ಕೊನೆಗೂ ಎಚ್ಚೆತ್ತು ಸ್ಯಾಮ್ಸನ್ ಸೆಂಚುರಿ!

KannadaprabhaNewsNetwork |  
Published : Dec 22, 2023, 01:30 AM IST
ಫೋಟೊ: ಟ್ವಿಟರ್‌ | Kannada Prabha

ಸಾರಾಂಶ

ಪಾರ್ಲ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಒಂದೆಡೆ ವಿಕೆಟ್‌ ಉರುಳುತ್ತಿದ್ದರೂ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ ಸ್ಯಾಮ್ಸನ್‌ 114 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್‌ನೊಂದಿಗೆ 108 ರನ್‌ ಸಿಡಿಸಿದರು.

ಪಾರ್ಲ್‌(ದ.ಆಫ್ರಿಕಾ): ಈಗ ಆಡದಿದ್ದರೆ ಟೀಂ ಇಂಡಿಯಾದಲ್ಲಿ ಇನ್ನು ಮುಂದೆ ಆಡಲು ಅವಕಾಶವೇ ಸಿಗಲ್ಲ ಎಂಬಂತಿದ್ದ ಸಂಜು ಸ್ಯಾಮ್ಸನ್‌ ಕೊನೆಗೂ ಸಿಕ್ಕ ಅವಕಾಶ ಬಳಸಿಕೊಂಡಿದ್ದಾರೆ. ಗುರುವಾರ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಹಾಗೂ ಕೊನೆ ಏಕದಿನ ಪಂದ್ಯದಲ್ಲಿ ನಿರ್ಣಾಯಕ ಘಟ್ಟದಲ್ಲಿ ಸ್ಯಾಮ್ಸನ್‌ ಶತಕ ಸಿಡಿಸಿದ್ದಾರೆ.ಪಾರ್ಲ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಒಂದೆಡೆ ವಿಕೆಟ್‌ ಉರುಳುತ್ತಿದ್ದರೂ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ ಸ್ಯಾಮ್ಸನ್‌ 114 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್‌ನೊಂದಿಗೆ 108 ರನ್‌ ಸಿಡಿಸಿದರು. 4ನೇ ವಿಕೆಟ್‌ಗೆ ಅವರು ತಿಲಕ್‌ ವರ್ಮಾ ಜೊತೆಗೂಡಿ ಆಕರ್ಷಕ ಇನ್ನಿಂಗ್ಸ್‌ ಕಟ್ಟಿ, ತನ್ನ ಸಾಮರ್ಥ್ಯವನ್ನು ತಡವಾಗಿಯಾದರೂ ಪ್ರದರ್ಶಿಸಿದರು.ಐಪಿಎಲ್‌ ಹಾಗೂ ದೇಸಿ ಟೂರ್ನಿಗಳಲ್ಲಿ ಅಬ್ಬರಿಸುವ ಸ್ಯಾಮ್ಸನ್‌ಗೆ ಈ ಮೊದಲ ಹಲವು ಬಾರಿ ಭಾರತ ತಂಡದಲ್ಲಿ ಅವಕಾಶ ನೀಡಲಾಗಿತ್ತು. ಆದರೆ ಅದನ್ನು ಸಮರ್ಥವಾಗಿ ಬಳಸಿಕೊಂಡಿರಲಿಲ್ಲ. ಕೆಲವೊಮ್ಮೆ ಉತ್ತಮ ಆಟವಾಡಿದರೂ ತಂಡದಿಂದ ಹೊರಬಿದ್ದ ಉದಾಹರಣೆಯೂ ಇದೆ. 16 ಏಕದಿನ ಪಂದ್ಯಗಳಲ್ಲಿ 50+ ಸರಾಸರಿ ಹೊಂದಿದ್ದರೂ ಆಯ್ಕೆ ಸಮಿತಿ ಗಮನ ಸೆಳೆಯಲು ವಿಫಲರಾಗಿದ್ದರು. ಇತ್ತೀಚೆಗೆ ಏಕದಿನ ವಿಶ್ವಕಪ್‌ ತಂಡದಲ್ಲೂ ಅವರಿಗೆ ಸ್ಥಾನ ಸಿಕ್ಕಿರಲಿಲ್ಲ.ಈ ನಡುವೆ ಟಿ20 ವಿಶ್ವಕಪ್‌ ಮುಂದಿರುವಾಗ ಏಕದಿನ ಸರಣಿದಲ್ಲಿ ಸ್ಥಾನ ಪಡೆದಿರುವ ಅವರು ಸದ್ಯ ತಮ್ಮ ಸ್ಥಿರತೆ ಕಾಯ್ದುಕೊಳ್ಳಬೇಕಿದೆ. ತಂಡದಲ್ಲಿ ಈಗ ಸ್ಥಾನಕ್ಕಾಗಿ ಯುವ ಆಟಗಾರರ ನಡುವೆ ಪೈಪೋಟಿ ಹೆಚ್ಚಿದ್ದು, ಭರ್ಜರಿ ಆಟ ಮುಂದುವರಿಸಿದರಷ್ಟೇ ಖಾಯಂ ಸ್ಥಾನ ಸಿಗಲಿದೆ.-01ನೇ ಬ್ಯಾಟರ್‌ಸಂಜು ಸ್ಯಾಮ್ಯನ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಕೇರಳದ ಮೊದಲ ಕ್ರಿಕೆಟಿಗ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಕಪ್‌ತುಳಿತ ತನಿಖಾ ವರದಿ ಹೈಕೋರ್ಟ್‌ ಪರಾಮರ್ಶೆಗೆ
₹10 ಲಕ್ಷ ಕೊಡಿ, ಮೆಸ್ಸಿ ಜೊತೆಗೆ ಒಂದು ಫೋಟೋ ತೆಗೆಸಿಕೊಳ್ಳಿ!