ರಾಷ್ಟ್ರೀಯ ಟೆನಿಸ್‌: ರಶ್ಮಿಕಾ,ಸಿದ್ಧಾರ್ಥ್‌ ಚಾಂಪಿಯನ್‌

KannadaprabhaNewsNetwork |  
Published : Oct 08, 2023, 12:01 AM IST

ಸಾರಾಂಶ

28ನೇ ರಾಷ್ಟ್ರೀಯ ಟೆನಿಸ್‌ ಚಾಂಪಿಯನ್‌ಶಿಪ್‌

ನವದೆಹಲಿ: ಇಲ್ಲಿ ಶನಿವಾರ ಮುಕ್ತಾಯಗೊಂಡ 28ನೇ ರಾಷ್ಟ್ರೀಯ ಟೆನಿಸ್‌ ಚಾಂಪಿಯನ್‌ಶಿಪ್‌ನಲ್ಲಿ ಉತ್ತರ ಪ್ರದೇಶದ ಸಿದ್ಧಾರ್ಥ್‌ ವಿಶ್ವಕರ್ಮ ಹಾಗೂ ತೆಲಂಗಾಣದ ರಶ್ಮಿಕಾ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಶನಿವಾರ ನಡೆದ ಮಹಿಳಾ ಸಿಂಗಲ್ಸ್‌ ಫೈನಲ್‌ನಲ್ಲಿ ರಶ್ಮಿಕಾ ಕಳೆದ ಬಾರಿ ಚಾಂಪಿಯನ್‌, ಗುಜರಾತ್‌ನ ವೈದೇಹಿ ಚೌಧರಿ ವಿರುದ್ಧ 6-4, 4-6, 7-6 ಅಂತರದಲ್ಲಿ ಗೆಲುವು ಸಾಧಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡರು. ಇದೇ ವೇಳೆ ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ ಸಿದ್ಧಾರ್ಥ್‌, ಹರ್ಯಾಣದ ಕರಣ್‌ ಸಿಂಗ್‌ ವಿರುದ್ಧ 4-6, 6-3, 6-4 ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು. ಪುರುಷ ಹಾಗೂ ಮಹಿಳಾ ವಿಭಾಗದ ಚಾಂಪಿಯನ್ನರು ತಲಾ 3 ಲಕ್ಷ ರು. ನಗದು ಬಹುಮಾನ ಪಡೆದರೆ, ಇಬ್ಬರು ರನ್ನರ್‌-ಅಪ್‌ಗಳಿಗೆ ತಲಾ 2 ಲಕ್ಷ ರು. ಲಭಿಸಿತು.

PREV

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ವಯೋ ವಂಚನೆ ಪತ್ತೆಗೆ ಖಾಸಗಿ ಸಂಸ್ಥೆ ನೆರವುಪಡೆಯಲಿದೆ ಬಿಸಿಸಿಐ