುತ್ತಾಗಿದ್ದ ಭಾರತವನ್ನು ರಿಚಾ  ತಮ್ಮ ಹೋರಾಟದ ಮೂಲಕ ಮೇಲೆತ್ತಿದರೂ ಗೆಲುವು ಸಿಗಲಿಲ್ಲ.

 ವಿಶಾಖಪಟ್ಟಣಂ: ಈ ಬಾರಿ ಮಹಿಳಾ ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದ ಭಾರತಕ್ಕೆ ಆಘಾತ ಎದುರಾಗಿದೆ. ಗುರುವಾರ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 3 ವಿಕೆಟ್‌ಗಳಿಂದ ಪರಾಭವಗೊಂಡಿತು. ತೀವ್ರ ಬ್ಯಾಟಿಂಗ್‌ ವೈಫಲ್ಯಕ್ಕೆ ತುತ್ತಾಗಿದ್ದ ಭಾರತವನ್ನು ರಿಚಾ ಘೋಷ್‌ ತಮ್ಮ ಹೋರಾಟದ ಮೂಲಕ ಮೇಲೆತ್ತಿದರೂ, ತಂಡಕ್ಕೆ ಗೆಲುವು ಸಿಗಲಿಲ್ಲ. ಆಫ್ರಿಕಾ 3 ಪಂದ್ಯಗಳಲ್ಲಿ 2ನೇ ಜಯಗಳಿಸಿತು.

ಮೊದಲು ಬ್ಯಾಟ್‌ ಮಾಡಿದ ಭಾರತ 49.5 ಓವರ್‌ಗಳಲ್ಲಿ 251 ರನ್‌ಗೆ ಆಲೌಟಾಯಿತು. 10 ಓವರಲ್ಲಿ ವಿಕೆಟ್‌ ನಷ್ಟವಿಲ್ಲದೆ 55 ರನ್‌ ಗಳಿಸಿದ್ದ ತಂಡ 26 ಓವರಲ್ಲಿ 102 ರನ್‌ ಗಳಿಸುವಷ್ಟರಲ್ಲಿ 6 ವಿಕೆಟ್‌ ಕಳೆದುಕೊಂಡಿತು. ಈ ವೇಳೆ ತಂಡಕ್ಕೆ ಆಸರೆಯಾಗಿದ್ದು ರಿಚಾ ಘೋಷ್‌. ಅವರು 77 ಎಸೆತಕ್ಕೆ 94 ರನ್‌ ಸಿಡಿಸಿದರು. ಸ್ನೇಹ ರಾಣಾ 33 ರನ್‌ ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು. ಪ್ರತಿಕಾ ರಾವಲ್‌37, ಸ್ಮೃತಿ ಮಂಧನಾ 23 ರನ್‌ ಕೊಡುಗೆ ನೀಡಿದರು.

ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ದ.ಆಫ್ರಿಕಾ 48.5 ಓವರ್‌ಗಳಲ್ಲಿ ಜಯಗಳಿಸಿತು. 81 ರನ್‌ಗೆ 5 ವಿಕೆಟ್‌ ಕಳೆದುಕೊಂಡರೂ ನಾಯಕಿ ಲಾರಾ ವೊಲ್ವಾರ್ಟ್‌(70), ನ್ಯಾಡಿನ್‌ ಡಿ ಕ್ಲೆರ್ಕ್‌(ಔಟಾಗದೆ 84) ಹಾಗೂ ಕ್ಲೋ ಟ್ರಿಯಾನ್‌(49) ಹೋರಾಟ ತಂಡಕ್ಕೆ ಗೆಲುವು ತಂದುಕೊಟ್ಟಿತು.

ಸ್ಕೋರ್‌: ಭಾರತ 49.5 ಓವರಲ್ಲಿ 251/10 (ರಿಚಾ 94, ಪ್ರತಿಕಾ 37, ಸ್ನೇಹ 33, ಟ್ರಿಯಾನ್‌ 3-32), ದ.ಆಫ್ರಿಕಾ 48.5 ಓವರಲ್ಲಿ 252/7 (ಕ್ಲೆರ್ಕ್‌ 84, ವೊಲ್ವಾರ್ಟ್‌ 70, ಸ್ನೇಹ 2-47)

ಪಂದ್ಯಶ್ರೇಷ್ಠ: ನ್ಯಾಡಿನ್‌ ಡೆ ಕ್ಲೆರ್ಕ್‌

PREV
Read more Articles on

Recommended Stories

ಭಾರತಕ್ಕೆ ಸರಣಿ ಜಯ ಗುರಿ : ಇಂದಿನಿಂದ ನವದೆಹಲಿಯಲ್ಲಿ 2ನೇ ಟೆಸ್ಟ್‌ ಪಂದ್ಯ
ಮಹಿಳಾ ವಿಶ್ವಕಪ್‌: ಹ್ಯಾಟ್ರಿಕ್‌ ಗೆಲುವಿನ ವಿಶ್ವಾಸದಲ್ಲಿರುವ ಭಾರತಕ್ಕೆ ದಕ್ಷಿಣ ಆಫ್ರಿಕಾ ಚಾಲೆಂಜ್‌