ಥಾಯ್ಲೆಂಡ್‌ ಮಾಸ್ಟರ್ಸ್‌: ಅಶ್ಮಿತಾ ಸೆಮೀಸ್‌ಗೆ ಲಗ್ಗೆ

KannadaprabhaNewsNetwork |  
Published : Feb 03, 2024, 01:48 AM IST
ಪೋಟೋ ಟ್ವಿಟರ್‌ | Kannada Prabha

ಸಾರಾಂಶ

ಥಾಯ್ಲೆಂಡ್‌ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯ ಮಹಿಳಾ ಸಿಂಗಲ್ಸ್‌ನಲ್ಲಿ ಭಾರತದ ಅಶ್ಮಿತಾ ಛಲಿಹಾ ಸೆಮಿಫೈನಲ್‌ ತಲುಪಿದ್ದಾರೆ. ಆದರೆ ಪುರುಷರ ಸಿಂಗಲ್ಸ್‌ನಲ್ಲಿ ಮಿಥುನ್‌ ಮಂಜುನಾಥ್‌ ಸೋತು ಅಭಿಯಾನ ಅಂತ್ಯಗೊಳಿಸಿದ್ದಾರೆ.

ಬ್ಯಾಂಕಾಕ್‌: ಥಾಯ್ಲೆಂಡ್‌ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯ ಮಹಿಳಾ ಸಿಂಗಲ್ಸ್‌ನಲ್ಲಿ ಭಾರತದ ಅಶ್ಮಿತಾ ಛಲಿಹಾ ಸೆಮಿಫೈನಲ್‌ ತಲುಪಿದ್ದಾರೆ. ಆದರೆ ಪುರುಷರ ಸಿಂಗಲ್ಸ್‌ನಲ್ಲಿ ಮಿಥುನ್‌ ಮಂಜುನಾಥ್‌ ಸೋತು ಅಭಿಯಾನ ಅಂತ್ಯಗೊಳಿಸಿದ್ದಾರೆ.ಶುಕ್ರವಾರ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ 24ರ ಅಶ್ಮಿತಾ ಇಂಡೋನೇಷ್ಯಾದ ಈಸ್ಟೆರ್‌ ನುರುಮಿ ಅವರನ್ನು 21-14, 19-21, 21-13ರಿಂದ ಸೋಲಿಸುವ ಮೂಲಕ ಉಪಾಂತ್ಯಕ್ಕೆ ಲಗ್ಗೆ ಇಟ್ಟರು. ಇನ್ನು ಮಾಜಿ ವಿಶ್ವ ನಂ.1 ಕಿಂದಂಬಿ ಶ್ರೀಕಾಂತ್‌ರ ಸೋಲಿಸಿ ಕ್ವಾರ್ಟರ್‌ಗೇರಿದ್ದ ಮಿಥುನ್‌, ನೆದರ್‌ಲೆಂಡ್ಸ್‌ನ ಮಾರ್ಕ್‌ ಕಲ್‌ಜೋವ್‌ ವಿರುದ್ಧ 19-21, 15-21ರಿಂದ ಸೋತು ಹೊರಬಿದ್ದರು. ಉಳಿದಂತೆ ಡಬಲ್ಸ್‌ನಲ್ಲಿ ತ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್‌ ಅವರು ಇಂಡೋನೇಷ್ಯಾದ ಫೆಬ್ರಿನಾ- ಅಮಲಿಯಾ ಜೋಡಿಗೆ 12-21, 21-17, 21-23ರ ಅಂತರದಿಂದ ಶರಣಾದರು.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಐಪಿಎಲ್‌ : ಗ್ರೀನ್‌ಗೆ ₹25.2, ಪತಿರನಗೆ ₹18 ಕೋಟಿ ಜಾಕ್‌ಪಾಟ್‌
ಕಪ್‌ತುಳಿತ ತನಿಖಾ ವರದಿ ಹೈಕೋರ್ಟ್‌ ಪರಾಮರ್ಶೆಗೆ