ಟಿ20 ಕಿಂಗ್‌ ಸೂರ್ಯಕುಮಾರ್‌!

KannadaprabhaNewsNetwork |  
Published : Dec 15, 2023, 01:31 AM IST
ದಕ್ಷಿಣ ಆಫ್ರಿಕಾ ವಿರುದ್ಧ ಶತಕ ಬಾರಿಸಿದ ಸೂರ್ಯಕುಮಾರ್‌  | Kannada Prabha

ಸಾರಾಂಶ

ದಕ್ಷಿಣ ಆಫ್ರಿಕಾ ವಿರುದ್ಧ ಗುರುವಾರ ಇಲ್ಲಿ ನಡೆದ 3ನೇ ಟಿ20 ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದ ಸೂರ್ಯ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಜಂಟಿ ಮೊದಲ ಸ್ಥಾನಕ್ಕೇರಿದರು.

- ಅಂ.ರಾ. ಕ್ರಿಕೆಟ್‌ನಲ್ಲಿ ಅತಿಹೆಚ್ಚು ಶತಕ: ಜಂಟಿ ನಂ.1 ಸ್ಥಾನಜೋಹಾನ್ಸ್‌ಬರ್ಗ್‌: ಟಿ20 ಕ್ರಿಕೆಟ್‌ಗೆ ಹೇಳಿ ಮಾಡಿಸಿದ ಬ್ಯಾಟರ್‌ ಸೂರ್ಯಕುಮಾರ್‌ ಯಾದವ್‌. ಈ ಮಾದರಿಗೆ ಬೇಕಿರುವ ಆಕ್ರಮಣಕಾರಿ ಆಟ, ಕಲಾತ್ಮಕ ಹಾಗೂ ನವೀನ ರೀತಿಯ ಹೊಡೆತಗಳು, ಇನ್ನಿಂಗ್ಸ್‌ ಕಟ್ಟುವಾಗ ಬೇಕಿರುವ ತೀವ್ರತೆ, ಏಕಾಂಗಿಯಾಗಿ ಪಂದ್ಯ ಗೆಲ್ಲಿಸುವ ಸಾಮರ್ಥ್ಯ, ಇವೆಲ್ಲವನ್ನೂ ಸೂರ್ಯಕುಮಾರ್‌ ನಿರಂತರವಾಗಿ ಪ್ರದರ್ಶಿಸುತ್ತಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಗುರುವಾರ ಇಲ್ಲಿ ನಡೆದ 3ನೇ ಟಿ20 ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದ ಸೂರ್ಯ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಜಂಟಿ ಮೊದಲ ಸ್ಥಾನಕ್ಕೇರಿದರು. ಅಂ.ರಾ. ಟಿ20ಯಲ್ಲಿ ಸೂರ್ಯಗಿದು 4ನೇ ಶತಕ. ಕೇವಲ 55 ಎಸೆತಗಳಲ್ಲಿ ಶತಕ ಪೂರೈಸಿದ ಭಾರತದ ಹಂಗಾಮಿ ನಾಯಕ, ರೋಹಿತ್‌ ಶರ್ಮಾ ಹಾಗೂ ಆಸ್ಟ್ರೇಲಿಯಾದ ಗ್ಲೆನ್‌ ಮ್ಯಾಕ್ಸ್‌ವೆಲ್‌ರ ದಾಖಲೆಯನ್ನು ಸರಿಗಟ್ಟಿದರು. ರೋಹಿತ್‌ 140 ಇನ್ನಿಂಗ್ಸ್‌ಗಳಲ್ಲಿ 4 ಶತಕ ಬಾರಿಸಿದ್ದರೆ, ಮ್ಯಾಕ್ಸ್‌ವೆಲ್‌ 92 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಸೂರ್ಯ ಕೇವಲ 57 ಇನ್ನಿಂಗ್ಸ್‌ಗಳಲ್ಲಿ 4 ಶತಕ ಸಿಡಿಸಿರುವುದು ಅವರ ಆಟ ಎಷ್ಟು ಸ್ಥಿರತೆಯಿಂದ ಕೂಡಿದೆ ಎನ್ನುವುದಕ್ಕೆ ಸಾಕ್ಷಿ. ದ.ಆಫ್ರಿಕಾದ ಅನನುಭವಿ ಬೌಲಿಂಗ್‌ ಪಡೆಯನ್ನು ಮನಬಂದಂತೆ ಚೆಂಡಾಡಿದ ಸೂರ್ಯ, ವ್ಯಾಂಡರರ್ಸ್‌ ಕ್ರೀಡಾಂಗಣದ ಮೂಲೆ ಮೂಲೆಗೆ ಚೆಂಡನ್ನು ಅಟ್ಟಿದರು. ಅವರ ಇನ್ನಿಂಗ್ಸಲ್ಲಿ 7 ಬೌಂಡರಿ, 8 ಸಿಕ್ಸರ್‌ಗಳು ಇದ್ದವು. ==ಸೂರ್ಯ ಅಂ.ರಾ. ಟಿ20 ಶತಕ==ವರ್ಷವಿರುದ್ಧರನ್‌ಸ್ಥಳ2022ಇಂಗ್ಲೆಂಡ್‌117ನಾಟಿಂಗ್‌ಹ್ಯಾಮ್‌ 2022ನ್ಯೂಜಿಲೆಂಡ್‌111*ಮೌಂಟ್‌ ಮಾಂಗನ್ಯುಯಿ

