4 ಐಪಿಎಲ್‌ ಆವೃತ್ತಿಗಳಲ್ಲಿ 600 + ರನ್‌: ಕಿಂಗ್‌ ಕೊಹ್ಲಿ ದಾಖಲೆ

KannadaprabhaNewsNetwork |  
Published : May 10, 2024, 01:36 AM ISTUpdated : May 10, 2024, 04:16 AM IST
ವಿರಾಟ್‌ ಕೊಹ್ಲಿ | Kannada Prabha

ಸಾರಾಂಶ

ರನ್ ಮೆಷಿನ್‌ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ. ಅವರು ಐಪಿಎಲ್‌ನ 4 ಆವೃತ್ತಿಗಳಲ್ಲಿ 600ಕ್ಕೂ ಹೆಚ್ಚು ರನ್‌ ಕಲೆಹಾಕಿದ 2ನೇ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಧರ್ಮಶಾಲಾ: ರನ್ ಮೆಷಿನ್‌ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ. ಅವರು ಐಪಿಎಲ್‌ನ 4 ಆವೃತ್ತಿಗಳಲ್ಲಿ 600ಕ್ಕೂ ಹೆಚ್ಚು ರನ್‌ ಕಲೆಹಾಕಿದ 2ನೇ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಗುರುವಾರ ಪಂಜಾಬ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ 47 ಎಸೆತಗಳಲ್ಲಿ 92 ರನ್‌ ಸಿಡಿಸಿದ ವಿರಾಟ್‌, ಈ ಬಾರಿ ಟೂರ್ನಿಯ ರನ್‌ ಗಳಿಕೆಯನ್ನು 634ಕ್ಕೆ ಹೆಚ್ಚಿಸಿದರು. ಈ ಮೊದಲು 2016ರಲ್ಲಿ 973, 2023ರಲ್ಲಿ 639 ಹಾಗೂ 2013ರಲ್ಲಿ 634 ರನ್‌ ಗಳಿಸಿದ್ದರು. ಸದ್ಯ ಲಖನೌ ಪರ ಆಡುತ್ತಿರುವ ಕೆ.ಎಲ್‌.ರಾಹುಲ್ ಕೂಡಾ 4 ಆವೃತ್ತಿಗಳಲ್ಲಿ ತಲಾ 600+ ರನ್‌ ಸಿಡಿಸಿದ್ದಾರೆ. ಇನ್ನು, ಕ್ರಿಸ್‌ ಗೇಲ್‌ ಹಾಗೂ ಡೇವಿಡ್‌ ವಾರ್ನರ್‌ 3, ಫಾಫ್‌ ಡು ಪ್ಲೆಸಿ 2 ಆವೃತ್ತಿಗಳಲ್ಲಿ ಈ ಸಾಧನೆ ಮಾಡಿದ್ದಾರೆ.

3 ತಂಡಗಳ ವಿರುದ್ಧ ಕೊಹ್ಲಿ 1000+ ರನ್‌

ವಿರಾಟ್‌ ಪಂಜಾಬ್‌ ವಿರುದ್ಧ ಐಪಿಎಲ್‌ನಲ್ಲಿ 1000 ರನ್‌ ಪೂರ್ಣಗೊಳಿಸಿದರು. ಇದರೊಂದಿಗೆ 3 ವಿವಿಧ ತಂಡಗಳ ವಿರುದ್ಧ ಸಾವಿರಕ್ಕೂ ಅಧಿಕ ರನ್‌ ಗಳಿಸಿದ ಏಕೈಕ ಬ್ಯಾಟರ್‌ ಎನಿಸಿಕೊಂಡರು. ಚೆನ್ನೈ, ಡೆಲ್ಲಿ ವಿರುದ್ಧವೂ ಅವರು ಈ ಸಾಧನೆ ಮಾಡಿದ್ದಾರೆ. ರೋಹಿತ್‌ ಶರ್ಮಾ ಡೆಲ್ಲಿ ಹಾಗೂ ಕೆಕೆಆರ್‌, ಡೇವಿಡ್‌ ವಾರ್ನರ್‌ ಕೆಕೆಆರ್‌ ಹಾಗೂ ಪಂಜಾಬ್‌ ವಿರುದ್ಧ 1000ಕ್ಕೂ ಅಧಿಕ ರನ್‌ ಗಳಿಸಿದ್ದಾರೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಶಿಕ್ಷಕ ತಂದೆಗೆ ₹12 ಸಾವಿರ ವೇತನ, ಮಗನಿಗೆ ₹14.2 ಕೋಟಿ!
ಫಿಫಾ ವಿಶ್ವಕಪ್‌ ಗೆದ್ರೆ ₹452 ಕೋಟಿ!