14ರ ವೈಭವ್‌ ಶತಕದ ದಾಖಲೆ : ಟಿ20 ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ವಿಶ್ವದ ಅತಿ ಕಿರಿಯ

ಸಾರಾಂಶ

14 ವರ್ಷದ ಉದಯೋನ್ಮುಖ ಆಟಗಾರ ವೈಭವ್‌ ಸೂರ್ಯವಂಶಿ ಸೋಮವಾರದ ಗುಜರಾತ್‌ ಟೈಟಾನ್ಸ್‌ ವಿರುದ್ಧ ಕೇವಲ 35 ಎಸೆತಗಳಲ್ಲೇ ಶತಕ ಬಾರಿಸಿ, ಹಲವು ದಾಖಲೆಗಳನ್ನು ಬರೆದಿದ್ದಾರೆ

ಜೈಪುರ: 14 ವರ್ಷದ ಉದಯೋನ್ಮುಖ ಆಟಗಾರ ವೈಭವ್‌ ಸೂರ್ಯವಂಶಿ ಸೋಮವಾರದ ಗುಜರಾತ್‌ ಟೈಟಾನ್ಸ್‌ ವಿರುದ್ಧ ಕೇವಲ 35 ಎಸೆತಗಳಲ್ಲೇ ಶತಕ ಬಾರಿಸಿ, ಹಲವು ದಾಖಲೆಗಳನ್ನು ಬರೆದಿದ್ದಾರೆ. ಅವರು ಟಿ20 ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ವಿಶ್ವದ ಅತಿ ಕಿರಿಯ ಆಟಗಾರ. ಅಲ್ಲದೆ ಐಪಿಎಲ್‌ನಲ್ಲಿ 2ನೇ ಅತಿ ವೇಗದ ಸೆಂಚುರಿ ದಾಖಲೆಯನ್ನೂ ಬರೆದಿದ್ದಾರೆ.

ವೈಭವ್ 38 ಎಸೆತಗಳಲ್ಲಿ 7 ಬೌಂಡರಿ, 11 ಸಿಕ್ಸರ್‌ಗಳೊಂದಿಗೆ 101 ರನ್‌ ಸಿಡಿಸಿ ಔಟಾದರು. ಐಪಿಎಲ್‌ನಲ್ಲಿ ಅತಿ ವೇಗದ ಶತಕದ ದಾಖಲೆ ಇರುವುದು ಕ್ರಿಸ್‌ ಗೇಲ್‌ ಹೆಸರಿನಲ್ಲಿ. ಅವರು 30 ಎಸೆತಗಳಲ್ಲೇ ಈ ಸಾಧನೆ ಮಾಡಿದ್ದರು.

ಅತಿ ಕಿರಿಯ: ವೈಭವ್ ಟಿ20 ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಅತಿ ಕಿರಿಯ. ಅವರಿಗೆ ಈಗ 14 ವರ್ಷ, 32 ದಿನ ವಯಸ್ಸು. 2013ರಲ್ಲಿ ಮಹಾರಾಷ್ಟ್ರದ ವಿಜಯ್‌ ತಮಗೆ 18 ವರ್ಷ 118 ದಿನಗಳಾಗಿದ್ದಾಗ ಮುಂಬೈ ವಿರುದ್ಧ ಶತಕ ಬಾರಿಸಿದ್ದರು.

11 ಸಿಕ್ಸರ್‌

ವೈಭವ್ 11 ಸಿಕ್ಸರ್‌ ಸಿಡಿಸಿದರು. ಇದು ಐಪಿಎಲ್‌ ಇನ್ನಿಂಗ್ಸ್‌ನಲ್ಲಿ ಭಾರತೀಯ ಬ್ಯಾಟರ್‌ಗಳ ಪೈಕಿ ಜಂಟಿ ಗರಿಷ್ಠ. ಮುರಳಿ ವಿಜಯ್‌ ಕೂಡಾ 2011ರಲ್ಲಿ 11 ಸಿಕ್ಸರ್‌ ಸಿಡಿಸಿದ್ದರು.

Share this article