2023ಶ್ರೀಲಂಕಾ112*ರಾಜ್‌ಕೋಟ್‌ 2023ದ.ಆಫ್ರಿಕಾ100ಜೋಹಾನ್ಸ್‌ಬರ್ಗ್‌===01ನೇ ಬ್ಯಾಟರ್‌ ದ.ಆಫ್ರಿಕಾದಲ್ಲಿ ಅಂ.ರಾ.ಟಿ20 ಶತಕ ಬಾರಿಸಿದ ಭಾರತದ ಮೊದಲ ಬ್ಯಾಟರ್‌ ಸೂರ್ಯ. ===ಗರಿಷ್ಠ ಸಿಕ್ಸರ್‌: ಕೊಹ್ಲಿ

ದಾಖಲೆ ಮುರಿದ ಸೂರ್ಯಅಂ.ರಾ. ಟಿ20ಯಲ್ಲಿ ಅತಿಹೆಚ್ಚು ಸಿಕ್ಸರ್‌ ಬಾರಿಸಿದ ಭಾರತೀಯ ಬ್ಯಾಟರ್‌ಗಳ ಪಟ್ಟಿಯಲ್ಲಿ ಸೂರ್ಯಕುಮಾರ್ 2ನೇ ಸ್ಥಾನಕ್ಕೇರಿದ್ದಾರೆ. ದ.ಆಫ್ರಿಕಾ ವಿರುದ್ಧ 8 ಸಿಕ್ಸರ್‌ ಸಿಡಿಸಿದ ಅವರು ತಮ್ಮ ಒಟ್ಟು ಸಿಕ್ಸರ್‌ಗಳ ಸಂಖ್ಯೆಯನ್ನು 123ಕ್ಕೆ ಹೆಚ್ಚಿಸಿಕೊಂಡಿದ್ದು, 117 ಸಿಕ್ಸರ್‌ ಬಾರಿಸಿರುವ ವಿರಾಟ್‌ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. ಜಾಗತಿಕ ಮಟ್ಟದಲ್ಲಿ ಸೂರ್ಯ ಜಂಟಿ 5ನೇ ಸ್ಥಾನದಲ್ಲಿದ್ದಾರೆ. ರೋಹಿತ್‌ 182 ಸಿಕ್ಸರ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.

PREV

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ವಯೋ ವಂಚನೆ ಪತ್ತೆಗೆ ಖಾಸಗಿ ಸಂಸ್ಥೆ ನೆರವುಪಡೆಯಲಿದೆ ಬಿಸಿಸಿಐ