ಐಪಿಎಲ್‌ಗೂ ಮುನ್ನ ಆರ್‌ಸಿಬಿ ಕ್ಯಾಂಪ್‌ ಸೇರಿದ ಕಿಂಗ್‌ ಕೊಹ್ಲಿ

KannadaprabhaNewsNetwork |  
Published : Mar 19, 2024, 12:50 AM ISTUpdated : Mar 19, 2024, 11:34 AM IST
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೊಹ್ಲಿ | Kannada Prabha

ಸಾರಾಂಶ

ವಿರಾಟ್‌ ಭಾನುವಾರ ವಿದೇಶದಿಂದ ಭಾರತಕ್ಕೆ ಮರಳಿದ್ದರು. ಸೋಮವಾರ ನಗರದ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸಿ ಸಹ ಆಟಗಾರರನ್ನು ಕೂಡಿಕೊಂಡರು ಮೈದಾನದಲ್ಲಿ ಕೆಲ ಹೊತ್ತು ಫುಟ್ಬಾಲ್‌ ಆಡಿದರು.

ಬೆಂಗಳೂರು: ದೀರ್ಘ ಸಮಯದಿಂದ ಕ್ರಿಕೆಟ್‌ನಿಂದ ದೂರ ಉಳಿದಿರುವ ತಾರಾ ಆಟಗಾರ ವಿರಾಟ್‌ ಕೊಹ್ಲಿ 17ನೇ ಆವೃತ್ತಿ ಐಪಿಎಲ್‌ಗೂ ಮುನ್ನ ಆರ್‌ಸಿಬಿ ತಂಡವನ್ನು ಕೂಡಿಕೊಂಡಿದ್ದಾರೆ. 

ಭಾನುವಾರ ವಿದೇಶದಿಂದ ಭಾರತಕ್ಕೆ ಮರಳಿದ್ದ ವಿರಾಟ್‌ ಸೋಮವಾರ ನಗರದ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸಿ ಸಹ ಆಟಗಾರರನ್ನು ಕೂಡಿಕೊಂಡರು. 

ಅವರು ಮೈದಾನದಲ್ಲಿ ಕೆಲ ಹೊತ್ತು ಫುಟ್ಬಾಲ್‌ ಆಡಿದರು. ಅವರ ಜೊತೆ ನಾಯಕ ಫಾಫ್ ಡು ಪ್ಲೆಸಿ ಕೂಡಾ ಮೈದಾನದಲ್ಲಿ ಕಾಣಿಸಿಕೊಂಡರು.

ಇನ್ನು ತಾರಾ ವೇಗಿ ಮೊಹಮದ್‌ ಸಿರಾಜ್‌ ಕೂಡಾ ಭಾನುವಾರ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಸುಮಾರು ಒಂದು ತಿಂಗಳ ಅಂತರದ ಬಳಿ ವಿರಾಟ್‌ ಕೊಹ್ಲಿ ಭಾನುವಾರ ಭಾರತಕ್ಕೆ ಮರಳಿದ್ದರು. 

ಎರಡನೇ ಮಗು ಅಕಾಯ್‌ ಜನನ ಹಿನ್ನೆಲೆಯಲ್ಲಿ ಪತ್ನಿ ಅನುಷ್ಕಾ ಶರ್ಮಾ ಜೊತೆಗೆ ಲಂಡನ್‌ನಲ್ಲಿದ್ದ ವಿರಾಟ್‌ ಮತ್ತೆ ತವರಿಗೆ ಬಂದಿದ್ದಾರೆ. ಮಗು ಹುಟ್ಟಿದ ಬಳಿಕ ಇದೇ ಮೊದಲ ಬಾರಿಗೆ ವಿರಾಟ್‌ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದಾರೆ. 

ಕೊಹ್ಲಿ ಕೊನೆಯ ಬಾರಿಗೆ ಜನವರಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ ಟಿ20 ಸರಣಿಯಲ್ಲಿ ಆಡಿದ್ದರು. ಆ ಬಳಿಕ ಅವರು ಕ್ರಿಕೆಟ್‌ ಆಡಿಲ್ಲ. ಸದ್ಯ ಆರ್‌ಸಿಬಿ ಕ್ಯಾಂಪ್‌ ಸೇರಿಕೊಂಡಿರುವ ಅವರು, ಐಪಿಎಲ್‌ ಮೂಲಕ ಆರ್‌ಸಿಬಿ ಪರ ಅಬ್ಬರಿಸುವ ನಿರೀಕ್ಷೆಯಲ್ಲಿದ್ದಾರೆ.

PREV

Recommended Stories

5ನೇ ಟೆಸ್ಟ್‌ನಲ್ಲಿ ಟೀಂ ಇಂಡಿಯಾಗೆ 6 ರನ್‌ ಅತಿ ರೋಚಕ ಗೆಲುವು
ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !