ಮೆಲ್ಬರ್ನ್: ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿರುವ ಭಾರತದ ಹಿರಿಯ ಟೆನಿಸಿಗ, ಕರ್ನಾಟಕದ ರೋಹನ್ ಬೋಪಣ್ಣ ಪುರುಷರ ಡಬಲ್ಸ್ ರ್‍ಯಾಂಕಿಂಗ್‌ನಲ್ಲಿ ವಿಶ್ವ ನಂ.1 ಸ್ಥಾನ ಖಚಿತಪಡಿಸಿಕೊಂಡಿದ್ದಾರೆ. ಇದರೊಂದಿಗೆ ಪುರುಷರ ಡಬಲ್ಸ್‌ನಲ್ಲಿ ಅಗ್ರಸ್ಥಾನಕ್ಕೇರಿದ ಹಿರಿಯ ಟೆನಿಸಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಈ ಮೊದಲು 2022ರಲ್ಲಿ ಅಮೆರಿಕದ ರಾಜೀವ್ ರಾಮ್ ತಮಗೆ 38 ವರ್ಷವಾಗಿದ್ದಾಗ ನಂ.1 ಸ್ಥಾನಕ್ಕೇರಿದ್ದರು.43 ವರ್ಷದ ಬೋಪಣ್ಣ ವಿಶ್ವ ನಂ.3ನೇ ಸ್ಥಾನಿಯಾಗಿ ಟೂರ್ನಿಗೆ ಕಾಲಿರಿಸಿದ್ದರು. ಬುಧವಾರ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೊತೆಗೂಡಿ ಅಂತಿಮ 4ರ ಘಟ್ಟಕ್ಕೆ ಪ್ರವೇಶಿಸುವುದರೊಂದಿಗೆ ರ್‍ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಿದ್ದಾರೆ. ಸೋಮವಾರ ಪ್ರಕಟಗೊಳ್ಳುವ ರ್‍ಯಾಂಕಿಂಗ್ ಪಟ್ಟಿಯಲ್ಲಿ ಅವರು ಅಧಿಕೃತವಾಗಿ ನಂ.1 ಸ್ಥಾನಿಯಾಗಲಿದ್ದಾರೆ.
-
ನಂ.1 ಸ್ಥಾನಕ್ಕೇರಿದನಾಲ್ಕನೇ ಭಾರತೀಯಬೋಪಣ್ಣ ಡಬಲ್ಸ್ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಲಿರುವ ಭಾರತದ 4ನೇ ಟೆನಿಸಿಗ. ಈ ಮೊದಲು ಲಿಯಾಂಡರ್ ಪೇಸ್(1999), ಸಾನಿಯಾ ಮಿರ್ಜಾ(2015) ಹಾಗೂ ಮಹೇಶ್ ಭೂಪತಿ(1999) ಡಬಲ್ಸ್‌ನಲ್ಲಿ ನಂ.1 ಸ್ಥಾನಿಯಾಗಿದ್ದರು.